ಬಿಜೆಪಿ ಶಾಸಕನಿಗೆ ‘ಮಸಾಲೆ’ ಹಾಕಿದ ಜೆಡಿಎಸ್ ಕಾರ್ಯಕರ್ತರು..!

0
540

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಳ್ಳಿಯ ಕುರುಬರಹಳ್ಳಿ ಗ್ರಾಮದಲ್ಲಿ ಸ್ಥಳೀಯ ಬಿಜೆಪಿ ಶಾಸಕನಿಗೆ ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿ ‘ಮಸಾಲೆ’ ಹಾಕಿ, ಚಳಿ ಬಿಡಿಸಿದ ಘಟನೆ ನಡೆದಿದೆ. ಹೌದು, ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದು, ಅಕ್ಷರಶಃ ಕಂಗಾಲಾಗುವಂತೆ ಮಾಡಿದ್ದಾರೆ. ಕುರುಬರಹಳ್ಳಿ ಗ್ರಾಮದಲ್ಲಿನ ರಸ್ತೆ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್ ನಡೆದಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಶಾಸಕರನ್ನು ತಳ್ಳಿ ವಾಗ್ವಾದ ನಡೆಸಿದ್ದಾರೆ.

ಇನ್ನು ಕುರುಬರಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ರಸ್ತೆಗೂ ಮೊದಲು ಚರಂಡಿಮಾಡಿ ಎಂದು ಜೆಡಿಎಸ್ ಕಾರ್ಯಕರ್ತರ ಬೇಡಿಕೆ ಇಟ್ಟಿದ್ದಾರೆ. ಆಯ್ತು ಎಂದು ಬಿಜೆಪಿ ಶಾಸಕರು ಭರವಸೆ ನೀಡಿದರು, ಆದರು ಸುಮ್ಮನಾಗದ ಜೆಡಿಎಸ್ ಕಾರ್ಯಕರ್ತರು ತಳ್ಳಾಳ-ನೂಕಾಟ ನಡೆಸಿದ್ದಾರೆ. ಈ ನಡುವೆ ಜೆಡಿಎಸ್ ಕಾರ್ಯಕರ್ತರಿಗೆ ಅವಾಜ್ ಹಾಕಿದ ಶಾಸಕ ಮಸಾಲೆ ಜಯರಾಮ್, ‘ನನಗೆ ರಾಜಕಾರಣ ಮಾಡೋದು ಗೊತ್ತು. ಗ್ರಾಮ ಅಭಿವೃದ್ಧಿ ಮಾಡೋದು ಗೊತ್ತು. ನೀವು ನನ್ನ ಮೈಮೇಲೆ ಬಂದರೆ ನಾನು ಓಡಿಹೋಗ್ತಿನಾ..? ಎಂದರು. ಇದರಿಂದ ಕೆರಳಿದ ಜೆಡಿಎಸ್ ಕಾರ್ಯಕರ್ತರು “ ಹೋಗಯ್ಯ.. ನೀನು ಏನ್ ಅಭಿವೃದ್ದಿ ಮಾಡಿದ್ದಿಯಾ ಅನ್ನೋದು ನಮಗೆ ಗೊತ್ತು. ನಾವು 12 ಜನ ಶಾಸಕರನ್ನು ನೋಡಿದ್ದೇವೆ ನೀವ್ ಅದರಲ್ಲಿ ಒಬ್ಬ” ಎಂದು ಅಬ್ಬರಿಸಿದಾಗ ಶಾಸಕರು ಸ್ಥಳದಿಂದ ಕಾಲ್ಕಿತ್ತರು ಎನ್ನಲಾಗಿದೆ.

LEAVE A REPLY

Please enter your comment!
Please enter your name here