ಆ ದಿನದ ಘಟನೆಯ ಪ್ರತ್ಯಕ್ಷದರ್ಶಿ ಇವರು..!

0
226

ಜಮ್ಮು ಮತ್ತು ಕಾಶ್ಮೀರ ಅಲ್ಲಿನ ಪ್ರಸಕ್ತ ವಿದ್ಯಮಾನ ಗೊಂದಲಕಾರಿಯಾಗಿಯೇ ಇದೆ, ಆದರೆ ಅಲ್ಲಿ ನಡೆದಿದ್ದ ಆ ಘಟನೆ ಅನೇಕ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಪುಲ್ವಾಮದಲ್ಲಿ ನಡೆದ ಯೋಧರ ನರಮೇಧ ಉಗ್ರಹ ಕೇಕೆ ಅಬ್ಬಾ ಯಾವೊಬ್ಬ ಭಾರತೀಯರು ಮರೆತಿಲ್ಲ. ಎಲ್ಲರೂ ಇದಕ್ಕೆ ಉಗ್ರರ ವಿರುದ್ಧ ಪ್ರತೀಕಾರ ಬಯಸಿದ್ದರು. ಭಾರತೀಯ ಯೋಧರು ಕುದ್ದುಹೋಗಿದ್ದರು ಇದರ ಪರಿಣಾಮ ನಡೆದಿದ್ದೇ ಬಾಲಾಕೋಟ್ ಆಪರೇಷನ್.

ಪಾಕ್ ಆಕ್ರಮಿತ ಪ್ರದೇಶದಿಂದಲೂ ಮುಂದೆಹೋಗಿ ನರರೂಪದ ರಕ್ಕಸರನ್ನು ಬೇಟೆಯಾಡಿದ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡಿದ್ದರು. ಈ ಘಟನೆಯಲ್ಲಿ ಒಂದು ಲೋಪವೂ ಆಗಿಹೋಗಿತ್ತು, ಅದುವೇ ಮಿಗ್ 21 ವಿಮಾನದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಮಾನ ಪತನವಾಗಿ ಪಾಕ್ ನೆಲದಲ್ಲಿ ಬಿದ್ದಿದ್ದರು. ಆ ಕ್ಷಣಗಳನ್ನು ಭಾರತೀಯರು ಆನಾಗಬಹುದು ಎಂದು ಆತಂಕದಿಂದಲೇ ನೋಡುತ್ತಿದ್ದರು ಆದರೆ ಪಾಕ್ ವಿಶ್ವಮಟ್ಟದಲ್ಲಿನ ಒತ್ತಡಕ್ಕೆ ಮಣಿದು ಅಭಿನಂದನ್ ಅವರನ್ನು ಕಳುಹಿಸಿಕೊಟ್ಟಿತು.

ಬಾಲಾಕೋಟ್ ದಾಳಿಯ ಕುರಿತು ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದಾರೆ ಅದುವೇ ರೋಚಕ ವಿಚಾರಗಳ ಬಗ್ಗೆ. ಅಲ್ಲಿ ಅವರು ಹೇಳಿದ್ದು ಎರಡು ಘನಘೋರ ಯುದ್ಧ ವಿಮಾನಗಳ ಸಂಘರ್ಷ. ಮಿಗ್ 21 ವಿಮಾನ ಎಫ್ 16 ಎಂಬ ದ್ಯತ್ಯ ವಿಮಾನವನ್ನು ಅಟ್ಟಾಡಿಸಿದ ಸತ್ಯ ಕತೆ. ಹೌದು ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಮಿಗ್ ಚಲಾಯಿಸುತ್ತಿದ್ದುದು ಇದೇ ಅಭಿನಂದನ್ ಮತ್ತು ಅವರು ಹೊಡೆದುರುಳಿಸಿದ ವಿಮಾನ ಅಮೆರಿಕಾ ನಿರ್ಮಿತ ಎಫ್ 16 ವಿಮಾನವಾಗಿತ್ತು.

ಬಾಲಾಕೋಟ್ ಕಾರ್ಯಾಚರಣೆಯ ಅನುಭವ ವಿಶ್ವದ ಬೇರೆ ಯಾವುದೇ ಕಾರ್ಯಾಚರಣೆಯೂ ನೀಡಲು ಸಾಧ್ಯವಿಲ್ಲ ಎಂದು ದಿಟ್ಟ ಮಹಿಳೆ ಯುದ್ಧ ಸೇವಾ ಪದಕ ವಿಜೇತೆ ವಾಯುಪಡೆ ಅಧಿಕಾರಿ ಮಿಂಟಿ ಅಗರ್ ವಾಲ್ ತಿಳಿಸಿದ್ರು.

2019 ರ ಫೆಬ್ರ್ರವರಿಯಲ್ಲಿ ನಡೆದ ಪಾಕಿಸ್ತಾನ ಜೊತೆಗಿನ ವಾಯುಯುದ್ಧದಲ್ಲಿ ಮಿಂಟಿ ಅಗರ್ ವಾಲ್ ಪ್ರಮುಖರಾಗಿದ್ರು. ಬಾಲಾಕೋಟ್ ಆಪರೇಷನ್ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯ ಖಂಡಿತವಾಗಿಯೂ, ನಾನು ಧರಿಸಿರುವ ಸಮವಸ್ತ್ರದಲ್ಲಿ ಹೆಮ್ಮೆಯಾಗುತ್ತದೆ ಮತ್ತು ರಾಷ್ಟ್ರವು ಅಂತಹ ಗೌರವವನ್ನು ನೀಡಿದೆ ಎಂಬ ಕಾರಣದಿಂದಾಗಿ ಗೌರವವಿದೆ ಅಂತ ಮಿಂಟಿ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಕಾದಾಟದ ಸಮಯದಲ್ಲಿ ವಿಂಗ್‍ಕಮಾಂಡರ್ ಅಭಿನಂದನ್ ಪೈಲಟ್ ನಲ್ಲಿದ್ದಾಗ ಅವರಿಗೆ ವಿಮಾನದ ಪರಿಸ್ಥಿತಿಯ ಚಿತ್ರಣವನ್ನು ನೀಡುತ್ತಿದ್ದೆ. ನನ್ನ ಸ್ಕ್ರೀನ್ ನಿಂದ ಎಫ್-16 ಬ್ಲಿಪ್ ಮರೆಯಾಗುತಿತ್ತು, ಆತ ಸೂಕ್ತ ಸಮಯದಲ್ಲಿ ಪಾಕಿಸ್ತಾನದ ವಿಮಾನ ಹೊಡೆದುಹಾಕಿದ್ದರು.

ಬಾಲಕೋಟ್ ಏರ್‍ಸ್ಟ್ರೈಕ್ ಮರುದಿನ ಪಾಕಿಸ್ತಾನದ ಯುದ್ಧ ವಿಮಾನಗಳು ಜಮ್ಮು- ಕಾಶ್ಮೀರ ಮತ್ತು ನೌಶೇರಾ ಸೆಕ್ಟರ್ ಬಳಿ ಬರುತ್ತಿರುವುದನ್ನು ವಾಯುಪಡೆ ಗಮನಿಸಿತ್ತು ಮತ್ತು ಹಠಾತ್ ದಾಳಿಗೂ ಸಿದ್ಧವಾಗಿರಿಸಲಾಗಿತ್ತು. ಬಾಲಾಕೋಟ್ ದಾಳಿಯ 24 ಗಂಟೆಗಳೊಳಗೆ ಪ್ರತೀಕಾರ ತೀರಿಸಿಕೊಂಡರು. ಆರಂಭದಲ್ಲಿ, ಕೆಲವೇ ಪಾಕಿಸ್ತಾನಿ ವಿಮಾನಗಳು ಇದ್ದವು ಆದರೆ ನಿಧಾನವಾಗಿ ವಿಮಾನಗಳ ಸಂಖ್ಯೆ ಹೆಚ್ಚುತ್ತಾ ಹೋಯ್ತು. ಅವರು ಯುದ್ದ ಮಾಡಬೇಕೆಂದೇ ಭಾರತದತ್ತ ಬಂದರೂ ಅವರ ಕಾರ್ಯಾಚರಣೆಯನ್ನು ನಮ್ಮ ತಂಡ ಯಶಸ್ವಿಯಾಗಲು ಬಿಡದೆ ಹಿಮ್ಮೆಟ್ಟಿಸಿದೆವು ಅಂತ ಮಿಂಟಿ ಅಗರ್ ವಾಲ್ ವಿವರವಾಗಿ ಹೇಳಿದ್ದಾರೆ.

ಬಾಲಾಕೋಟ್ ದಾಳಿಯ ಸತ್ಯಾಸತ್ಯ ಪ್ರಶ್ನಿಸಿದ್ದ ಜನರಿಗೆ ಮಿಂಟಿ ಉತ್ತರ ಕೇವಲ ಸಾಕ್ಷಿಯಲ್ಲ ಇದು ಆ ದಿನ ನಡೆದ ಘಟನೆಯ ಪ್ರತ್ಯಕ್ಷದರ್ಶಿಯ ಹೇಳಿಕೆ.

LEAVE A REPLY

Please enter your comment!
Please enter your name here