ಈ ಊರಿನಲ್ಲಿ ಮುಸ್ಲಿಮರಿಲ್ಲ ಆದರೂ ಪಾಳುಬಿದ್ದ ಹಳೆಯ ಮಸೀದಿಯನ್ನು ಸಿಖ್ಖರು ರಕ್ಷಿಸುತ್ತಿದ್ದಾರೆ

0
207

ಪಂಜಾಬಿನ ಲುಧಿಯಾನದ ಮಚಿವರ ತೆಹಸಿಲ್‌‌ನ ಹೆಡೊನ್ ಬೆಟ್ ಎಂಬ ಹಳ್ಳಿಯೊಂದರಲ್ಲಿ ಮುಸ್ಲಿಮರ ನೂರು ವರ್ಷ ಹಳೆಯದಾದ ಮಸೀದಿಯೊಂದನ್ನು ಸಿಖ್ಖ್ ಧರ್ಮೀಯರು ಸಂರಕ್ಷಿಸುತ್ತಾ ಬಂದಿರುವುದು ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಇಲ್ಲ. ಆದರೆ 1920 ರಲ್ಲಿ ನಿರ್ಮಿಸಲಾದ ಹಳೆಯ ಕಾಲದ ಮಸೀದಿಯೊಂದಿದೆ. ಗ್ರಾಮದ ಹಿರಿಯರು ಈ ಮಸೀದಿಯ ಸಂರಕ್ಷಣೆ ಮಾಡುತ್ತಾ ಬಂದಿದ್ದಾರೆ. ಹಲವಾರು ಅತಿಕ್ರಮಣ ಕಾರರು ವಕ್ಫ್ ಬೋರ್ಡ್‌ಗೆ ಸೇರಿದ ಈ ಮಸೀದಿಯ ಜಾಗವನ್ನು ಅತಿಕ್ರಮಿಸಲು ಬಂದರೂ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟು ಹೋಗಿದ್ದಾರೆ.

ಗ್ರಾಮದ ಹಿರಿಯರು ಈ ಮಸೀದಿಯನ್ನು ಕೆಡವಲು ಯಾವುದೇ ಕಾರಣಕ್ಕೂ ಒಪ್ಪುತ್ತಿಲ್ಲ. ಏಕೆಂದರೆ ಇದು ದೇವರ ಮನೆ ಎಂದು ಅವರು ನಂಬಿದ್ದಾರೆ ಎಂದು ಗ್ರಾಮದ ಸರ್‌ಪಂಚ್ ಆಗಿರುವ ಗುರ್ಪಾಲ್ ಸಿಂಗ್ ಹೇಳಿದ್ದಾರೆ. ಹಿರಿಯರ ಮಾತನ್ನು ಕೇಳಿ ಇದೀಗ ಯುವಕರೂ ಕೂಡ ಮಸೀದಿಯನ್ನು ಯಾವುದೇ ಕಾರಣಕ್ಕೂ ಕೆಡವಲು ಬಿಡಲ್ಲ ಎಂದು ಸಂರಕ್ಷಣೆಗೆ ನಿಂತಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ಈ ಊರಿನಲ್ಲಿ ಮುಸ್ಲಿಮರು ಇದ್ದರು. ಹೊಸ ದೇಶ ಪಾಕಿಸ್ತಾನದ ರಚನೆಯಾದಾಗ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು.

ಆ ನಂತರ ಈ ಮಸೀದಿ ಆರಾಧನೆಗೆ ಜನರಿಲ್ಲದ ಕಾರಣ ಪಾಳುಬಿದ್ದಿದೆ. ಇಲ್ಲಿ ಮುಸ್ಲಿಮರು ಬಿಟ್ಟು ಹೋದ ಅನೇಕ ಸಂಪತ್ತಿನ ಜೊತೆ ಈ ಮಸೀದಿಯೂ ಕೂಡ ವಕ್ಫ್ ಪಾಲಾಗಿದೆ. ರಾಜಕಾರಣಿಗಳ ಬೆಂಬಲದೊಂದಿಗೆ ಕೆಲವು ವಕ್ಫ್ ಆಸ್ತಿಗಳನ್ನು ಈಗಾಗಲೇ ಸುಂಗುಬಾಕರು ನುಂಗಿಹಾಕಿದ್ದಾರಾದರೂ ಈ ಮಸೀದಿಯನ್ನು ಮಾತ್ರ ಅವರಿಗೆ ಮುಟ್ಟಲೂ ಸಾಧ್ಯವಾಗುತ್ತಿಲ್ಲ.

LEAVE A REPLY

Please enter your comment!
Please enter your name here