`ಮೈಗ್ರೇನ್’ನಿಂದ ಮುಕ್ತರಾಗಲು ಇಲ್ಲಿದೆ ಸುಲಭ ಮನೆ ಮದ್ದು..!!

0
444

ಇತ್ತೀಚಿನ ದಿನಗಳಲ್ಲಿ ನಮ್ಮ ಜನರು ಹೆಚ್ಚು ಪರೆದಾಡುವ ಸಮಸ್ಯೆ ಎಂದರೆ ಅದು ಮೈಗ್ರೇನ್ ತಲೆನೋವು ಎಂದೇ ಹೇಳಬಹುದು. ಮೈಗ್ರೇನ್ ಸಮಸ್ಯೆ ಬಹುತೇಕರಲ್ಲಿ ಕಾಡುವ ಸಮಸ್ಯೆಯಾಗಿದೆ. ಮೈಗ್ರೇನ್ ತಲೆನೋವು ಒಮ್ಮೆ ಬಂದರೆ ಅದರ ಹಿಂಸೆ ಹೇಳಲಾರದು. ಮೈಗ್ರೇನ್ ಸಮಸ್ಯೆ ಒಮ್ಮೆ ಬಂದು ಹೋಗುವ ಸಮಸ್ಯೆಯಲ್ಲ.! ಪದೇ ಪದೇ ಕಾಡುವ ಸಮಸ್ಯೆಯಾಗಿದೆ.

ಈ ಸಮಸ್ಯೆಗೆ ಪ್ರಮುಖ ಕಾರಣ ಹೆಚ್ಚು ಸಮಯ ಕಂಪ್ಯೂಟರ್,ಟಿವಿ ಮುಂದೆ ಹೆಚ್ಚು ಕೂತು ಕೆಲಸ ಮಾಡುವುದು, ಜೊತೆಗೆ ತೀರಾ ಯೋಚನೆ ಮಾಡಿದ್ದಲ್ಲಿ ಮೈಗ್ರೇನ್ ಕಾಡುವುದು ಸರ್ವೆ ಸಾಮಾನ್ಯ. ಮೈಗ್ರೇನ್ ಸಮಸ್ಯೆಯಿಂದ ಮುಕ್ತರಾಗಲು ವೈದ್ಯರ ಬಳಿ ಹೋಗುವ ಮುನ್ನ, ಒಮ್ಮೆ ಮನೆಯೊಳಗೆ ಸಿಗುವ ಈ ಔಷಧಗಳನ್ನು ಬಳಸಿ ನೋಡಿ, ಇಲ್ಲಿದೆ ಕೆಲ ಸುಲಭ ಮನೆ ಮದ್ದು ಅನುಸರಿಸಿ,

  1. ವಿಪರೀತ ತಲೆನೋವು ಬಿಟ್ಟು ಬಿಟ್ಟು ಕಾಡಿದಾಗ, ಐಸ್ ಪ್ಯಾಕ್ ಬಳಸಿ ನಿಮ್ಮ ತಲೆ, ಕತ್ತು ಭಾಗಕ್ಕೆ ಹೆಚ್ಚು ಹೊತ್ತು ಮಸಾಜ್ ಮಾಡಿಕೊಳ್ಳುವುದರಿಂದ ನೋವು ಶಮನವಾಗುತ್ತದೆ ಜೊತೆಗೆ ರಕ್ತ ಸಂಚಾರಿಸಲು ಸುಲಭವಾಗುತ್ತದೆ.
  2. ಕಾಫಿಯನ್ನು ಸೇವಿಸುವ ಆಭ್ಯಾಸ ಮಾಡಿಕೊಳ್ಳಿ ಇದರಿಂದ ತಲೆನೋವನ್ನು ಕಡಿಮೆ ಮಾಡುವ ಗಣ ಕಾಫಿಯಲ್ಲಿದೆ. ತೀರಾ ಕಾಫಿಯನ್ನೇ ಆಧಾರವಾಗಿ ಸೇವಿಸಿಬೇಡಿ ಒಳ್ಳೆಯದಲ್ಲ.
  3. ಮೈಗ್ರೇನ್ ಸಮಸೈ ಹೆಚ್ಚು ಕಾಡಿದರೆ, ನಿದ್ರಾ ಸ್ಥಿತಿಗೆ ತೆರಳಿ ಆದಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಬೆಳಕು ಮತ್ತು ಸೌಂಡ್‍ನಿಂದ ದೂರವಿರುವುದು ಸೂಕ್ತ.
  4. ಪ್ರತಿದಿನ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ರೂಡಿಸಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ಮೈಗ್ರೇನ್ ನಿವಾರಿಸಲು ಸಹಕರಿಸುತ್ತದೆ.
  5. ವಿಟಮಿನ್ ಬಿ2 ಅಂಶವಿರುವ ಆಹಾರ ಸೇವನೆ ಮಾಡುವುದರಿಂದ ಮೈಗ್ರೇನ್ ಸಮಸೈ ನಿವಾರಿಸಬಹುದು.

LEAVE A REPLY

Please enter your comment!
Please enter your name here