ಮೋದಿ ಹುಟ್ಟು ಹಬ್ಬದ ಹೆಸರಲ್ಲಿ ಜನಸಾಮಾನ್ಯರಿಗೆ ಟೋಪಿ ಹಾಕಿದ ಬಿಜೆಪಿಗರು..!

0
544

ನಿನ್ನೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೇಶಾದ್ಯಂತ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಮೋದಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಆದರೆ ಮೈಸೂರಿನಲ್ಲಿ ಮಾತ್ರ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಮೋದಿ ಹುಟ್ಟು ಹಬ್ಬದ ಹೆಸರಿನಲ್ಲಿ ಜನಸಾಮಾನ್ಯರಿಗೆ ಟೋಪಿ ಹಾಕಿದ ಘಟನೆಯೊಂದು ನಡೆದಿದೆ.

ಹೌದು, ಸೆಪ್ಟಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುತ್ತ ಉಚಿತವಾಗಿ ಡಿಎಲ್ (ಚಾಲನಾ ಪರವಾನಗಿ) ನೀಡುವ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ದಾಖಲೆಗಳೊಂದಿಗೆ ಬಂದು ಉಚಿತವಾಗಿ ಡಿಎಲ್ ಪಡೆದುಕೊಳ್ಳಬಹುದೆಂದು ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನಸಾಮಾನ್ಯರು ಡಿಎಲ್ ಪಡೆಯುವುದಕ್ಕಾಗಿ ತಮ್ಮ ಒಂದು ದಿನದ ಕೆಲಸ-ಕಾರ್ಯಗಳನ್ನು ಬಿಟ್ಟು ಮೇಳಕ್ಕೆ ಆಗಮಿಸಿದ್ದರು. ಆದರೆ ಅಚ್ಚರಿ ಎಂದರೆ ಅಸಲಿಗೆ ಅಲ್ಲಿ ಡಿಎಲ್ ನೀಡುವ ಯಾವ ಮೇಳವೂ ಇರಲಿಲ್ಲ.

ಶಾಸಕ ರಾಮದಾಸ್ ಹೆಸರಿನಲ್ಲಿ ದಾಖಲೆಗಳನ್ನು ಪಡೆದುಕೊಂಡು ಸುಮ್ಮನೆ ಎಸೆಯಲಾಗಿತ್ತು. ಈ ವಿಷಯ ತಿಳಿದ ಸಾರ್ವಜನಿಕರು ಬಿಜೆಪಿ ನಾಯಕರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ತಪ್ಪು ಮಾಹಿತಿ ನೀಡಿ ಇಲ್ಲಿಗೆ ಬರುವಂತೆ ಮಾಡಿದ್ದಾರೆ. ಇಲ್ಲಿ ನೋಡಿದ್ರೆ, ಯಾವ ಡಿಎಲ್ ಮೇಳವೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರು ಜನರನ್ನು ಸೇರಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here