ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರನ ಮದುವೆಗೆ ದೇವೇಗೌಡರಿಗೆ ಆಹ್ವಾನ..!

0
637

ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಎರಡು ದಿನಗಳ ಕಾಲ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಮಹಿಂದಾ ರಾಜಪಕ್ಸೆ ಅವರ ಅಧಿಕೃತ ಆಹ್ವಾನದ ಮೇಲೆ ದೇವೇಗೌಡರು ಈ ಪ್ರವಾಸ ಕೈಗೊಂಡಿದ್ದಾರೆ.

ಇನ್ನು ಶ್ರೀಲಂಕಾ ಪ್ರವಾಸದ ವೇಳೆ ಎಚ್.ಡಿ. ದೇವೇಗೌಡರು ಶ್ರೀಲಕಾಂಕದ ಪ್ರಮುಖ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ. ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ವಿಶೇಷ ಆತಿಥ್ಯವನ್ನು ಎಚ್.ಡಿ. ದೇವೇಗೌಡರಿಗೆ ಕಲ್ಪಿಸಿದ್ದಾರೆ. ಇನ್ನು ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಿಂದಲೂ ಮಹಿಂದಾ ರಾಜಪಕ್ಸೆ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಆಹ್ವಾನದ ಮೇಲೆ ಈ ಹಿಂದೆ ಒಮ್ಮೆ ದೇವೇಗೌಡರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು.

ಇನ್ನು ಶ್ರೀಲಂಕಾ ಪ್ರವಾಸದ ಮಧ್ಯೆಯೂ ಎಚ್.ಡಿ. ದೇವೇಗೌಡರು ಸೆಪ್ಟೆಂಬರ್ 22ರಂದು ಉತ್ತರಕಾಂಡದ ನೈನಿತಾಲ್‍ಗೆ ತೆರಳಲಿದ್ದು, ಹನುಮಾನ್ ಮಂದಿರ ಮತ್ತು ಆಶ್ರಮಕ್ಕೆ ಬೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 22ರಂದು ನವದೆಹಲಿಯಿಂದ ರೈಲಿನ ಮೂಲಕ ದೇವೇಗೌಡರು ನೈನಿತಾಲ್‍ಗೆ ತೆರಳಲಿದ್ದು, ಸೆಪ್ಟಂಬರ್ 23 ರಂದು ಸಂಜೆ ರೈಲಿನ ಮೂಲಕ ನವದೆಹಲಿಗೆ ವಾಪಸ್ ಆಗಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here