ಡ್ರಾಮಾ ಜ್ಯೂನಿಯರ್ಸ್ ನಿಂದ ಗಟ್ಟಿಮೇಳದ ತನಕ ಮಹತಿ ಪಯಣ

0
1129

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ನಾಯಕಿ ಅಮೂಲ್ಯಳ ತಂಗಿ ಅಂಜಲಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮುದ್ದು ಮುಖದ ಹುಡುಗಿ ಹೆಸರು ಮಹತಿ ವೈಷ್ಣವಿ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಿಂಧೂರ ಧಾರಾವಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಯಾನ ಶುರು ಮಾಡಿದ ಮಹತಿಗೆ ಕಿರುತೆರೆ ಜಗತ್ತು ಹೊಸತು ನಿಜ, ಆದರೆ ಬಣ್ಣದ ಲೋಕವಲ್ಲ! ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ರ ಸ್ಪರ್ಧಿಯಾಗಿದ್ದ ಮಹತಿಯ ನಟನಾ ಶೈಲಿಗೆ ಮಾರು ಹೋಗದವರಿಲ್ಲ. ಪ್ರತಿ ವಾರವೂ ವಿನೂತನ ಶೈಲಿಯ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಮಹತಿಯ ಅಭಿನಯ ಕಂಡು ಎಲ್ಲರೂ ಕೊಂಡಾಡುತ್ತಿದ್ದರು.

ಡ್ರಾಮಾ ಜ್ಯೂನಿಯರ್ಸ್ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಛೋಟಾ ರಿಪೋರ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಮೊಗ್ಗದ ಕುವರಿ ಮಹತಿ ಅಲ್ಲಿಯೂ ಸೈ ಎನಿಸಿಕೊಂಡಿದ್ದರು. ಅರಳು ಹುರಿದಂತೆ ಪಟಪಟನೆ ಮಾತಾನಾಡುವ ಈಕೆ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಳ ತಂಗಿಯಾಗಿ ನಟಿಸುತ್ತಿದ್ದಾರೆ‌. ಇಂದು ಮಹತಿ ಎಲ್ಲಿಯೇ ಹೋದರೂ ಜನ ಆಕೆಯನ್ನು ಅಂಜಲಿ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಅಂಜಲಿ ಪಾತ್ರ ಈ ಪೋರಿಗೆ ಹೆಸರನ್ನು ತಂದುಕೊಟ್ಟಿದೆ.

ಮಹತಿಯ ಪ್ರತಿಭೆ ಕೇವಲ ನಟನೆಗೆ ಮಾತ್ರ ಸೀಮಿತವಲ್ಲ, ಬದಲಿಗೆ ಆಕೆ ಉತ್ತಮ ಹಾಡಿಗಾರ್ತಿಯೂ ಹೌದು.‌ ಒಂದೇ ಪದದಲ್ಲಿ ಬಣ್ಣಿಸುವುದಾದರೆ ಆಕೆಯನ್ನು ಸಕಲಾಕಲಾವಲ್ಲಭೆ ಎಂದು ಕರೆದರೂ ತಪ್ಪಿಲ್ಲ. ಜೊತೆಗೆ ಮನೆಯೇ ಮೊದಲ ಪಾಠ ಶಾಲೆ ಎಂಬ ಗಾದೆಮಾತು ಈಕೆಯ ಪಾಲಿಗೆ ಅಕ್ಷರಶಃ ನಿಜ. ಯಾಕೆಂದರೆ ಮಹತಿ ಗೆ ಮೊದಲು ಸಂಗೀತ ಪಾಠ ಮಾಡಿದ್ದು ಅವಳ ಅಮ್ಮ ಸುಚಿತ್ರಾ. ಮುಂದೆ ಕರ್ನಾಟಕ ಶಾಸ್ತ್ರೀಯ ಸಂಗೀತನವನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಮಹತಿ ಪ್ರತಿಭೆ ಆಗಾಧವಾದುದು ಹೌದು.

ನವರಸ ನಾಯಕಿ ಬಿರುದು ಪಡೆದಿರುವ ಮಲೆನಾಡ ಬೆಡಗಿ ಮಹತಿ
ರಂಭಾಪುರಿ ಶ್ರೀಗಳಿಂದ ‘ಅಭಿನಯ ಕಿಶೋರಿ’, ಹಿರೇಮಗಳೂರು ಕಣ್ಣನ್ ಅವರಿಂದ ‘ಅಭಿನಯ ರಾಣಿ’ ಎಂಬ ಬಿರುದು ಪಡೆದುಕೊಂಡಿದ್ದಾರೆ. ನಾವು ಎಳೆಯರು ನಾವು ಗೆಳೆಯರು ಸಿನಿಮಾದಲ್ಲಿ ನಟಿಸಿರುವ ಮಹತಿ ವೈಷ್ಣವಿ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

LEAVE A REPLY

Please enter your comment!
Please enter your name here