ದಿನನಿತ್ಯ ನಾವು ನಮ್ಮ ಮೊಬೈಲ್ ಬಿಟ್ಟು ಎಲ್ಲೂ ಹೋಗುವುದಿಲ್ಲ. ಟಾಯ್ಲೆಟ್ ಗೆ ಹೋದರೂ ಸಹ ಕೆಲವರು ಮೊಬೈಲ್ ಇಲ್ಲದೇ ಹೋಗುವುದಿಲ್ಲ ಎಂಬ ಪರಿಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಈ ರೀತಿ ಮೊಬೈಲ್ ನಿಂದ ಬರುವ ಮಾರಕ ರೋಗದ ಬಗ್ಗೆ ಸಂಶೋದನೆಯೊಂದು ತಿಳಿಸಿದೆ. ಹೌದು, ಸೈಬರ್ ಮೀಡಿಯಾ ರಿಸರ್ಚ್ (ಸಿಎಮ್ಆರ್) ಸಂಶೋಧನಾ ವರದಿಯು ಪ್ರತಿಯೊಬ್ಬ ಭಾರತೀಯ ವ್ಯಕ್ತಿ ವರ್ಷದ 1800 ಗಂಟೆಗಳ ಮೊಬೈಲ್ಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಹೇಳುತ್ತದೆ. ಅಂದರೆ ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಮೊಬೈಲ್ ಫೋನ್ಗಳ ಚಟವು ಬಹಳ ಹೆಚ್ಚು ಎನ್ನಲಾಗಿದ್ದು, ಕೆಲವರಲ್ಲಿ ಸ್ಮಾರ್ಟ್ಫೋನ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ.
73%ರಷ್ಟು ಜನರು ಸ್ಮಾರ್ಟ್ಫೋನ್ ಬೆಳೆದ ರೀತಿ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂಬುದು ಸತ್ಯ. ನಾಲ್ವರಲ್ಲಿ ಒಬ್ಬರು ಸ್ಮಾರ್ಟ್ಫೋನ್ಗಳ ಬಳಕೆಯ ದೈಹಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ದುರ್ಬಲ ದೃಷ್ಟಿ, ಕಣ್ಣಿನಲ್ಲಿ ಆಗಾಗ್ಗೆ ನೀರು ಬರುವುದು, ತಲೆನೋವು ಮತ್ತು ನಿದ್ರಾಹೀನತೆಯಂತಹ ಕಾಯಿಲೆಗಳಿಂದ ಹೆಚ್ಚಿನ ಜನರಿಗೆ ಸಮಸ್ಯೆ ಉಂಟಾಗಿರುವ ಬಗ್ಗೆ ಸ್ಪಷ್ಟವಾಗಿ ವರದಿಯಲ್ಲಿ ತಿಳಿಸಲಾಗಿದೆ.
ಐದು ಜನರಲ್ಲಿ ನಾಲ್ವರು ಮಲಗುವ ಮುನ್ನ ಫೋನ್ ನೋಡುತ್ತಾರೆ ಮತ್ತು ಎಚ್ಚರವಾದ ಬಳಿಕವೂ ಅವರು ಮೊದಲು ಫೋನ್ ನೋಡುವ ಅಭ್ಯಾಸ ಹೊಂದಿದ್ದಾರೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. 74 ಪ್ರತಿಶತದಷ್ಟು ಜನರು ಎದ್ದ 30 ನಿಮಿಷಗಳು ಅವರು ಮೊದಲು ಫೋನ್ ನೋಡುತ್ತಾರೆ ಎಂದು ಹೇಳಿದ್ದಾರೆ.
ಸಂತೋಷದ ಜೀವನವನ್ನು ನಡೆಸಲು ಮೊಬೈಲ್ನ ಕಡಿಮೆ ಬಳಕೆ ಅಗತ್ಯ ಎಂದು ಐದು ಜನರಲ್ಲಿ ಮೂವರು ಒಪ್ಪಿಕೊಂಡಿದ್ದಾರೆ. ಈ ಮೊಬೈಲ್ ನಿಂದ ನಮ್ಮ ಸಂಬಂಧಗಳು ಸಹ ದೂರ ಸರಿಯುತ್ತಿದ್ದು, ಕುಟುಂಬ ಜೀವನ ಬಿರುಕು ಮೂಡುತ್ತಿದೆ. ಈಗಲಾದರೂ ಕುಟುಂಬದೊಂದಿಗೆ ನಮ್ಮ ಅತಿಯಾದ ಮೊಬೈಲ್ ಬಳಕೆಯನ್ನು ಬದಿಗಿಟ್ಟು ಜೀವನ ನಡೆಸೋಣ. ಎಲ್ಲರೊಂದಿಗೂ ಸ್ನೇಹಯುತವಾಗಿ ವರ್ತಿಸೋಣ.