ಅಮೇರಿಕಾದ ನೆರೆ ಸಂತ್ರಸ್ಥರಿಗೆ ಮೋದಿ ಸಾಂತ್ವನ, ಆದ್ರೆ ಕನ್ನಡಿಗರು ನೆನಪಾಗಲಿಲ್ಲವೇಕೆ..?!

0
151

ಇತ್ತೀಚೆಗೆ ಅಮೇರಿಕಾದ ಹೌಸ್ಟನ್ ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರವಾಹ ಸಂತ್ರಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಆದರೆ ತಮಗೆ ಮತ ಚಲಾಯಿಸಿದ ಕನ್ನಡಿಗರನ್ನು ಇನ್ನು ನೆನಪಿಸಿಕೊಂಡಿಲ್ಲ. ಕರ್ನಾಟಕದ ಪ್ರವಾಹ ಸಂತ್ರಸ್ತರ ಬಗ್ಗೆ ಒಂದು ಶಬ್ದವನ್ನೂ ಮಾತನಾಡಲಿಲ್ಲ, ರಾಜ್ಯಕ್ಕೆ ಬರಲಿಲ್ಲ, ಸಂತ್ರಸ್ತರಿಗೆ ಸಾಂತ್ವನ ಹೇಳಲಿಲ್ಲ.

ಹೌದು, ಕರ್ನಾಟಕದ ಎಲ್ಲ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ಆದರು ಪ್ರಧಾನಿ ಇತ್ತ ಸುಳಿಯುತ್ತಿಲ್ಲ. ಜನ ವಿರೋಧಿ ನೀತಿಯನ್ನೇ ಬಿಜೆಪಿ ಒಳಗೊಂಡಿದೆ. ಚುನಾವಣೆ ವೇಳೆಯಲ್ಲಿ ರಾಜ್ಯಕ್ಕೆ ಆಗಮಿಸಿ ಅಬ್ಬರದ ಭಾಷಣ ಮಾಡುವ ಪ್ರಧಾನಿಗಳು ನಂತರ ಇತ್ತ ಸುಳಿಯುವುದೇ ಇಲ್ಲ. ಇನ್ನು ರಾಜ್ಯದ 25 ಸಂಸದರು ಮೋದಿ ಮತ್ತು ಅಮಿತ್ ಶಾ ಮುಂದೆ ನಿಂತು ಮಾತನಾಡುವ ಕನಿಷ್ಠ ಧೈರ್ಯವನ್ನು ತೋರುತ್ತಿಲ್ಲ. ಇದು ಕನ್ನಡಿಗರ ದುರಾದೃಷ್ಟ.

ನೆರೆ ಪರಿಹಾರ ವಿಷಯವಾಗಿ ರಾಜ್ಯ ಸರ್ಕಾರ ಸಾಕಷ್ಟು ಮನವಿಗಳನ್ನು ಸಲ್ಲಿಸಿದರು ಕೇಂದ್ರ ಸರ್ಕಾರ ಮಾತ್ರ ರಾಜ್ಯಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ಥರು ಮನೆ-ಮಠ ಕಳೆದುಕೊಂಡು ಇಂದಿಗೂ ಬೀದಿಗಳಲ್ಲೇ ವಾಸಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ನೀಡಿದ ಯಾವ ಭರವಸೆಗಳು ಈಡೇರಿಲ್ಲ. ಸಿಎಂ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಅಮೇರಿಕಾದ ನೆರೆ ಸಂತ್ರಸ್ಥರು ನೆನಪಾಗುತ್ತಾರೆ, ಆದರೆ ಕನ್ನಡಿಗರಾದ ನಾವು ನೆನಪಾಗುವುದಿಲ್ಲವೇಕೆ..? ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಉತ್ತರ ‘ನಾವು ಮೋದಿಗೆ ಮತ ಚಲಾಯಿಸಿದ್ದೇವೆ.. ಮುಂದೆ ಚಲಾಯಿಸುತ್ತೇವೆ.. ಎಂಬ ಭರವಸೆ..ಅಷ್ಟೇ..’

LEAVE A REPLY

Please enter your comment!
Please enter your name here