ಮತ್ತೆ ಒಂದಾದ ‘ಮಾಣಿಕ್ಯ’ ಜೋಡಿ !

0
111

ಮಾಣಿಕ್ಯ 2014 ರಲ್ಲಿ ತೆರೆ ಕಂಡಿದ್ದ ಕನ್ನಡದ ಸೂಪರ್ ಸಿನಿಮಾ ! ಇನ್ನು ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇತ್ತು! ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ರೆ, ಅವರ ತಂದೆಯ ಪಾತ್ರದಲ್ಲಿ ಕರುನಾಡ ಕನಸುಗಾರ ವಿ. ರವಿಚಂದ್ರನ್ ರವರು ಅಭಿನಯಿಸುವ ಮೂಲಕ ಕಮಾಲ್ ಮಾಡಿದ್ದರು!
ಇದೇ ಮೊದಲ ಬಾರಿಗೆ ರವಿಚಂದ್ರನ್ ರವರು ಪೋಷಕ ಪಾತ್ರದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದರು !
ತೆಲುಗಿನ ‘ಮಿರ್ಚಿ’ ಚಿತ್ರದ ರಿಮೇಕ್ ಆಗಿದ್ದ ‘ಮಾಣಿಕ್ಯ’ ಸಿನಿಮಾಗೆ ಕಿಚ್ಚ ಸುದೀಪ್ ಅಭಿನಯಿಸುವುದರ ಜೊತೆಗೆ ಆಕ್ಷನ್ ಕಟ್ ಸಹ ಹೇಳಿದ್ದರು!

ಇನ್ನು ಈ ಜೋಡಿ ಮತ್ತೆ ಒಂದಾಗಿದ್ದು 2017 ರಲ್ಲಿ ತೆರೆಕಂಡ ‘ಹೆಬ್ಬುಲಿ’ ಎಂಬ ಸಿನಿಮಾದಲ್ಲಿ !
ಎಸ್ ಕೃಷ್ಣ ರವರ ನಿರ್ದೇಶನದಲ್ಲಿ ಮತ್ತು ರಘುನಾಥ್ ಉಮಾಪತಿ ಶ್ರೀನಿವಾಸ್ ರವರು ನಿರ್ಮಾಣ ಮಾಡಿದ ಈ ಚಿತ್ರದಲ್ಲಿ ಸುದೀಪ್, ದೇಶ ಕಾಯುವ ಯೋಧನಾಗಿ ಅಭಿನಯಿಸಿದ್ದರು! ಮತ್ತು ಇವರ ಅಣ್ಣನ ಪಾತ್ರದಲ್ಲಿ ವಿ ರವಿಚಂದ್ರನ್ ಬಣ್ಣ ಹಚ್ಚಿದ್ದರು. ಈ ಸಿನಿಮಾವೂ ಸಹಿತ ಶತದಿನೋತ್ಸವವನ್ನು ಆಚರಿಸಿತ್ತು !

ಈಗ ಈ ಜೋಡಿ ಹ್ಯಾಟ್ರಿಕ್ ಹಿಟ್ ನೀಡಲು ಸಜ್ಜಾಗಿದೆ.
‘ರವಿ ಬೋಪಣ್ಣ’ ಎಂಬ ಚಿತ್ರದಲ್ಲಿ ರವಿಚಂದ್ರನ್ ಅವರು ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಸಹ ಮಾಡುತ್ತಿದ್ದಾರೆ!
ಇನ್ನು ಚಿತ್ರಕ್ಕೆ ಅಜಿತ್ ರವರು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದರು. ಆದರೆ ಈಗ ನಿರ್ದೇಶನದಿಂದ ಸರಿದು ರವಿಚಂದ್ರನ್ ರವರಿಗೆ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದಾರೆ!
ಇನ್ನು ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಪಾತ್ರಕ್ಕೆ ಹೆಚ್ಚು ಮಹತ್ವವಿದೆಯಂತೆ !ಆದುದರಿಂದ ಅವರ ಸ್ಪೆಷಲ್ ಎಂಟ್ರಿ ಕುರಿತು ಚಿತ್ರತಂಡ ಪ್ಲಾನ್ ಮಾಡುತ್ತಿದೆಯಂತೆ !
ಇನ್ನು ಚಿತ್ರಕ್ಕೆ ನಟ ಮೋಹನ್ ಅವರು ಸಂಭಾಷಣೆ ರಚಿಸುತ್ತಿದ್ದಾರೆ.
ಅಂದಹಾಗೆ ‘ರವಿ ಬೋಪಣ್ಣ’ ಚಿತ್ರ ಮಲಯಾಲಂ ಭಾಷೆಯ ಜೋಸೆಫ್ ಎಂಬ ಚಿತ್ರದ ರೀಮೇಕ್,ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸದ್ಯ ಕಾವ್ಯ ಶೆಟ್ಟಿ ಆಯ್ಕೆಯಾಗಿದ್ದು ಮತ್ತೊಬ್ಬರನ್ನು ಸದ್ಯದಲ್ಲಿಯೇ ಚಿತ್ರ ತಂಡ ತಿಳಿಸಲಿದೆ! ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ, ಸದ್ಯದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದೆ

LEAVE A REPLY

Please enter your comment!
Please enter your name here