ಕೋಟಿಗಳ ಅಧಿಪತಿ ಮಲೆ ಮಹದೇಶ್ವರ !

0
145

ಕೊಳ್ಳೆಗಾಲ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟವು ಸುಂದರವಾದ ಪ್ರಕೃತಿಯ ಮಡಿಲಲ್ಲಿ ಇರುವ 77 ಮಲೆ ಒಡೆಯನ ಕೈಲಾಸವಾಗಿದೆ.

ಕೊಳ್ಳೆಗಾಲ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟವು ಸುಂದರವಾದ ಪ್ರಕೃತಿಯ ಮಡಿಲಲ್ಲಿ ಇರುವ 77 ಮಲೆ ಒಡೆಯನ ಕೈಲಾಸವಾಗಿದೆ.

ಬಾಲ ಯೋಗಿ ಮಹದೇಶ್ವರರು ಬೆಟ್ಟದಲ್ಲಿ ಸಿಕ್ಕ ಹುಲಿಯನ್ನೇ ವಾಹನವನ್ನಾಗಿ ಮಾಡಿಕೊಂಡು ಬೆಟ್ಟಗಳನ್ನು ಸುತ್ತುತ್ತಾ ಭಕ್ತರನ್ನು ಸಲಹುತ್ತಿದ್ದಾರೆ.

ಮಲೆಮಹದೇಶ್ವರ ತಿಂಗಳಿಗೆ ಎಷ್ಟು ದುಡಿಯುತ್ತಿದ್ದಾನೆ ಗೊತ್ತಾ ?

ಎಪ್ಪತ್ತೇಳು ಮಲೆಗಳ ಒಡೆಯ ಎಂದೇ ಕರೆಯಲ್ಪಡುವ ಮಲೆಮಹದೇಶ್ವರ ಮತ್ತೆ ಕೋಟ್ಯಾಧೀಶನಾಗಿ ಮೆರೆದಿದ್ದಾನೆ. ಹೌದು, ಹನೂರು ತಾಲೂಕಿನ ಮಲೆ‌ಮಹದೇಶ್ವರ ದೇಗುಲದಲ್ಲಿ ಪ್ರತಿ ತಿಂಗಳು ಮಾದಪ್ಪನ ಸನ್ನಿಧಿಗೆ ಭಕ್ತರ ಕಾಣಿಕೆ ರೂಪದಲ್ಲಿ ಕೋಟಿಗಟ್ಟಲೆ ಹಣ ಹರಿದು ಬರುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಲೆ ಮಹದೇಶ್ವರ ಬೆಟ್ಟದ ದೇಗುಲದ ಹುಂಡಿಯಲ್ಲಿ 1ಕೋಟಿ 25ಲಕ್ಷ 50ಸಾವಿರದ 612 ರೂಪಾಯಿ ನಗದು ಸಂಗ್ರಹವಾಗಿದೆ. ನಿನ್ನೆ ತಡರಾತ್ರಿವರೆಗೆ ಎಣಿಕೆ ಕಾರ್ಯ ನಡೆದಿದ್ದು ನಗದು ಹಾಗೂ 28 ಗ್ರಾಂ ಬಂಗಾರ, 1 ಕೆ.ಜಿ.300 ಗ್ರಾಂ ಬೆಳ್ಳಿ ರೂಪಸಲ್ಲಿ ಭಕ್ತರಿಂದ ಕಾಣಿಕೆ ಸಂಗ್ರವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳಲ್ಲಿ ಎಣಿಕೆ ಕಾರ್ಯ ನಡೆದಾಗ 1 ಕೋಟಿ 28 ಲಕ್ಷ ರೂ ನಗದು ಹಾಗೂ ಚಿನ್ನ, ಬೆಳ್ಳಿ ಸಂಗ್ರವಾಗಿತ್ತು. ಪ್ರತಿ ತಿಂಗಳು ಭಕ್ತರು ಆರಾಧ್ಯದೇವನಿಗೆ ಕೋಟಿ ಕೋಟಿ ನಗದು ಕಾಣಿಕೆ ಹುಂಡಿಗೆ ಹಾಕುತ್ತಿರುವುದು ಮಹಾದೇಶ್ವರನ ಭಕ್ತರ ಭಕ್ತಿಗೆ ಸಾಕ್ಷಿಯಾಗಿದೆ ಎಂಬುದು ಭಕ್ತರ ಭಕ್ತಿಪೂರ್ಣ ಮಾತಾಗಿದೆ.

LEAVE A REPLY

Please enter your comment!
Please enter your name here