“ಜನಗಣಮನ” ಚಿತ್ರದಿಂದ ಮಹೇಶ್ ಬಾಬು ಔಟ್, ಯಶ್ ಇನ್!

0
157

ತೆಲುಗು ಚಿತ್ರೋದ್ಯಮದಲ್ಲಿ ಡೈನಾಮಿಕ್ ನಿರ್ದೇಶಕರೆಂದರೆ ಅದು ಪೂರಿ ಜಗನ್ನಾಥ್ ! ಭಾರತೀಯ ಚಿತ್ರರಂಗ ಕಂಡ ಒಬ್ಬ ಉತ್ತಮ ಕಥೆಗಾರ. ಮೂರು ಬಾರಿ ನಂದಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ..

ವಾಣಿಜ್ಯಿಕವಾಗಿ ಕಥೆ ಹೇಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಪೂರಿ ಜಗನ್ನಾಥ್ ಅವರು ಇಪ್ಪತ್ತು ವರ್ಷಗಳ ಚಲನಚಿತ್ರ ನಿರ್ಮಾಣದ ಅವಧಿಯಲ್ಲಿ, ಸಣ್ಣ ಬಜೆಟ್ ಚಿತ್ರಗಳಿಂದ ಭಾರತೀಯ ಬೆಳ್ಳಿ ಪರದೆಯಲ್ಲಿ ಮಾಡಿದ ಕೆಲವು ಚಿತ್ರಗಳು ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಗಳಾಗಿವೆ.. ಈ ಮೂಲಕ ತಮ್ಮ ಚಿತ್ರದ ಹೀರೋಗಳನ್ನು ಸೂಪರ್ ಸ್ಟಾರ್ ಗಳನ್ನಾಗಿ ಮಾಡಿದ್ದಾರೆ ..

2000 ನೇ ಇಸ್ವಿಯಲ್ಲಿ ಪವನ್ ಕಲ್ಯಾಣ್ ಅಭಿನಯದ ‘ಬದ್ರಿ’ ಚಿತ್ರವನ್ನು ನಿರ್ದೇಶನ ಮಾಡುವ ಮುಖಾಂತರ ಸಿನಿಮಾ ಇಂಡಸ್ಟ್ರಿಗೆ ಚೊಚ್ಚಲ ಪ್ರವೇಶ ಮಾಡಿದರು.. ಹಾಗೂ ಮಹೇಶ್ ಬಾಬು ಅಭಿನಯದ “ಪೋಕಿರಿ” ಸಿನಿಮಾಗಾಗಿ ದುಬೈನ ಐಫಾ ಅವಾರ್ಡ್ನಲ್ಲಿ , ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ!

ಸದ್ಯ ಮೂವತ್ತನಾಲ್ಕುಕ್ಕೂ ಹೆಚ್ಚು ಸಿನಿಮಾವನ್ನು ನಿರ್ದೇಶನ ಮಾಡಿರುವ ಪೂರಿ ಜಗನ್ನಾಥ್, ಸದ್ಯ ಈ ವರ್ಷ ನಿರ್ದೇಶನ ಮಾಡಿದ್ದ “ಇಸ್ಮಾರ್ಟ್ ಶಂಕರ್” ಸಿನಿಮಾ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ .. ಇದರ ಬೆನ್ನಲ್ಲೇ ಇಸ್ಮಾರ್ಟ್ ಶಂಕರ್ ಸಿಕ್ವೆಲ್ ಡಬ್ಬಲ್ ಇಸ್ಮಾರ್ಟ್ ಸಿನಿಮಾದ ಪ್ಲಾನಿಂಗ್ ನಲ್ಲಿರುವ ಪೂರಿ ಜಗನ್ನಾಥ್ ಇದರ ಜೊತೆಗೆ “ಜನಗಣಮನ” ಎಂಬ ಚಿತ್ರವನ್ನು ತಯಾರು ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದೆ ..

ದೇಶದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಸೇರಿದಂತೆ ಜನರನ್ನು ಬೆಚ್ಚಿ ಬೀಳಿಸುವಂತಹ ಅಪರಾಧ ಪ್ರಕರಣಗಳನ್ನು ಚಿತ್ರದ ಸ್ಟೋರಿಯಲ್ಲಿ ತರಲು ಪೂರಿ ಜಗನ್ನಾಥ್ ವರ್ಕೌಟ್ ಮಾಡುತ್ತಿದ್ದಾರೆ! ಅಲ್ಲದೇ ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದೆಯ೦ತೆ!

“ಜನಗಣಮನ” ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪ್ರಿನ್ಸ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ. ಕಾರಣವೇನೆಂಬುದು ಬಹಿರಂಗವಾಗಿ ತಿಳಿದು ಬಂದಿಲ್ಲ..

ಇನ್ನು ಮಹೇಶ್ ಬಾಬು ಅಭಿನಯಿಸ ಬೇಕಾಗಿದ್ದ ಜಾಗದಲ್ಲಿ ‘ಕನ್ನಡದ ರಾಕಿ ಬಾಯ್ ರಾಕಿಂಗ್ ಸ್ಟಾರ್ ಯಶ್’ ಅಭಿನಯಿಸುತ್ತಿದ್ದಾರಂತೆ ಎಂದು ತೆಲುಗು ಹಾಗೂ ರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಿವೆ. ಹಾಗೂ ಯಶ್ ನಟಿಸಬೇಕೆಂಬುದು ಪೂರಿ ಜಗನ್ನಾಥ್ ಅವರ ಅಭಿಪ್ರಾಯವಂತೆ.. ಇದಕ್ಕಾಗಿ ಎರಡು ಸಲ ಬೆಂಗಳೂರಿನಲ್ಲಿ ಯಶ್ ಅವರನ್ನು ಭೇಟಿಯಾಗಿರುವ ಜಗನ್ನಾಥ್ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಅಲ್ಲದೆ ಈ ಸಂಬಂಧ ಫೈನಲ್ ಮಾತುಕತೆ ಸದ್ಯದಲ್ಲಿ ನಡೆಯಲಿದೆ ಎಂಬ ವರದಿ ಹೊರಬಿದ್ದಿದೆ ..

ಎಲ್ಲ ಅಂದುಕೊಂಡಂತೆ ಆದರೆ ಯಶ್ ರವರ ಕೆಜಿಎಫ್ ಚಾಪ್ಟರ್ ೨ ಶೆಡ್ಯೂಲ್ ಮುಗಿಸಿದ ತಕ್ಷಣ ಪೂರಿ ಹಾಗು ಯಶ್ ಅವರ ಕಾಂಬಿನೇಷನ್ ನ ಜನಗಣಮನ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುವುದು ಬಹುತೇಕ ಖಚಿತವಾಗಲಿದೆ

LEAVE A REPLY

Please enter your comment!
Please enter your name here