ಮೋದಿ ಹಾಗೂ ಪಾಕ್ ಪ್ರಧಾನಿ `ಇಮ್ರಾನ್ ಖಾನ್’ ನಡುವೆ ಉತ್ತಮ ಭಾಂಧವ್ಯವಿದೆ : ಡೋನಾಲ್ಡ್ ಟ್ರಂಪ್..!!

0
171

ಪಾಕಿಸ್ತಾನ ಮತ್ತು ಭಾರತ ನಡುವೆ ಇರುವ ಘರ್ಷಣೆ ಹೊಸದೆನಲ್ಲ, ಪಾಕಿಸ್ತಾನ ಭಾರತ ವಿರುದ್ದ ನೆಡಸಿರುವ ಹಲವು ಕುತಂತ್ರಗಳನ್ನು ನೆನೆಸಿಕೊಂಡರೆ ಭಾರತಿಯರು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಂದಿನ ದಿನದಿಂದಲೂ, ಇವತ್ತಿನವರೆಗೂ ಪಾಕಿಸ್ತಾನಿಯರು ಭಾರತಿಯರ ಮೇಲೆ ಸಾಧಿಸುತ್ತಿರುವ ದ್ವೇಷ ಕಡಿಮೆಯಾಗುತ್ತಿಲ್ಲ. ಭಾರತಿಯರಿಗೆ ಕ್ಷಮಿಸುವ ದೊಡ್ಡ ಗುಣ ಇದೆ ಎಂಬುದನ್ನ ಯಾವಾಗಲೋ ಪಾಪಿ ಪಾಕಿಸ್ತಾನರಿಗೆ ತೋರಿಸಿಕೋಟ್ಟಿದೆ.

ಕ್ಷಮೆಯನ್ನು ಕೊಟ್ಟಿರುವುದು ಬುದ್ದಿಯನ್ನು ಕಲಿಯಲಿ ಎಂದು. ಅದರೆ ಎಷ್ಟೇ ಅವಕಾಶ ಕೊಟ್ಟರು, ಪಾಕಿಸ್ತಾನಿಯರು ಬುದ್ದಿ ಕಲಿತಿಲ್ಲ. ಇಂದಿಗೂ ಕಾಶ್ಮೀರ ಮತ್ತು ಪಾಕಿಸ್ತಾನ ನಡುವೆ ಗಡಿ ಬಾಗದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ, ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತದೆ. ಪಾಕಿಸ್ತಾನ ಮತ್ತು ಭಾರತ ನಡುವೆ ಇರುವ ಕಾಶ್ಮೀರ ವಿವಾದ ಕುರಿತು `ಆಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್’, ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ನಡುವೆ ಉತ್ತಮ ಭಾಂಧವ್ಯವಿದೆ. ಈ ಎರಡು ದೇಶಗಳು ಒಪ್ಪಿಗೆ ನೀಡಿದರೆ, ನಾವು ಮದ್ಯಸ್ಥಿಕೆ ವಹಿಸಲಿದ್ದೇವೆ ಎಂದು ಡೋನಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ವಿವಾದ ಕುರಿತು ಭಾರತ ನಮ್ಮೊಂದಿಗೆ ಯಾವ ರೀತಿಯ ಇತ್ಯರ್ಥಕ್ಕಾಗಿ ಅಥವಾ ಮಧ್ಯಸ್ಥಿಕೆ ವಹಿಸಿ ಎಂದು ಮನವಿ ಮಾಡಿಕೊಂಡಿಲ್ಲ.! ಎಂಬುದನ್ನು ಕೂಡ ಆಮೇರಿಕ ಸ್ಪಷ್ಟ ಪಡಿಸಿದೆ. ಕಾಶ್ಮೀರದ ಗಡಿ ಭಾಗದಲ್ಲಿ ಉಂಟಾಗುತ್ತಿರುವ ಉದ್ವಿಗ್ನ ಪರಿಸ್ಥಿತಿಗಳನ್ನು ನಿಯಂತ್ರಿಸಲು ಯೋಚನೆ ಮಾಡಬೇಕಾಗಿದೆ. ಈ ವಿಚಾರ ಕುರಿತು ನರೇಂದ್ರ ಮೋದಿ ಅವರ ಜೊತೆ ಟ್ರಂಪ್ ಮಾತುಕತೆ ನೆಡಸಲಿದ್ದಾರೆ ಎಂಬುದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here