ಗ್ಯಾಂಗ್‍ರೇಪ್ ಸಂತ್ರಸ್ತೆಯ ತಲೆಬೋಳಿಸಿ ಮೆರವಣಿಗೆ ಮಾಡಿಸಿದ ಗ್ರಾಪಂ ಸದಸ್ಯರು

0
345

ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆ. ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಗ್ರಾಮ ಪಂಚಾಯಿತಿ ಸದಸ್ಯರು ಗ್ಯಾಂಗ್‍ರೇಪ್ ಸಂತ್ರಸ್ತೆಯ ತಲೆಬೋಳಿಸಿ ಹಳ್ಳಿಯಲ್ಲಿ ಮೆರವಣಿಗೆ ಮಾಡಿಸಿದ ನೀಚ ಕೃತ್ಯ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಪಂನ ಈ ಕೃತ್ಯವನ್ನು ಮಹಿಳೆ ಮತ್ತು ಮಕ್ಕಳ ಹಿತರಕ್ಷಣೆ ಸಂಸ್ಥೆಗಳೂ ಸೇರಿದಂತೆ ವಿವಿಧ ಸಮಾಜ ಸೇವಾ ಸಂಘಟನೆಗಳು ಉಗ್ರವಾಗಿ ಖಂಡಿಸಿವೆ. ಗ್ರಾಮದ 15ರ ಪ್ರಾಯದ ಬಾಲಕಿಯೊಬ್ಬಳನ್ನು ಇತ್ತೀಚೆಗೆ ಆಕೆಯ ಮನೆಯಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ಧಾರೆ.

ಸಂತ್ರಸ್ತ ಬಾಲಕಿ ಈ ಕೃತ್ಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಅವರು ಎರಡು ದಿನಗಳ ಬಳಿಕ ನ್ಯಾಯಕ್ಕಾಗಿ ಸ್ಥಳೀಯ ಗ್ರಾಪಂ ಮೊರೆ ಹೋಗಿದ್ದರು. ಆದರೆ, ಗ್ರಾಪಂ ಸದಸ್ಯರು ಈ ಕೃತ್ಯದ ಪ್ರಮುಖ ಆರೋಪಿ ಪ್ರಭಾವಿ ವ್ಯಕ್ತಿ ಎಂಬ ಕಾರಣಕ್ಕಾಗಿ ಆತ ಮತ್ತು ಆತನ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಬಾಲಕಿಗೆ ಈ ನೀಚ ಶಿಕ್ಷೆ ನೀಡಿದರು. ಆಕೆಯ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಘಟನೆ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಮತ್ತು ಗ್ರಾಪಂನ ಈ ಕೃತ್ಯದ ಬಗ್ಗೆ ಬಾಲಕಿ ಮತ್ತು ಆಕೆಯ ಪೋಷಕರು ದೂರವಾಣಿ ಮೂಲಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದರು.ಕಾರ್ಯಪ್ರವೃತ್ತರಾದ ಪೊಲೀಸರು ಐವರು ಗ್ರಾಪಂ ಸದಸ್ಯರೂ ಸೇರಿದಂತೆ ಆರು ಮಂದಿಯನ್ನು ಮೊನ್ನೆ ಬಂಧಿಸಿದರು.

ಈ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಲ್‍ಮಾನಿ ಮಿಶ್ರಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here