ಗಾಂಜಾ ಸೇವನೆಯಿಂದ ಉತ್ತಮ ತಾಯಂದಿರಾಗಿದ್ದಾರಂತೆ!

0
242

ಗಾಂಜಾ ಸೇವನೆ ನನ್ನನ್ನು ಉತ್ತಮ ತಾಯಿಯನ್ನಾಗಿ ಮಾಡಿದೆ ಎಂದು ಕೆನಡಾದ ಮಹಿಳೆಯೊಬ್ಬರು ಹೇಳಿದ್ದಾರೆ. ಕೆನಡಾದಲ್ಲಿ ಗಾಂಜಾ ( ಕ್ಯಾನ್ನಬಿಸ್‌) ಸೇವನೆ ಅಧಿಕೃತವಾದ ಬಳಿಕ ಅನೇಕ ಕೆನಡಾದ ಮಹಿಳೆಯರು ಇದೇ ರೀತಿ ಗಾಂಜಾ ಸೇವಿಸುತ್ತಿದ್ದು, ಹಳೆಯ ರೂಢಿಗಳಿಗೆ ಸವಾಲು ಹಾಕುತ್ತಿದ್ದಾರೆ. ತಮ್ಮ ಕುಟುಂಬ, ನೆರೆಹೊರೆಯವರು ಹಾಗೂ ಇತರರು ತಾವು ಗಾಂಜಾ ಸೇವನೆ ಮಾಡಿರುವುದನ್ನು ಮುಚ್ಚಿಟ್ಟುಕೊಂಡು ಸಾಕಾಗಿದೆ ಎಂದು ಕೆರೈನ್ ಸಿರ್‌ ಎಂಬ ಮಹಿಳೆ ಹೇಳಿಕೊಂಡಿದ್ದಾರೆ. ಹೀಗಾಗಿ, ತಮ್ಮ ಗೆಳತಿಯರಿಗೆ ಹಾಗೂ ತಮ್ಮದೇ ವಯಸ್ಸಿನ ಮಹಿಳೆಯರಿಗೆ ಗಾಂಜಾ ಸೇವನೆಯಿಂದಾಗುವ ಲಾಭಗಳ ಬಗ್ಗೆ ಶಿಕ್ಷಣ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

 

”ನಾನು ಕ್ಯಾನ್ನಬಿಸ್( ಗಾಂಜಾ) ಸೇವಿಸಿದರೆ ಮನೆಯ ಕೆಲಸಗಳನ್ನು ಮಾಡುತ್ತೇನೆ, ಜತೆಗೆ ಮಕ್ಕಳೊಂದಿಗೆ ಆಟವಾಡುತ್ತೇನೆ. ಅಲ್ಲದೆ, ಮಕ್ಕಳೊಂದಿಗೆ ಹೆಚ್ಚು ತಾಳ್ಮೆಯಿಂದ, ಹೆಚ್ಚು ಪ್ರಸ್ತುತವಾಗಿರುತ್ತೇನೆ. ಹೀಗಾಗಿ, ಇದು ನನ್ನನ್ನು ಉತ್ತಮ ತಾಯಿಯನ್ನಾಗಿ, ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ” ಎಂದು ಸಿರ್ ಹೇಳಿಕೊಂಡಿದ್ದಾರೆ. ಗಾಂಜಾ ಬಗ್ಗೆ ಆಕೆಯ ಅನುಭವ, ಆಲೋಚನೆಗಳನ್ನು ಫೇಸ್‌ಬುಕ್‌ ಗ್ರೂಪ್‌ವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಫೇಸ್‌ಬುಕ್‌ ಗ್ರೂಪ್‌ನಲ್ಲಿ ಉದ್ಯಮಿಗಳು, ಮನೋವಿಜ್ಞಾನಿಗಳು, ಮಾಡೆಲ್‌ಗಳು, ಛಾಯಾಗ್ರಾಹಕರು ಸೇರಿ ಅನೇಕ ರೀತಿಯ ಮಹಿಳೆಯರಿದ್ದಾರೆ ಎಂದು ಆ ಗುಂಪಿನ ಸದಸ್ಯೆ ಹಾಗೂ ಗಾಂಜಾ ಯೋಗ ಶಿಕ್ಷಕಿಯಾಗಿರುವ ಸಿಂಥಿಯಾ ಪೆಟ್ರಿನ್ ಮಾಹಿತಿ ನೀಡಿದ್ದಾರೆ.

 

ನಾನು ಎಲ್ಲ ಸಮಯದಲ್ಲೂ ಕೆಲಸ ಮಾಡುತ್ತಿರಬೇಕು, ಮಕ್ಕಳೊಂದಿಗೆ ಇರಬೇಕು, ಮನೆ ಶುಚಿಯಾಗಿರಬೇಕು, ಬಿಲ್‌ಗಳನ್ನು ಟೈಮ್‌ಗೆ ಸರಿಯಾಗಿ ಕಟ್ಟಬೇಕು ಮುಂತಾದವುಗಳನ್ನು ಬಯಸುತ್ತಾರೆ ಎಂದು ಸಿರ್ ಹೇಳಿದ್ದಾರೆ. ಆದರೆ, ಪೋಷಕರು ಗಾಂಜಾ ಸೇವಿಸದಂತೆ ಕೆನಡಾ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಇದರಿಂದ, ಮಕ್ಕಳಿಗೂ ಅಪಾಯ ತಗುಲುವ ಆತಂಕವಿದೆ ಹಾಗೂ ಮಕ್ಕಳಿಗೆ ಗಮನ ಕೊಡುವ ಸಾಮರ್ಥ್ಯ ಕಡಿಮೆಯಾಗಬಹುದು, ಜತೆಗೆ ನಿರ್ಧಾರ ಕೈಗೊಳ್ಳುವ ಹಾಗೂ ತುರ್ತು ಸ್ಥಿತಿ ವೇಳೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವೂ ಕಡಿಮೆಯಾಗಲಿದೆ ಎದು ಎಚ್ಚರಿಕೆ ನೀಡುತ್ತದೆ.

 

ಆದರೆ, ಎರಡು ಮಕ್ಕಳ ತಾಯಿ ಹಾಗೂ ಕೆನಡಾದ ಮಹಿಳೆ ಸಿರ್, ಕ್ಯಾನಬಿಸ್(ಗಾಂಜಾ) ಸೇವನೆ ಹೊಸ ತಾಯಂದಿರಿಗೆ ಆತಂಕ ಅಥವಾ ಖಿನ್ನತೆ ನಿವಾರಿಸಲು ವೈದ್ಯರು ಶಿಫಾರಸು ಮಾಡುವ ಓಪಿಯಾಡ್ಸ್‌ ಅಥವಾ ಖಿನ್ನತೆ ಶಮನಕಾರಿ ಔಷಧಿಗಳಿಗಿಂತ ಉತ್ತಮ ಪರ್ಯಾಯವಾದ ಔಷಧಿ ಎಂದು ಸಿರ್ ವಾದ ಮಾಡುತ್ತಾರೆ.ಇನ್ನು, ಸಿರ್‌ಗೆ ಎರಡನೇ ಮಗುವಾದ ಬಳಿಕ ಕ್ಯಾನಬಿಡಿಯಾಲ್ ಎಣ್ಣೆ ಬಳಸಲು ಆರಂಭಿಸಿದ್ದು, ವೈದ್ಯರು ಶಿಫಾರಸು ಮಾಡುಚ ಓಪಿಯಾಡ್ಸ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ, ನನಗೆ ತೀವ್ರ ನಿದ್ರೆಯ ಸಮಸ್ಯೆಯಿತ್ತು. ಗಾಂಜಾ ಸೇವನೆಯಿಂದ ನಿದ್ರೆಯ ಸಮಸ್ಯೆಗೂ ಬ್ರೇಕ್‌ ಬಿದ್ದಿದೆ ಎಂದೂ ಸಿರ್ ಹೇಳಿದ್ದಾರೆ. ಇನ್ನು ಗರ್ಭಿಣಿಯರಿಗೆ ಮರಿಜುವಾನಾ ಒಳ್ಳೆಯದಲ್ಲ ಎಂದೂ ವೈದ್ಯರೊಬ್ಬರು ಸಲಹೆ ನೀಡುತ್ತಾರೆ.

LEAVE A REPLY

Please enter your comment!
Please enter your name here