`ಗೂಗಲ್ ಪೇ’ ಮೂಲಕ ಕರೆಂಟ್ ಬಿಲ್ ಕಟ್ಟಲು ಹೋಗಿ ಕಳೆದುಕೊಂಡಿದೆಷ್ಟು ಗೊತ್ತಾ?

0
296

ಭಾರತದಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ನಂತಹ ಅಪ್ಲಿಕೇಶನ್ ಗಳು ಬಂದಮೇಲೆ ಸಾರ್ವಜನಿಕರಿಗೆ,ವ್ಯವಾರಸ್ತರಿಗೆ ಸಾಕಷ್ಟು ಅನುಕೂಲಗಳಾಗುತ್ತಿದೆ. ಜೇಬಿನಲ್ಲಿ ಹಣ ಇಡುವ ಅವಶ್ಯಕತೆನೇ ಇಲ್ಲ. ನಮ್ಮ ಖಾತೆಯಲ್ಲಿ ಹಣವಿದ್ದರೆ ಸಾಕು ಈ ರೀತಿಯಾ ಅಪ್ಲಿಕೇಶನ್ ಗಳ ಮೂಲಕ ಎಲ್ಲರಿಗೂ ಹಣ ಪಾವತಿಸಬಹುದು. ಆದರೆ ಮುಂಬೈನಲ್ಲಿ ಒರ್ವ ವ್ಯಕ್ತಿ ಗೂಗಲ್ ಪೇ ಮೂಲಕ ಕರೆಂಟ್ ಬಿಲ್ ಕಟ್ಟಲು ಹೋಗಿ ಬರೋಬ್ಬರಿ 96 ಸಾವಿರ ರೂ ಹಣವನ್ನು ಕಳೆದುಕೊಂಡಿದ್ದಾನೆ. ಆದರೆ ಇದು ಗೂಗಲ್ ಪೇ ಇಂದ ಆಗಿದ್ದಲ್ಲ.

ಇತ್ತಿಚ್ಚೀಗೆ ಜೇಬುಗಳ್ಳರಿಗಿಂತ ಆನ್‍ಲೈನ್ ಕಳ್ಳರೆ ಜಾಸ್ತಿಯಾಗಿದ್ದಾರೆ. ಹೌದು ಸೈಬರ್ ಕಳ್ಳರು ಗೂಗಲ್ ಪೇಯನ್ನು ದಾಳವಾಗಿ ಬಳಸಿಕೊಂಡು ಹಣ ಕಳ್ಳತನ ಮಾಡಲು ಆರಂಭಿಸಿದ್ದಾರೆ. ಮುಂಬೈನಲ್ಲಿ ವಂಚಕನೊಬ್ಬ ನಾನು ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಸುಳ್ಳು ಹೇಳಿ, 31 ವರ್ಷದ ವ್ಯಕ್ತಿಯೊಬ್ಬನಿಗೆ 96 ಸಾವಿರ ರೂ ಹಣವನ್ನು ವಂಚಿಸಿದ್ದಾನೆ. ಮುಂಬೈನ ಅಂಧೇತಿ ಪೋಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ವ್ಯಕ್ತಿ ದೂರು ಸಲ್ಲಿಸಿದ್ದಾನೆ.ಪ್ರಕರಣ ದಾಖಲಾಗಿದೆ.

ಗೂಗಲ್ ಪೇ ಮುಖಾಂತರ ಆ ವ್ಯಕ್ತಿ ವಿದ್ಯುತ್ ಬಿಲ್ ಪಾವತಿಸಲು ಹೊಟಿದ್ದಾನೆ. ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಹಣ ವರ್ಗಾವಣೆಯಾಗಿಲ್ಲ. ಆದ ಕಾರಣ ಕಸ್ಟಮರ್ ಕೇರ್‍ಗೆ ಕರೆ ಮಾಡಿದ್ದಾನೆ. ಕಾಲ್ ನಲ್ಲಿ ಅವರು ಹಣ ಪಾವತಿ ಮಾಡುವಾಗ ಈ ರೀತಿಯಾದ ಸಮಸ್ಯೆಗಳು ಸಾಮಾನ್ಯವಾಗಿ ಎದುರಾಗುತ್ತದೆ. ತಲೆಕೆಡಿಸಿಕೊಳ್ಳಬೇಡಿ ನಾನೊಂದು ಲಿಂಕ್ ಕಳುಹಿಸುತ್ತೇನೆ ಅದರ ಮೇಲೆ ಕ್ಲಿಕ್ ಮಾಡಿ ಎಂದು ಸೂಚಿಸಿದ್ದಾರೆ.

ಇನ್ನು ಅವನ ಮೇಲೆ ನಂಬಿಕೆ ಇಟ್ಟು ಈ ವ್ಯಕ್ತಿ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾನೆ. ಮಾಡಿದ ತಕ್ಷಣ ಅವರ ಖಾತೆಯಿಂದ 96 ಸಾವಿರ ರೂ ಹಣ ವಂಚಕನ ಖಾತೆಗೆ ಹೋಗಿದೆ. ಹೀಗೆ ವರ್ಗಾವಣೆ ಆದ ಮೇಲೆ ಆ ವ್ಯಕ್ತಿಗೆ ತಾನು ವಂಚನೆ ಒಳಗಾಗಿರುವ ವಿಚಾರ ತಿಳಿದು ಬಂದಿದೆ. ಗೂಗಲ್ ಪೇ ಹೆಸರಲ್ಲಿ ದೂರು ದಾಖಲಾಗಿದ್ದು. ಆನಾಮಿಕ ವ್ಯಕ್ತಿಯ ವಿರುದ್ಧ ದೂರು ಪ್ರಕರಣವಾಗಿದೆ.

LEAVE A REPLY

Please enter your comment!
Please enter your name here