ಭಾರತದಲ್ಲಿ ಹರಡುತ್ತಿದೆ ಮತ್ತೊಂದು ಮಹಾಮಾರಿ; ಕೊರೊನಾ ನಡುವೆಯೇ ಹೊಸ ವೈ’ರಸ್ ಲಗ್ಗೆ

0
245

ಭಾರತ ಸೇರಿದಂತೆ ವಿಶ್ವಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಭೀಕರತೆ ನಡುವೆಯೇ ಇದೀಗ ಮತ್ತೊಂದು ಮಹಾಮಾರಿ ವೈರಸ್ ಪತ್ತೆಯಾಗಿದೆ. ಕ್ಯಾಟ್ ಕ್ಯೂ ವೈರಸ್ ಎಂಬ ಹೊಸ ವೈರಸ್ ಚೀನಾದಿಂದ ಭಾರತದಲ್ಲೂ ಲಗ್ಗೆಯಿಟ್ಟಿದ್ದು, ಕೊರೊನಾ ಸೋಂಕಿನಿಂದಾಗಿ ತತ್ತರಿಸಿರುವ ಭಾರತಕ್ಕೆ ಹೊಸ ವೈರಸ್ ಇನ್ನಷ್ಟು ಆಘಾತವನ್ನುಂಟುಮಾಡಿದೆ. ಅದೂ ಕೂಡ ಕರ್ನಾಟಕದ ಇಬ್ಬರಲ್ಲಿ ಈ ವೈರಸ್ ಪತ್ತೆಯಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಇನ್ನೂ ಔಷಧ ಸಿದ್ಧವಾಗಿಲ್ಲ. ಈ ಹೊತ್ತಲ್ಲೇ ಇನ್ನೊಂದು ವೈರಸ್ ಹರಡುತ್ತಿರುವುದು ನಿಜಕ್ಕೂ ಆತಂಕವನ್ನು ಹೆಚ್ಚಿಸುವ ವಿಷಯ.

ಕೊರೊನಾ ಸೋಂಕನ್ನು ಪ್ರಪಂಚಕ್ಕೆ ಹಬ್ಬಿಸಿದ್ದ ಚೀನಾದಿಂದಲೇ ಈ ಕ್ಯಾಟ್ ಕ್ಯೂ ವೈರಸ್ ಕೂಡ ಹರಡುತ್ತಿದೆ ಎಂಬುದು ಮತ್ತೊಂದು ವಿಚಾರ. ಕೊರೊನಾ ನಡುವೆ ಈ ಹೊಸ ವೈರಸ್ ಭಾರತದಲ್ಲಿ ಇನ್ನಷ್ಟು ರೋಗಗಳನ್ನು ತರಲಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂ ಆರ್) ಎಚ್ಚರಿಕೆ ನೀಡಿದೆ.

ಈಗಗಾಲೇ ಚೀನಾ ಹಾಗೂ ವಿಯೆಟ್ನಾಂಗಳಲ್ಲಿ ಈ ಹೊಸ ಕ್ಯಾಟ್‌ ಕ್ಯೂ ವೈರಸ್‌ (ಸಿಕ್ಯೂವಿ) ನಿಂದಾಗಿ ಹಲವರು ಬಳಲುತ್ತಿದ್ದಾರೆ. ಸೊಳ್ಳೆ ಮೂಲಕವಾಗಿ ಹರಡುವ ಈ ವೈರಸ್ ತೀವ್ರವಾದ ರೋಗಗಳನ್ನು ತರಬಲ್ಲದು. ಕ್ಯುಲೆಕ್ಸ್ ಎಂಬ ಸೊಳ್ಳೆ ಹಂದಿಗಳಿಗೆ ಕಚ್ಚಿ ಬಳಿಕ ಮಾನುಷ್ಯನಿಗೆ ಕಚ್ಚಿದರೆ ಈ ವೈರಸ್ ಹರಡಲಿದೆ. ಹಾಗಾಗಿ ಸೊಳ್ಳೆಗಳ ಬಗ್ಗೆ ಹುಷಾರಾಗಿರುವುದು ಒಳಿತು.

ಭಾರತದಲ್ಲಿಯೂ ವೈರಸ್ ಪತ್ತೆ:

ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ, ಐಸಿಎಂಆರ್‌ ನಡೆಸಿರುವ ಅಧ್ಯಯನದಲ್ಲಿ ಭಾರತದಲ್ಲಿ ಕೂಡ ಸಿಕ್ಯೂವಿ ಅಥವಾ ಕ್ಯಾಟ್ ಕ್ಯೂ ವೈರಸ್ ಪತ್ತೆಯಾಗಿದೆ. ಹೌದು. ಭಾರತದ ವಿವಿಧ ರಾಜ್ಯಗಳಲ್ಲಿ ನಡೆಸಿರುವ 883 ಜನರ ಸಿಕ್ಯೂವಿ ಸ್ಯಾಂಪಲ್ ಟೆಸ್ಟ್ ನಲ್ಲಿ ಕರ್ನಾಟಕದ ಇಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ. ಇಬ್ಬರಲ್ಲಿ ಈ ವೈರಾಣುವಿನ ಪ್ರತಿಕಾಯಗಳ(Anti-bodies) ಉಪಸ್ಥಿತಿ ಕಂಡುಬಂದಿದೆ. ಅಂದರೆ ಈ ಇಬ್ಬರಲ್ಲಿ ಸೋಂಕು ಬಂದು ಹೋಗಿದ್ದರ ಕುರುಹು ಪತ್ತೆಯಾಗಿದೆ. 2014ರಲ್ಲಿ ಹಾಗೂ 2017ರಲ್ಲಿ ಈ ಇಬ್ಬರಲ್ಲಿ ಸೋಂಕು ಬಂದಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ದೇಶದಲ್ಲಿ ಇನ್ನಷ್ಟು ಜನರಲ್ಲಿ ಈ ಸಿಕ್ಯೂವಿ ವೈರಸ್ ಇರುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಐಸಿಎಂ ಆರ್ ಹಲವರನ್ನು ಸ್ಯಾಂಪಲ್ ಟೆಸ್ಟ್ ಗೆ ಒಲಪಡಿಸಿದೆ.

ಸಿಕ್ಯೂವಿ ವೈರಸ್ ರೋಗ ಲಕ್ಷಣ:

ಕ್ಯಾಟ್ ಕ್ಯೂ ವೈರಸ್ ಕೊರೊನಾ ಸೋಂಕಿನಂತೆಯೇ ಮಾರಕ ವೈರಸ್ ಆಗಿದೆ. ಈ ಸೋಂಕು ಇರುವವರಲ್ಲಿ ಮೆದುಳು ಜ್ವರ, ಮೆದುಳು ಪೊರೆಯಲ್ಲಿ ಊತ, ಉಸಿರಾಟದ ತೊಂದರೆ, ಎದೆ ನೋವು, ಎಂಜಲು ಅಥವಾ ಯಾವುದೇ ಪದಾರ್ಥಗಳನ್ನು ನುಂಗಲು ತೊಂದರೆ ಮೊದಲಾದ ತೀವ್ರತರನಾದ ಸಮಸ್ಯೆಗಳಿಂದ ಬಳಲುತ್ತಾರೆ.

LEAVE A REPLY

Please enter your comment!
Please enter your name here