ಮೀನ ಅವರ ಬಾಯಲ್ಲಿ ಈ ರೀತಿಯಾದ ಪದ ಬರುತ್ತದೆ ಎಂದು ಊಹಿಸಿರಲಿಲ್ಲ !

0
720

ದಕ್ಷಿಣ ಭಾರತ ಚಿತ್ರರಂಗದ ನಟಿ ಮೀನಾ ಯಾರಿಗೆ ಗೊತ್ತಿಲ್ಲ ಹೇಳಿ.? ಬಾಲ ನಟಿಯಾಗಿ ಚಲನಚಿತ್ರೋದ್ಯಮಕ್ಕೆ ಪಾದರ್ಪಣೆ ಮಾಡಿದ ಅವರು, ಬರೋಬ್ಬರಿ ಎರಡು ದಶಕಗಳ ಕಾಲ ಚಿತ್ರರಂಗವನ್ನು ಆಳಿದ್ದಾರೆ. ಚೆಲುವ, ಪುಟ್ನಂಜ, ಮೊಮ್ಮಗ, ಸಿಂಹಾದ್ರಿಯ ಸಿಂಹ, ಶ್ರೀ ಮಂಜುನಾಥ, ಮೈ ಆಟೋಗ್ರಾಫ್, ಗೌಡ್ರು, ಸ್ವಾತಿ ಮುತ್ತು, ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡತಿಯೇ ಆಗಿಬಿಟ್ಟಿದ್ದಾರೆ.

 

 

ಅಲ್ಲದೇ ನನಗೆ ಹೆಚ್ಚಾಗಿ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮಹತ್ವಾಂಕ್ಷೆಯನ್ನು ನಾನು ಹೊಂದಿದ್ದೇನೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಮೀನಾ ಬಾಯಲ್ಲಿ ಬಂದ ಪದವನ್ನು ತಿಳಿದುಕೊಳ್ಳುವ ಮುಂಚೆ, ಅವರ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ತಿಳಿಸಿಕೊಡುತ್ತೇವೆ ಓದಿ..

 

 

ಮೂಲತಹಃ ತಮಿಳುನಾಡಿನವರಾದ ಮೀನ, ತಮಿಳು ಸೇರಿದಂತೆ, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿ ಯಶಸ್ವಿಯಾದ ಕೆಲವೇ ಕೆಲವು ನಟಿಯರಲ್ಲಿ ಮೀನಾ ಕೂಡ ಒಬ್ಬರು. ಅಲ್ಲದೇ ತೆಲುಗು ಚಿತ್ರರಂಗದಲ್ಲಿ ಎವರ್ ಗ್ರೀನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

 

 

ಮೀನಾ ಅವರು ನಟನೆಯ ಜೊತೆಗೆ ಗಾಯಕಿ, ನರ್ತಕಿ, ಮಾಡೆಲ್, ರಿಯಾಲಿಟಿ ಶೋ ಜಡ್ಜ್ ಮತ್ತು ಸಾಂದರ್ಭಿಕ ಡಬ್ಬಿಂಗ್ ಕಲಾವಿದೆ ಕೂಡ ಹೌದು. ಸಿನಿ ಜಗತ್ತಿನಲ್ಲಿ ದಶಕಗಳ ಕಾಲ ಬೇರೂರಿರುವ ಕೆಲವೇ ಕೆಲವು ನಟಿ ಮಣಿಯರಲ್ಲಿ ಮೀನಾ ಕೂಡ ಒಬ್ಬರಾಗಿದ್ದಾರೆ !

 

 

ಮೀನಾ ಅವರು ತಮಿಳುನಾಡಿನ ಚೆನೈನಲ್ಲಿ ಜನಿಸಿದ್ದು, ತಂದೆ ದರೈರಾಜ್(ತಮಿಳು) ತಾಯಿ ರಾಜಮಲ್ಲಿಕಾ(ಮಲಯಾಳಿ) ದಂಪತಿಗಳ ಕುಟುಂಬದಲ್ಲಿ ಜನಿಸಿ ನೆಚ್ಚಿನ ಪುತ್ರಿಯಾದರು.
ಚೆನ್ನೈನ ವಿದ್ಯಾಧ್ಯಾ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮೀನಾ ಅವರು, ತಮ್ಮ ಸಿನಿಮಾದ ನಟನೆಯ ಕಾರ್ಯಯೋಜನೆಯಿಂದಾಗಿ 8 ನೇ ತರಗತಿಗೆ ತಮ್ಮ ಶಿಕ್ಷಣವನ್ನು ನಿಲ್ಲಿಸಿದರು. ಬಳಿಕ 10 ನೇ ತರಗತಿಯ ಪರೀಕ್ಷೇಯನ್ನು ಅದೇ ಶಾಲೆಯ ಮುಖಾಂತರ ಬರೆದು ಉತ್ತೀರ್ಣರಾದರು.

 

 

ನಂತರ 2006 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು, ಅಲ್ಲದೇ ಭರತನಾಟ್ಯದಲ್ಲಿ ತರಭೇತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಮೀನಾ 1982 ರಲ್ಲಿ ನೆಂಜಂಗಲ್ ಎಂಬ ತಮಿಳು ಚಿತ್ರದಿಂದ ಬಾಲನಟಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಮೀನಾ ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಮೀನಾ ಅವರ ಮುದ್ದು ಮುಖವನ್ನು ನೋಡಿದ ಡಾ.ಶಿವಾಜಿ ಗಣೇಶನ್ ಅವರು ತಮ್ಮ ಚಿತ್ರದಲ್ಲಿ ಅಭಿನಯಿಸಿಲು ಅವಕಾಶ ಕಲ್ಪಿಸಿಕೊಟ್ಟರು.

 

 

ನಿರ್ಮಾಪಕ ಎ.ಎಂ. ರತ್ನಂ ಅವರ ಕಚೇರಿಗೆ ತಾಯಿ ರಾಜಮಲ್ಲಿಕಾ ಜೊತೆ ಸಿನಿಮಾದ ಆಫರ್ ಗಾಗಿ ಬರುತ್ತಾರೆ. ಆಗಿನ್ನು ಮೀನಾ ಚಿಕ್ಕವಳು, ಆಕೆಯನ್ನು ಕಂಡು ಎಲ್ಲರು ಬಹಳ ಇಷ್ಟಪಡುತ್ತಾರೆ. ಬಾಲ ಕಲಾವಿದೆಯಾಗಿ ಶಿವಾಜಿ ಗಣೇಶನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಜನಿಕಾಂತ್ ಅಭಿನಯದ ಅನ್ಬಲ್ಲಾ ರಜನಿಕಾಂತ್ ಚಿತ್ರದಲ್ಲಿ ಮೀನಾ ಅವರು ಅನಾರೋಗ್ಯದ ಮಗುವಿನಂತೆ ಪಾತ್ರವನ್ನು ನಿರ್ವಹಿಸಿದರು. ಈ ಸಿನಿಮಾ ಅವರ ವೃತ್ತಿ ಜೀವನದ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಯಿತು. 45 ಕ್ಕೂ ಹೆಚ್ಚು ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿ ಚಲನಚಿತ್ರೊದ್ಯಮದಲ್ಲಿ ಬೇರೂರಿದರು.

 

 

ಮೀನಾ ಅವರು ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ. ತಾಯ್ನಾಡಾದ ತಮಿಳುನಾಡು ಮತ್ತು ಬಾಲ ನಟಿಯಾಗಿ ತಮಿಳು ಚಿತ್ರರಂಗದಲ್ಲಿ ಅಭಿನಸಿದ್ದರು. ಮೊದಲಿಗೆ ಪರಿಪೂರ್ಣ ನಟಿಯಾಗಿ ತೆರೆಯ ಮೇಲೆ ಅಭಿನಯಿಸಿದ್ದು, ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಸೀತರಾಮಯ್ಯ ಗರಿ ಮನವಾರಲು ಎಂಬ ತೆಲುಗು ಚಿತ್ರದಿಂದ. ಇನ್ನು ಈ ಚಿತ್ರವನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

 

 

ಈ ಚಿತ್ರಕ್ಕೆ ಅವರಿಗೆ ಅಂಧ್ರಪ್ರದೇಶ ಸರ್ಕಾರದಿಂದ ಅತ್ಯುತ್ತಮ ನಟಿ, ನಂದಿ ಪ್ರಶಸ್ತಿಯನ್ನು ನೀಡಲಾಯಿತು! ಇನ್ನು ತಮಿಳಿನಲ್ಲಿ ಒರು ಪುಧಿಯಾ ಕದೈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಪಾದರ್ಪಣೆ ಮಾಡಿದ ಮೀನಾ, ತಮಿಳಿನಲ್ಲಿ ಮೂರು ಡಜನ್ ಗೂ ಹೆಚ್ಚು ಸಿನಿಮಾಗಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅಷ್ಟು ಮಾತ್ರವಲ್ಲದೇ ಕನ್ನಡ, ಹಿಂದಿ, ಮಲಯಾಳಂ ಸಿನಿಮಾಗಳಲ್ಲು ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಲಯಾಳಂ ನಲ್ಲಿ ಅವರ ಮೊದಲ ಪಾತ್ರವು ಗಮನ ಸೆಳೆದಿದ್ದು, ಸಿಬಿ ಮಲಯಳಂ ನಿರ್ದೇಶನದ ಸಂಧ್ವನಂ ಚಿತ್ರದಲ್ಲಿ. ಇದರ ಯಶಸ್ಸು ಅವರನ್ನು ಕೇರಳದಲ್ಲಿ ಪ್ರಸದ್ಧಿಯನ್ನಾಗಿ ಮಾಡಿತು. ಅಲ್ಲದೇ ಪಾರ್ಡ್ ಹೈ ಪಾರ್ಡ್ ಎಂಬ ಹಿಂದಿಯ ಹಾಸ್ಯದ ಚಿತ್ರದ ಮೂಲಕ 1992 ರಲ್ಲಿ ಬಾಲಿವುಡ್ ಗೆ ಪ್ರವೇಶ ಮಾಡಿದರು. ಮೀನಾ ಅವರು 90ರ ದಶಕದಲ್ಲಿ ತೆಲುಗು ಮತ್ತು ತಮಿಳು ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

 

 

ಸದಾ ವಿಶಿಷ್ಟ, ವಿಭಿನ್ನ ಹಾಗೂ ನಕಾರಾತ್ಮಕತೆಯ ಸಿನಿಮಾಗಳಲ್ಲಿ ಅಭಿಸುವುದರ ಮೂಲಕ ವಿವಿಧ ಭಾಷೆಗಳಲ್ಲಿ, ವಿವಿಧ ತಲೆಮಾರುಗಳ ಜೊತೆ ಅಭಿನಯಿಸಿ ಪ್ರಶಸ್ತಿಗಳ ಸರಮಾಲೆಗಳನ್ನೇ ಮುಡಿಗೇರಿಸಿಕೊಂಡಿದ್ದಾರೆ. 2009 ರಲ್ಲಿ ವಿದ್ಯಾಸಾಗರ್ ಎಂಬುವವರ ಜೊತೆ ವಿವಾಹವಾಗಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದ ನಟಿ ಮೀನಾ, ಮದುವೆಯ ನಂತರವೂ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ನಟಿಸುತ್ತಿದ್ದರು.

 

 

ಈ ದಂಪತಿಗಳಿಗೆ ನೈನಿಕಾ ವಿದ್ಯಾಸಾಗರ್ ಎಂಬ ಮುದ್ದಾದ ಮಗಳಿದ್ದು, ಆಕೆಯೂ ಕೂಡ ತನ್ನ 5 ನೇ ವಯಸ್ಸಿನಲ್ಲಿ ನಟ ವಿಜಯ್ ಅವರ ಮಗಳಾಗಿ ಥೇರಿ ಎಂಬ ಸಿನಿಮಾದಲ್ಲಿ ಅಭಿನಯಿಸಿ, ಅಮ್ಮನ ಹಾದಿಯಲ್ಲೇ ಸಾಗುತ್ತಿದ್ದಾರೆ!

ಸದ್ಯ ಈಗ ತಮಿಳಿನಲ್ಲಿ ವೆಬ್ ಸಿರೀಸ್ ಜಮಾನ ಶುರುವಾಗಿದೆ. ಪೋಸ್ಟ್ ಮನ್, ಆಟೋ ಶಂಕರ್ ಹೀಗೆ ಮುಂತಾದ ಡಿಜಿಟೆಲ್ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಜೀ ಫೈವ್ ನಲ್ಲೂ ವೆಬ್ ಸಿರೀಸ್ ಗಳು ಬಿಡುಗಡೆಯಗುತ್ತಿದ್ದು, ಜನಸಾಮನ್ಯರು ಬಳಸುವ ಅಶ್ಲೀಲ ಪದಗಳನ್ನು ಯಾವುದೇ ಸೆನ್ಸಾರ್ ಇಲ್ಲದೇ ಹಾಗೆಯೇ ಬಳಕೆಯಾಗುತ್ತಿದೆ.

 

 

ಡಿಜಿಟೆಲ್ ಕಂಟೆಂಟ್ ಗಳಿಗೆ ಇನ್ನೂ ಸೆನ್ಸಾರ್ ಅಗಾದ ಕಾರಣ ತಮಗೆ ಇಷ್ಟಬಂದಂತ ಭಾಷೆ ಮತ್ತು ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇನ್ನು ಸಖತ್ ಪಾಪುಲರ್ ಆಗಿದ್ದ ಆಟೋ ಶಂಕರ್ ವೆಬ್ ಸಿರೀಸ್ನಲ್ಲಿ, ತಮಿಳು ಸ್ಲಮ್ಮುಗಳಲ್ಲಿ ಬಳಸುವ ಅಶ್ಲೀಲ ಪದಗಳನ್ನು ಯಥಾವತ್ತಾಗಿ ಬಳಸಿದ್ದರು.

 

 

ಇದೀಗ ಕರೋಲಿನ್ ಕಾಮಾಕ್ಷಿ ಎನ್ನುವ ಪತ್ತೇದಾರಿ ವೆಬ್ ಸಿರೀಸ್ ಪ್ರಾರಂಭವಾಗಿದ್ದು, ಇಲ್ಲಿಯೂ ಕೂಡ ಫಿಲ್ಟರ್ ಇಲ್ಲದೇ ಪದಗಳನ್ನು ಉಪಯೋಗಿಸಲಾಗಿದೆ. ಇನ್ನೂ ಇದರಲ್ಲಿ ನಟಿ ಮೀನಾ ಅಭಿನಯಿಸಿದ್ದು, ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಮೀನಾ ಅವರು `ಹೋಗಲೇ ಲೌಡಕೆ ಬಾಲ್’ ಎಂದಿರುವ ಸಂಭಾಷಣೆ ಅನಾವರಣಗೊಂಡಿದ್ದು, ಇದನ್ನು ಕಂಡ ಪ್ರತಿಯೊಬ್ಬರು ತಬ್ಬಿಬ್ಬಾಗಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳು ಮೀನಾ ಅವರ ಬಾಯಲ್ಲಿ ಈ ರೀತಿಯಾದ ಪದ ಬಂದಿರುವುದನ್ನು ಕೇಳಿ ಅಸಾಮಾದಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here