ಜಮ್ಮುಕಾಶ್ಮೀರ-ಲಡಾಕ್‌ನಲ್ಲಿ ಭೂಮಿ ಖರೀದಿಗೆ ಅವಕಾಶ ಕೊಟ್ಟ ಮೋದಿ ಸರ್ಕಾರ..!

0
68

ಸಂವಿಧಾನದ ೩೭೦ನೇ ವಿಧಿ ರದ್ದುಕೊಂಡ ನಂತರ ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಭೂ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಈ ತಿದ್ದುಪಡಿಯ ಮೂಲಕ ಜಮ್ಮುಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ರಾಜ್ಯದ ಭಾರತೀಯರು ಭೂಮಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಜಮ್ಮುಕಾಶ್ಮೀರ ಮತ್ತು ಲಡಾಖ್ಗೆ ಭೂ ಕಾನೂನಿಗೆ ಸಂಬAಧಿಸಿದ ಅಧಿಸೂಚನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಕಾನೂನು ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದ ನಂತರ ಈಗ ಯಾವುದೇ ಭಾರತೀಯರು ಕಾಶ್ಮೀರ ಮತ್ತು ಲಡಾಖ್ನಲ್ಲಿ ಭೂಮಿಯನ್ನು ಖರೀದಿಸಬಹುದು. ಅಲ್ಲಿ ಮನೆ ನಿರ್ಮಿಸಿಕೊಳ್ಳಬಹುದು, ವ್ಯವಸಾಯ ಮಾಡಬಹುದು ಅಥವಾ ಉದ್ಯಮವನ್ನು ಸ್ಥಾಪಿಸಬಹುದು. ಆದರೆ ೩೭೦ನೇ ವಿಧಿ ಇದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಲು ಕಾಶ್ಮೀರದ ಪ್ರಜೆಯಾಗಬೇಕೆಂಬ ನಿಯಮವಿತ್ತು. ಈಗ ಈ ನಿಯಮವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬAಧಿಸಿದ ಹೊಸ ಭೂ ಸುಧಾರಣಾ ಕಾನೂನಿನಡಿ ಕೇಂದ್ರ ಈ ಆದೇಶ ಹೊರಡಿಸಿದೆ.

೩೭೦ನೇ ವಿಧಿಯ ಪ್ರಕಾರ ಇದ್ದ ಕಾನೂನು ಏನು ಗೊತ್ತಾ ?
೩೭೦ನೇ ವಿಧಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ನಿವಾಸಿಯಲ್ಲದ ವ್ಯಕ್ತಿಗೆ ಸ್ಥಿರವಾದ ಆಸ್ತಿಯನ್ನು ಖರೀದಿಸುವ ಹಕ್ಕು ಇರಲಿಲ್ಲ. ಕಾಶ್ಮೀರದ ನಿವಾಸಿಯಲ್ಲದ ವ್ಯಕ್ತಿ ಸ್ಥಿರಾಸ್ತಿಯನ್ನು ಖರೀಸಿದರು ಅದು ಕಾನೂನಿನ ಪ್ರಕಾರ ಮಾನ್ಯವಾಗುತ್ತಿರಲಿಲ್ಲ. ಹೀಗಾಗಿ ಇತರ ರಾಜ್ಯದವರು ಕಾಶ್ಮೀರದಲ್ಲಿ ಯಾವುದೇ ಭೂಮಿ ಖರೀದಿಗೆ ಮುಂದಾಗುತ್ತಿರಲಿಲ್ಲ. ಆದರೆ ಈಗ ಕೇಂದ್ರವು ಭೂ ಖರೀದಿಗೆ ಸಂಬAಧಿಸಿದ ಕಾನೂನುಗಳನ್ನು ಬದಲಾಯಿಸಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಹೊರಗಿನ ನಿವಾಸಿಯೂ ಇಲ್ಲಿ ಭೂಮಿಯನ್ನು ಖರೀದಿಸಬಹುದು. ಕಳೆದ ವರ್ಷ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಮತ್ತು ಆರ್ಟಿಕಲ್ ೩೫-ಎ ಅನ್ನು ತೆಗೆದುಹಾಕುವ ಮೊದಲು ಭೂಮಿ ಖರೀದಿಗೆ ಅವಕಾಶ ಇರಲಿಲ್ಲ.

ಜಮ್ಮುಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಗಳ ಭೂ ಕಾನೂನು ತಿದ್ದುಪಡಿಯಲ್ಲಿ ಅನೇಕ ನಿಬಂಧನೆಗಳನ್ನು ಕೇಂದ್ರ ಸರ್ಕಾರ ವಿಧಿಸಿದೆ. ಈ ತಿದ್ದುಪಡಿ ಅನ್ವಯ ಕೃಷಿ ಭೂಮಿಯನ್ನು ಖರೀದಿಸಲು ಸರಕಾರ ನಿರ್ಬಂಧ ಹೇರಿದೆ. ಸಾಗುವಳಿ ಮಾಡಿದ ಭೂಮಿಯನ್ನು ಯಾವುದೇ ಕೃಷಿ ಮಾಡದ ವ್ಯಕ್ತಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಆದರೆ ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿ ಖರೀದಿಗೆ ಅನುಮತಿಸಲು ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

ಇನ್ನು ಮೋದಿ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವನ್ನು ಜಮ್ಮುಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ವಿರೋಧಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಒಮರ್ ಅಬ್ದುಲಾ ಜಮ್ಮು ಮತ್ತು ಕಾಶ್ಮೀರದ ಭೂ ಕಾನೂನುಗಳಲ್ಲಿ ಮಾಡಿದ ಬದಲಾವಣೆಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಇದರಿಂದ ಕಾಶ್ಮೀರಿಗಳ ಹಕ್ಕುಗಳಿಗೆ ಧಕ್ಕೆಯುಂಟಾಗಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here