ಒಮ್ಮೆಯಾದ್ರು ಹೋಗಲೇಬೇಕು ‘ಮಣಿಮಹೇಶ್ ಕೈಲಾಸ ಪರ್ವತಯಾತ್ರೆ’..!

0
222

ಒಂದು ನಂಬಿಕೆ ಮಾತ್ರ ಅಸಾಧ್ಯವಾದದ್ದನ್ನು ಸಾಧಿಸಲು ಬಲ ತುಂಬುತ್ತದೆ. ಯಾವುದೇ ಸಾಧನೆಗೂ ಮೊದಲ ಹೆಜ್ಜೆಯೇ ನಾಂದಿ, ನಂಬಿಕೆಯ ಹುಡುಕಿ ಹೋಗುವಾಗ ದಾರಿ ಸುಲಭವಾಗಿರೋದಿಲ್ಲ, ಕಡು ಕಷ್ಟದ ಹಾದಿ ತುಳಿದರೇ ನಮ್ಮ ನಂಬಿಕೆಯ ಸತ್ಯ ಗೋಚರಿಸೋದು. ಇಲ್ಲಿಯೂ ಅಗೋಚರವಾದ ಸತ್ಯ ಕಾಣಬೇಕಾದ್ರೆ ಕಿಲೋಮೀಟರ್‍ಗಟ್ಟಲೆ ಸಾಹಸ ಮಾಡಬೇಕು.

ಭಾರತದಲ್ಲಿ ಚಾರ್‍ಧಾಮ್‍ಯಾತ್ರೆ, ಅಮರನಾಥಯಾತ್ರೆ, ಕೈಲಾಸ ಪರ್ವತಯಾತ್ರೆ ಬಗ್ಗೆ ಎಲ್ಲರೂ ಕೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿನ ಮಣಿಮಹೇಶ್ ಕೈಲಾಸ ಪರ್ವತಯಾತ್ರೆಯೂ ಅಷ್ಟೆ ವಿಶೇಷವಾದ್ದು. ಇದೇ ಆಗಸ್ಟ್ 15ರಿಂದ ಈ ಯಾತ್ರೆ ಆರಂಭಗೊಂಡಿದ್ದು ಸೆಪ್ಟೆಂಬರ್ 6ಕ್ಕೆ ಕೊನೆಗೊಳ್ಳಲಿದೆ.

ಹಿಮಾಚಲ ಪ್ರದೇಶ ರಾಜ್ಯದ ಚಂಬಾ ಜಿಲ್ಲೆಯಲ್ಲಿನ ಮಣಿ ಮಹೇಶ್ ಕೈಲಾಸದಲ್ಲಿರುವ ಮಣಿಮಹೇಶ್ ಸರೋವರವೂ ಪ್ರಸಿದ್ಧವಾಗಿದೆ ಮತ್ತು ಯಾತ್ರಾ ಸ್ಥಳಕ್ಕೆ ಕಳೆಗಟ್ಟಿದೆ. ಈ ಮಣಿ ಮಹೇಶ ಪರ್ವತ ಇರೋದು ಸರಿ ಸುಮಾರು 13, 700 ಅಡಿ ಉತ್ತುಂಗದಲ್ಲಿ. ಪ್ರತಿವರ್ಷವೂ ಇಲ್ಲಿಗೆ ತೆರಳಲು ಪ್ರಶಸ್ತ ಕಾಲ ಅಂದ್ರೆ ಅದು ಆಗಸ್ಟ್.

ಬಹತೇಕ ಹಿಂದೂ ನಂಬಿಕೆಯ ಪ್ರಕಾರ ಈ ಕೈಲಾಸದಲ್ಲಿ ಶಿವ ಇದ್ದಾನೆ ಎಂಬುದೇ ಆಗಿದೆ. ಈ ಕಾರಣಕ್ಕೆ ಸಾವಿರಾರು ಜನರು ಪ್ರತಿವರ್ಷ ಇಲ್ಲಿಗೆ ಚಾರಣ ಕೈಗೊಳ್ಳುತ್ತಾರೆ. ಹಾಗೇ ಸುಮ್ಮನೇ ಈ ಪರ್ವತ ಏರಲು ಸಾಧ್ಯವಿಲ್ಲ, ಇದಕ್ಕೆ ಹಿಮಾಚಲ ಪ್ರದೇಶ ಸರಕಾರದ ಪರವಾನಗಿ ಬೇಕು.

ಹಿಮಾಚಲ ಪ್ರದೇಶದಲ್ಲಿನ ಪೀರ್ ಪಂಜಾಲ್‍ನಲ್ಲಿ ಮಣಿಮಹೇಶ್ ಕೈಲಾಸ ಸರೋವರಕ್ಕೆ ಪ್ರತಿವರ್ಷ ಭಕ್ತಾಧಿಗಳು ಭೇಟಿ ನೀಡುವಂತೆ ಚಾರಣಿಗರು ಹೋಗುತ್ತಾರೆ. ಆಕರ್ಷಕ ಮತ್ತು ರೋಮಾಂಚನಕಾರಿಯಾದ ಈ ಪ್ರವಾಸ 11 ದಿನಗಳಇದ್ದು, 3 ದಿನ ಪ್ರಯಾಣ ಆದರೆ ಉಳಿದ 8 ದಿನ ಚಾರಣ. ಇಲ್ಲಿಗೆ ಹೋಗಲು ಪಂಜಾಬ್ ಹತ್ತಿರವಿದ್ದು ಪಠಾಣ್ ಕೋಟ್ ರೈಲ್ವೆ ನಿಲ್ದಾಣ ಇದ್ದರೆ, ಗಗ್ಗಾಲ್‍ನ ಕಾಂಗ್ರಾ ವಿಮಾನ ನಿಲ್ದಾಣ ಚಂಬಾ ಪ್ರದೇಶದಿಂದ 170 ಕಿಲೋಮೀಟರ್ ದೂರದಲ್ಲಿದೆ.

ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಿಂದ ಮಣಿಮಹೇಶ್ ಪರ್ವತಕ್ಕೆ 78 ಕಿಲೋ ಮೀಟರ್. ಚಂಡೀಗಢ್, ದೆಹಲಿಯಿಂದ ಸಾರಿಗೆ ಸಂಪರ್ಕವೂ ಇದೆ.ಚಂಡೀಗಡ ಹತ್ತಿದವಾಗಿದ್ದು ದೆಹಲಿ ಹೆಚ್ಚಿನ ಪ್ರಯಾಣ ಹಿಡಿಯುತ್ತದೆ ಎಂಬುದು ಪ್ರವಾಸಿಗರ ಮಾಹಿತಿ. ಎಲ್ಲಾ ಪ್ರಯಾಣದಲ್ಲಿ ಹೋಗುವ ಗಮ್ಯ ಅಷ್ಟು ಸೊಗಸಾಗಿಲ್ಲದ್ದಿದ್ದರು ಹೋಗುವ ದಾರಿ ಮನಮೋಹಕವಾಗಿರುತ್ತದೆ. ಮುಕ್ಯವಾಗಿ ಈ ಹಿಮಾಚ್ಚಾದಿತ ಚಾರಣಗಳು ಅವಿಸ್ಮರಣೀಯ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ, ಆದರೆ ಸೂಕ್ತ ಮುನ್ನಚ್ಚರಿಕೆ ಮತ್ತು ಸರಿಯಾದ ಮಾರ್ಗದರ್ಶನ ತುಂಬಾ ಮುಖ್ಯವಾಗಿರುತ್ತದೆ. ನೀವು ಚಾರಣ ಪ್ರಿಯರಾಗಿದ್ದರೆ 54 ಕಿಲೋಮೀಟರ್ ಚಾರನ ಮಾಡಿ ಮಣಿ ಮಹೇಶ್ ಸರೋವರದಲ್ಲಿ ನೀರು ಮುಟ್ಟಿಬನ್ನಿ.

LEAVE A REPLY

Please enter your comment!
Please enter your name here