೩೭೦ ರದ್ದತಿಯ ಬಳಿಕ ‘ಮೋದಿ ಮಾತು’, ಕಾಶ್ಮೀರಕ್ಕೆ ಮೋದಿ ಘೋಷಿಸಿದ ಭರ್ಜರಿ ಯೋಜನೆಗಳೇನು ಗೊತ್ತಾ…?!

0
113

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ಶ್ಯಾಮ್ ಪ್ರಕಾಶ್ ಮುಖರ್ಜಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ೩೭೦ ವಿಧಿ ರದ್ದುಗೊಳ್ಳುವ ಮೂಲಕ ನನಸಾಗಿದೆ. ಹೀಗಾಗಿ ನಾನು ಲಡಾಖ್ ಮತ್ತು ಕಾಶ್ಮೀರದ ಜನತೆಗೆ ಧನ್ಯವಾದಗಳನ್ನು ಹೇಳ ಬಯಸುತ್ತೇನೆ ಎಂದರು.

ಇನ್ನು ಕಾಶ್ಮೀರಕ್ಕೆ ಭಾರತ ನೀಡಿದ್ದ ೩೭೦ ವಿಧಿಯ ವಿಶೇಷಾಧಿಕಾರವನ್ನು ಪಾಕಿಸ್ತಾನ ಶಸ್ತ್ರದಂತೆ ಬಳಸಿಕೊಂಡಿತು. ಕಳೆದ ೭೦ ವರ್ಷಗಳಲ್ಲಿ ಇದರಿಂದಲೇ ಸುಮಾರು ೪೦ ಸಾವಿರ ಜನರ ಪ್ರಾಣ ತೆತ್ತರು. ಇದು ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.
ದೇಶದ ಅಭಿವೃದ್ಧಿ ದೃಷ್ಟಿಯಿಂದ ನಾವು ರೂಪಿಸಿದ ಕಾನೂನು ಮತ್ತು ಯೋಜನೆಗಳು ಆ ರಾಜ್ಯಕ್ಕೆ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಆ ರಾಜ್ಯದ ಹೆಣ್ಣು ಮಕ್ಕಳು ಶಿಕ್ಷಣದಿಂದ, ಕಾರ್ಮಿಕರು ಅನೇಕ ಯೋಜನೆಗಳಿಂದ ವಂಚಿತರಾಗಿದ್ದಾರೆ. ಉಳಿದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ಅನೇಕ ಕಾನೂನುಗಳಿವೆ, ಆದರೆ ಕಾಶ್ಮೀರದಲ್ಲಿ ಯಾವುದೇ ಕಾನೂನು ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಈ ಎಲ್ಲ ಕಾರಣಗಳಿಂದ ನಮ್ಮ ಸರ್ಕಾರ ೩೭೦ ವಿಧಿಯನ್ನು ರದ್ದುಗೊಳುಸುವ ಮೂಲಕ ಕಾಶ್ಮೀರದಲ್ಲಿ ಅಭಿವೃದ್ಧಿಯ ಪರ್ವವನ್ನು ಆರಂಭಿಸಿದೆ.

ಕಾಶ್ಮೀರಕ್ಕೆ ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆ ವಿಸ್ತರಣೆ.

ಅರೆ ಸೇನಾ ಪಡೆಗಳಲ್ಲಿ ನೇಮಕಾತಿಗಾಗಿ ರ್ಯಾಲಿ ಆಯೋಜನೆ.

ಜಮ್ಮು- ಕಾಶ್ಮೀರದ ರಸ್ತೆ, ವಿಮಾನ, ರೈಲು ನಿಲ್ದಾಣಗಳ ಆಧುನೀಕರಣ.

ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ವೇಗ ನೀಡುವುದು. ಈ ಎಲ್ಲ ರೀತಿಯ ಯೋಜನೆಗಳ ಮೂಲಕ ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರವನ್ನು ಮತ್ತೆ ಅಭಿವೃದ್ಧಿ ಹಳಿಗೆ ತರಲು ನಮ್ಮ ಸರ್ಕಾರ ಬದ್ದವಾಗಿದೆ ಎಂದೂ ಮೋದಿ ಘೋಷಿಸಿದರು.

LEAVE A REPLY

Please enter your comment!
Please enter your name here