ಈ ದ್ವೀಪ ರಾಷ್ಟ್ರದಲ್ಲೊಂದು ಮನೆಯ ಮಾಡಿ..

0
203

ದೇಶ ಸುತ್ತು ಕೋಶ ಓದು ಎನ್ನುವ ಮಾತಿಗೆ ಹಲವರ ಮೊದಲ ಆಯ್ಕೆ ದೇಶ ಸುತ್ತುವುದೇ ಆಗಿದೆ. ಹೀಗೆ ದೇಶ ಸುತ್ತುವವರು ಹಲವು ವಿಶೇಷತೆಗಳನ್ನು ಹುಡುಕುತ್ತಾರೆ, ಅವರಿಗೆ ಪ್ರತಿ ಅನುಭವವು ಅವಿಸ್ಮರಣೀಯವಾಗಿರಬೇಕು.

ಇಂತಹ ಪ್ರವಾಸ ಪ್ರಿಯರಿಗೆ ಕಡಲಿನೂರು ಇಂಡೋನೇಷ್ಯಾ ನೆಚ್ಚಿನ ತಾಣ. ಇಲ್ಲಿನ ಬೀಚ್‍ಗಳು ಜಗದೆಲ್ಲಾ ಪ್ರವಾಸಿಗರನ್ನು ಕರೆಯುತ್ತಿದೆ. ಸತ್ಕರಿಸುತ್ತದೆ. ಇಂತಹ ಇಂಡೋನೇಷ್ಯಾದಲ್ಲಿ ದಟ್ಟಕಾಡುಗಲಿವೆ ಇಲ್ಲಿಗೂ ಬೇಟಿ ನೀಡುವವರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಇಲ್ಲಿನ ಸರ್ಕಾರ ಹೊಸ ಪ್ಲಾನ್ ಮಾಡಿದೆ ಅರಣ್ಯದಲ್ಲೇ ಮನೆ ಮಾಡಿಕೊಟ್ಟರೆ ಪ್ರವಾಸಿಗರಿಗೆ ಹೆಚ್ಚು ಖುಷಿಯ ಅನುಭವ ಸಿಗಲಿದೆ ಅಂತ. ಆದರೆ ಇದು ಸಾಧ್ಯನಾ ಅಂತ ಕೇಳಬೇಡಿ ಮಾಡಿ ತೋರಿಸಿದೆ ಇಂಡೋನೇಷ್ಯಾ.

ದಟ್ಟ ಅರಣ್ಯದ ನಡುವೆ ಸ್ಥಳೀಯ ತಳಿಯಾಗಿರುವ ಆಸ್ಪರ್ ಬಿದಿರಿನ ಮರಗಳ ಮೇಲೆ ಮನೆಗಳನ್ನು ನಿರ್ಮಿಸಿದೆ. ಇಲ್ಲಿಂದ ಸುತ್ತಲಿನ ಅರಣ್ಯವನ್ನು ಸವಿಯಬಹುದಾಗಿದೆ. ಪರಿಸರಕ್ಕೆ ಪೂರಕವಾಗಿರುವ ಮನೆಗಳು ಐಷಾರಾಮಿಯಾಗಿಯೇ ಇವೆ. ಇಲ್ಲಿ ಖಾಸಗಿ ಈಜುಕೊಳವೂ ಇರಲಿದೆ. ವಾಹ್ ಎನಿಸುವ ಪೀಠೋಪಕರಣಗಳು ಎಲ್ಲವೂ ಇಲ್ಲಿದೆ.

ಇಂಡೊನೇಷ್ಯಾ ಎಂದಾಗ ಮೊದಲಿಗೆ ನೆನಪಾಗುವುದೇ ಇಲ್ಲಿನ ಸಮುದ್ರ ತೀರಗಲು ಮತ್ತು ದ್ವೀಪಗಳು. ಬಾಲಿ ದ್ವೀಪ ಹೆಚ್ಚು ಪ್ರಸಿದ್ಧಿಯಾಗಿದ್ದು, ಅತೀ ಹೆಚ್ಚಿನ ಪ್ರವಾಸಿಗರು ಮೊದಲ ಆಯ್ಕೆ ಇದೇ ಬಾಲಿ ದ್ವೀಪವಾಗಿರುತ್ತದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚು ಜನಪ್ರಿಯಗೊಳಿಸಲು ಮುಂದಾಗಿರುವ ಇಂಡೋನೇಷ್ಯಾ ಸರಕಾರ ಗ್ರೀನ್ ವಿಲೇಜ್ ಯೋಜನೆ ಆರಂಭಿಸಿದ್ದು ಕಾಡಿನ ಮಧ್ಯದಲ್ಲಿ ಮನೆ ಮಾಡಿಕೊಟ್ಟು ಆಹ್ವಾನಿಸುತ್ತಿದೆ.

ಸಮುದ್ರ ಮತ್ತು ಕಾಡಿನ ಅನುಭವ ಪಡೆಯಲು ವಿದೇಶ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರಿಗೂ ಈ ಸ್ಥಳಗಳು ಇಷ್ಟವಾಗಲಿವೆ. ಇತ್ತಿಚೆಗೆ ಅತಿ ಹೆಚ್ಚು ಭಾರತೀಯರು ಇಂಡೋನೇಷ್ಯಾ ಪ್ರವಾಸ ಕೈಗೊಳ್ಳುತ್ತಾರೆ, ಇಲ್ಲಿನ ದ್ವೀಪಗಳಲ್ಲಿ ಮತ್ತು ಸಮುದ್ರ ತೀರದಲ್ಲಿ ಮುಕ್ತವಾಗಿ ಸಂಚರಿಸುತ್ತಾರೆ ತಮ್ಮ ನೆನಪಿನ ಬುತ್ತಿಯಲ್ಲಿ ಅನೇಕ ನೆನಪುಗಳನ್ನು ಹೊತ್ತು ಬರುತ್ತಾರೆ.

ಇಂಡೋನೇಷ್ಯಾ ಒಂದು ಕಾಲದಲ್ಲಿ ಹಿಂದೂಗಳ ಬಾಹುಳ್ಯವಿದ್ದ ಪ್ರದೇಶವಾಗಿತ್ತು ಎನ್ನಲಾಗಿದೆ. ಇಲ್ಲಿ ಹಿಂದೂಗಳ ದೈವಾರಾಧನೆಯೂ ಇತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳಿವೆ. ದೇವಾಲಯಗಳು ಮತ್ತು ಮುಖ್ಯವಾಗಿ ರಾಮಾಯಣದ ಚಿತ್ರಿಕೆಗಳನ್ನು ಇಲ್ಲಿ ನೋಡಬಹುದು. ಆಚಿಜನೇಯ ಇಲ್ಲಿನ ನೆಚ್ಚಿನ ದೈವ, ಬಹು ಸಂಖ್ಯಾತ ಜನರು ಈಗಲೂ ಇಲ್ಲಿ ಹನುಮನನ್ನು ಆರಾಧಿಸುತ್ತಾರೆ.

LEAVE A REPLY

Please enter your comment!
Please enter your name here