ಗಾಂಧಿ ಹತ್ಯೆಯ ಸಂಚುಕೋರ “ಸಾವರ್ಕರ್ ಎಂಬ ದೇಶದ್ರೋಹಿ” ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತೇ ?

0
461

ತಾನು ಕಲಿತ ವಿದ್ಯೆ ತನಗೆ ಮಾತ್ರವಲ್ಲದೇ ಸಮಾಜದ ಹಿತಕ್ಕೆ ಬಳಕೆಯಾಗಬೇಕೆಂಬ ತತ್ವದಲ್ಲಿ ಪ್ರಬಲವಾಗಿ ನಂಬಿಕೊಂಡು ಆಫ್ರಿಕಾದ ವಿಮೋಚನಾ ಚಳುವಳಿಗಾಗಿ ನೆಲ್ಸನ್ ಮಂಡೇಲಾ ಅವರೊಂದಿಗೆ ಸುದೀರ್ಘವಾಗಿ ಹೋರಾಟ ನಡೆಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅದೇ ಅನುಭವ ದೊಂದಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ತನ್ನ ಅಹಿಂಸಾ ತತ್ವಗಳಿಂದಲೇ ಅತಿ ದೊಡ್ಡ ಚಳುವಳಿಯನ್ನು ಸಂಘಟಿಸಿ ಭಾರತದ ಸ್ವಾತಂತ್ರ್ಯ ಸಾಧನೆಗಾಗಿ ಬಹುದೊಡ್ಡ ಕೊಡುಗೆಯನ್ನು ನೀಡಿದ ಗಾಂಧಿಯವರನ್ನು ಅಸಹನೀಯ ಶಕ್ತಿಗಳು ಯೋಜಿತವಾಗಿ ಹತ್ಯೆಗೈದರು.

ಭಾರತಕ್ಕಾಗಿ ಹೋರಾಟ ನಡೆಸಿದ ವ್ಯಕ್ತಿಯೊಬ್ಬನಿಗೆ ಅರ್ಹವಾಗಿಯೇ ಸಲ್ಲಬೇಕಾಗಿದ್ದ ಗೌರವಗಳ ಬದಲಾಗಿ ಅವರನ್ನು ಹತ್ಯೆ ಮಾಡಿದ್ದು, ಅದೂ ಅವರ ಇಳಿ ವಯಸ್ಸಿನಲ್ಲಿ ಹತ್ಯೆ ಮಾಡಿದ್ದು ಸಂಸ್ಕೃತಿ, ಮಾನವೀಯತೆ, ನಾಗರೀಕತೆ ಹಾಗೂ ಭವ್ಯ ಪರಂಪರೆಗೆ ಮಸಿ ಬಳಿದಿತ್ತು. ಅದರಲ್ಲೂ ಮುಖ್ಯವಾಗಿ ಈ ದೇಶದ ದೊಡ್ಡ ದೇಶಪ್ರೇಮಿಯೆಂದೇ ಬ್ರಾಂಡ್ ಮಾಡಲಾಗುತ್ತಿರುವ ಸಾವರ್ಕರ್ ಅವರು ಗಾಂಧಿಯ ಹತ್ಯೆಗಾಗಿ ಸಂಚು ಮಾಡಿ ಹೇಗೆ ಶಿಕ್ಷೆಯಿಂದ ಪಾರಾದರು ಹಾಗೂ ಅಂದು ಏನೆಲ್ಲಾ ರೀತಿಯ ಚಟುವಟಿಕೆಗಳು ನಡೆದವು ಎಂಬುದನ್ನು ತಿಳಿಸುವುದು ಇಲ್ಲಿನ ಉದ್ದೇಶವಾಗಿದೆ.

ಭಾರತಕ್ಕೆ ಸ್ವತಂತ್ರ ಸಿಕ್ಕ 5 ತಿಂಗಳುಗಳ ಬಳಿಕ ಅಂದರೆ, 1948 ರ ಜನವರಿ 14 ರಂದು ಹಿಂದೂ ಮಹಾಸಭಾಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ನಾಥೂರಾಮ ಗೋಡ್ಸೆ, ನಾರಾಯಣ್ ಆಪ್ಟೆ ಹಾಗೂ ದಿಗಂಬರ್ ಬಾಡ್ಗೆ ಎಂಬ ಮೂವರು ಮುಂಬೈನಲ್ಲಿದ್ದ ಸಾವರ್ವಕರ್ ಸದನಕ್ಕೆ ಬಂದರು. ಬಾಡ್ಗೆ ಒಬ್ಬನನ್ನು ಬಿಟ್ಟು ಸಾವರ್ಕರ್ ಅವರನ್ನು ಸಲೀಸಾಗಿ ಭೇಟಿಯಾಗುವ ಅವಕಾಶವು ಇನ್ನಿಬ್ಬರಿಗೆ ಇತ್ತು . ಈ ಪೈಕಿ ನಾರಾಯಣ್ ಆಪ್ಟೆ ಗ್ರೆನೇಡ್ ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳನ್ನು ತನ್ನೊಟ್ಟಿಗೆ ಇಟ್ಟುಕೊಂಡಿದ್ದ ಆತ ಕೆಲ ಹೊತ್ತಿನ ಬಳಿಕ ವಿಭಜಿತ ಪಾಕಿಸ್ತಾನದಿಂದ ಬಂದಿದ್ದ ಮದನ್ ಲಾಲ್ ಪಹ್ವಾ ಹಾಗೂ ಹಿಂದೂ ಮಹಾಸಭಾದ ಸದಸ್ಯ ವಿಷ್ಣು ಕರ್ಕರೆ ಎನ್ನುವನ ಬಳಿ ಆ ಶಸ್ತ್ರಾಸ್ತ್ರಗಳನ್ನು ದೆಹಲಿಗೆ ಸಾಗಿಸಲು ಹೇಳಿದ.

1944 -45 ರಿಂದ ಸಾವರ್ಕರ್ ಪರಿಚಯ ಹೊಂದಿದ್ದ ಬಾಡ್ಗೆಯವರಿಗೆ (ಗಾಂಧಿಯ ಹತ್ಯೆಯ ಸಂಚುಕೋರರಲ್ಲಿ ಒಬ್ಬನಾಗಿದ್ದವನು) ನೆಹರೂ, ಗಾಂಧಿ ಹಾಗೂ ಹುಸೇನ್ ಶಹೀದ್ ಅವರನ್ನು ಕೊಲ್ಲಬೇಕೆಂದು ಅಂದುಕೊಳ್ಳುತ್ತಿದ್ದ ಸಾವರ್ಕರ್ ಅವರ ನಿರ್ಧಾರದ ಬಗ್ಗೆ ತಿಳಿದಿತ್ತು.

ಪೂನಾದಲ್ಲಿ ತಮ್ಮ ಕೆಲವೊಂದು ಕೆಲಸಗಳನ್ನು ಮುಗಿಸಿಕೊಂಡ ಬಾಡ್ಗೆ ದೆಹಲಿಯಲ್ಲಿ ತಮ್ಮ ಕೆಲಸವನ್ನು ಮಾಡುವ ಸಲುವಾಗಿ ಜನವರಿ 17 ರಂದು ಬಾಂಬೆಗೆ ಹೋದರು. ಈ ಹಂತದಲ್ಲಿ ಒಮ್ಮೆ ನಾವೆಲ್ಲರೂ ತಾತ್ಯಾರಾವ್ (ಸಾವರ್ಕರ್) ಅವರ ದರ್ಶನ ಪಡೆದು ಅವರ ಆಶೀರ್ವಾದವನ್ನು ಪಡೆಯೋಣ ಎಂಬ ಸಲಹೆಯನ್ನು ನೀಡಿದನು. ಇದಕ್ಕೆ ಬಾಡ್ಗೆಯೂ ಸಹ ಒಪ್ಪಿದ ನಂತರ ಎಲ್ಲರೂ ಸಾವರ್ಕರ್ ಸದನಕ್ಕೆ ತೆರಳಿದರು. ನಂತರ ಬಾಡ್ಗೆಯನ್ನು ಕೆಳ ಮಹಡಿಯಲ್ಲಿ ನಿಲ್ಲಲು ಹೇಳಿದ ಅವರು ತಾವು ಮೇಲಿನ ಮಹಡಿಗೆ ತೆರಳಿದರು. ಅವರಿಬ್ಬರೂ ಸಹ ಕೆಳಗಡೆ ಬರುವಾಗ ಅವರೊಂದಿಗೆ ಸಾವರ್ಕರ್ ಕೂಡಾ ಕೆಳಗೆ ಬಂದು “ ಹೋಗುತ್ತಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ” ಎಂದು ಹರಸಿ ಕಳಿಸುತ್ತಾನೆ.

ಹೀಗೆ ಹೊರ ಬಂದವರೇ ಟ್ಯಾಕ್ಸಿಯಲ್ಲಿ ಹೋಗುವಾಗ ಆಪ್ಟೆ ಮತ್ತು ಬಾಡ್ಗೆ ಅವರು “ ಸಾವರ್ಕರ್ ಅವರು ಗಾಂಧೀಜಿಯವರ 100 ವರ್ಷಗಳ ಆಯಸ್ಸು ಮುಗಿದಿದ್ದು, ಈ ಕೆಲಸ ಯಶಸ್ವಿಯಾಗೇ ತೀರುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ” ಎಂದು ಮಾತನಾಡಿಕೊಂಡಿದ್ದರು.

ಹೀಗೆ ತಮ್ಮ ಕೆಲಸವು ಯಶಸ್ವಿಯಾಗೇ ತೀರುತ್ತದೆ ಎಂದು ದೆಹಲಿಗೆ ತೆರಳಿದ್ದ ತಂಡವು ಮೂರು ದಿನಗಳ ನಂತರ ಗಾಂಧೀಜಿಯವರು ಭಾಷಣ ಮಾಡುವ ಸ್ಥಳದಲ್ಲಿ ಬಾಂಬ್ ಅನ್ನು ಇಟ್ಟು ಅದು ಸ್ಪೋಟಗೊಳ್ಳಲು ವಿಫಲಗೊಂಡು ಅಲ್ಲಿ ಮದನ್ ಲಾಲ್ ಪಹ್ವಾ ಅವರು ಸೆರೆಯಾದರು ಮತ್ತು ಉಳಿದವರು ದೆಹಲಿಯನ್ನೇ ಬಿಟ್ಟು ಪಲಾಯನ ಮಾಡಿದರು. ಆದರೂ ಸಹ ಮದನ್ ಲಾಲ್ ಅವರು ತಮ್ಮ ಸಹಮಿತ್ರರ ಬಗ್ಗೆ ನಂಬಿಕೆಯಿಟ್ಟುಕೊಂಡೇ ಇದ್ದರು.

ಕಾಲಿನ್ಸ್ ಮತ್ತು ಲಾಪೀರ್ ಅವರು ಹೇಳಿದಂತೆ

“ ಓಡಿಹೋದ ಮೂವರು ಮತ್ತೆ ಹತ್ಯೆಯ ಪ್ರಯತ್ನವನ್ನು ಮಾಡೇ ಮಾಡುತ್ತಾರೆಂಬ ನಂಬಿಕೆ ಅವನಿಗಿತ್ತು. ಹೀಗಾಗಿಯೇ ಪೊಲೀಸರು ಎಷ್ಟು ಹಿಂಸೆ ನೀಡಿದರೂ ಸಹ ಆತ ಅವರ ಹೆಸರನ್ನು ಹೇಳಲಿಲ್ಲ. ಆದರೂ ಸಂದರ್ಭವೊಂದರಲ್ಲಿ ಆತ ತಾನು ಸಾವರ್ಕರ್ ಸದನದಿಂದ ಮಾರ್ಗದರ್ಶನ ಪಡೆದಿದ್ದೆ ಎಂದು ಹೇಳಿದನೇ ಹೊರತು ತನ್ನ ಗೆಳೆಯರ ಹೆಸರನ್ನು ಯಾವ ಕಾರಣಕ್ಕೂ ಹೇಳಲಿಲ್ಲ. ವಿಷಯ ತಿಳಿದ ಅಂದಿನ ದೆಹಲಿಯ ಡಿಐಜಿ ಆಗಿದ್ದ ಡಿ.ಡಬ್ಲ್ಯೂ.ಮೆಹ್ರಾ ಅವರು “ ನಿಮ್ಮ ಹತ್ಯೆಗೆ ಪ್ರಯತ್ನಿಸಿದ್ದು ಈತನೊಬ್ಬನೇ ಅಲ್ಲ, ಅವರದ್ದು ಒಂದು ತಂಡವೇ ಇದೆ.

ಹೀಗಾಗಿ ಬಿರ್ಲಾ ಮಂದಿರದಲ್ಲಿ ತಮಗೆ ರಕ್ಷಣೆಯ ಅಗತ್ಯವಿದ್ದು ಇಲ್ಲಿಗೆ ಬರುವ ಅನುಮಾನಾಸ್ಪದ ವ್ಯಕ್ತಿಗಳನ್ನು ನಾವು ತನಿಖೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಮಾತಿಗೆ ಬೇಸರಗೊಂಡ ಗಾಂಧಿಯವರು “ದಯಮಾಡಿ ಹಾಗೆ ಮಾಡಬೇಡಿ, ಪ್ರಾರ್ಥನೆಗಾಗಿ ಬರುವಂತವರನ್ನು ತನಿಖೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ “ನನ್ನ ರಕ್ಷಣೆಗೆ ರಾಮನಿದ್ದಾನೆ, ನೀವು ಪೊಲೀಸರು ಹೀಗೆ ಬಂದು ನನ್ನ ಪ್ರಾರ್ಥನಾ ಸ್ಥಳವನ್ನು ಹಿಂಸಾತ್ಮಕ ಗೊಳಿಸಲು ನಾನು ಬಿಡುವುದಿಲ್ಲ , ರಾಮನೇ ನನ್ನನ್ನು ರಕ್ಷಿಸುತ್ತಾನೆಂದು, ಗಾಂಧಿಯವರು ಹೇಳುತ್ತಾರೆ.

ಆದರೆ ರಾಮನ ಅಂಧ ಭಕ್ತಿಯಲ್ಲಿ ತೊಡಗಿದ್ದ ಗಾಂಧಿಗೆ ವಾಸ್ತವದ ಪ್ರಜ್ಞೆಯಿದ್ದಂತೆ ಇರಲಿಲ್ಲ. ಹೀಗಾಗಿಯೇ ಮೊದಲ ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ಸಾವರ್ಕರ್ ಬಳಿ 3-4 ದಿನ ಇದ್ದು ಮರಳಿ ದೆಹಲಿಗೆ ಬಂದ ಗೋಡ್ಸೆ 1948 ರ ಜನವರಿ 30 ನೇ ತಾರೀಖಿನಂದು ಗಾಂಧೀಜಿಯವರ ಹಣೆಗೆ ಗುಂಡು ಹೊಡೆದು ಅವರನ್ನು ಹತ್ಯೆಗೈಯುತ್ತಾನೆ. ಇದಾದ ನಂತರ ಸರ್ದಾರ್ ಪಟೇಲ್ ಅವರು ಸಾವರ್ಕರ್ ನೇತೃತ್ವದ ಮತಾಂಧರ ಗುಂಪು ಗಾಂಧೀಜಿಯವರ ಹತ್ಯೆಗೆ ಕಾರಣ” ಎಂದು ಹೇಳುತ್ತಾರೆ.

ಈ ಹಂತದಲ್ಲಿ ಶರಣಾದ ಸಾವರ್ಕರ್ ಬ್ರಿಟಿಷರಿಗೆ ಬರೆಯುತ್ತಿದ್ದ ಹಾಗೆ ಭಾರತ ಸರ್ಕಾರಕ್ಕೂ ಕ್ಷಮಾಪಣಾ ಪತ್ರವನ್ನು ಬರೆದು “ ನನ್ನನ್ನು ಬಿಡುಗಡೆ ಗೊಳಿಸಿದರೆ ನಾನು ಯಾವುದೇ ಕೋಮು ಪ್ರಚೋದಕ ಅಥವಾ ರಾಜಕೀಯ ಚಟುವಟಕೆಗಳಲ್ಲಿ ತೊಡಗುವುದಿಲ್ಲ” ಎಂದು ಹೇಳುತ್ತಾನೆ. ಇದಾದ ನಂತರ ಸಾವರ್ಕರ್ ಅನ್ನು ಬಂಧಿಸಿ ನೆಹರೂ ಅವರಿಗೆ ಘಟನೆಯ ವರದಿಯಲ್ಲಿ ಪಟೇಲರು ಸಲ್ಲಿಸುತ್ತಾರೆ. ಆದರೆ ಈ ಹಂತದಲ್ಲಿ ಹಿಂದೂ ಮಹಸಾಭಾದ ನಾಯಕ ಶ್ಯಾಂ ಪ್ರಸಾದ್ ಮುಖರ್ಜಿಯವರು ಸಾವರ್ಕರ್ ಅವರಿಗೆ ಕ್ಷಮೆಯನ್ನು ನೀಡುವಂತೆ ಕೋರುತ್ತಾರೆ.

ವಿಚಾರಣೆಯ ದಿನ ಸಾವರ್ಕರ್ ತಪ್ಪಿಸಿಕೊಂಡ ಬಗೆ :

ಬಾಡ್ಗೆನ ಸಾಕ್ಷಿಯಾಗಿಟ್ಟುಕೊಂಡ ನಡೆದ ವಿಚಾರಣೆಯಲ್ಲಿ ಸಾವರ್ಕರ್ ಗೆ ತಪ್ಪಿಸಿಕೊಳ್ಳಲು ವಿಪುಲ ಅವಕಾಶಗಳು ದೊರೆಯುತ್ತವೆ. ಸಾವರ್ಕರ್ ಅವರು ನಾನು ಬಾಡ್ಗೆಯನ್ನು ಭೇಟಿಯೇ ಆಗಿಲ್ಲ. ಅಲ್ಲದೇ ಸಾವರ್ಕರ್ ಸದನದೊಳಗೆ ಬಂದ ಗೋಡ್ಸೆ ಹಾಗೂ ಆಪ್ಟೆ ಅವರು ನನ್ನನ್ನೇ ಭೇಟಿ ಮಾಡಲು ಬಂದಿದ್ದರು ಎಂಬುದಕ್ಕೆ ಸಾಕ್ಷಿಯೇನು? ಆ ಸದನದಲ್ಲಿ ದಾಮ್ಲೆ, ಭಿಂಡೆ ಮತ್ತು ಕೇಸರ್ ಕೂಡಾ ಇದ್ದರು. ಹೀಗಾಗಿ ಅವರನ್ನು ಭೇಟಿ ಮಾಡಲು ಬಂದಿರಬಹುದು ಎಂದು ವಾದಿಸುತ್ತಾನೆ.ಅಲ್ಲದೇ ಆಪ್ಟೆಯವರು ಸುಳ್ಳು ವಿಳಾಸದ ಹೆಸರಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದರಿಂದ ನಮ್ಮ ಹಿಂದೂಮಹಾಸಭಾಗೆ ಕೆಟ್ಟ ಹೆಸರು ತರಲು ಹೀಗೆಲ್ಲಾ ಮಾಡುತ್ತಿರಬಹುದಲ್ಲಾ ಎಂದು ಆಪ್ಟೆಯ ಮೇಲೆಯೇ ಘಟನೆಯನ್ನು ತಿರುಗಿಸುವ ಯತ್ನವನ್ನು ಸಾವರ್ಕರ್ ಮಾಡಿ ಹೇಗೋ ಊಹಾಪೋಹಗಳ ಸಹಾಯದಿಂದ ಬಚಾವಾಗುತ್ತಾನೆ.

ಸಾವರ್ಕರನೇ ತಪ್ಪಿತಸ್ಥನೆಂದು ಸಾಬೀತು ಮಾಡಿದ ಕಪೂರ್ ಆಯೋಗ !

1964 ರಲ್ಲಿ ಗೋಡ್ಸೆಯ ಸಹೋದರ ಬಿಡುಗಡೆಯಾದಾಗ ಅವನ ಸ್ಮರಣೆಗಾಗಿ ಕಾರ್ಯಕ್ರಮವೊಂದು ಜರುಗುತ್ತದೆ. ಅಲ್ಲಿ ಬಾಲ ಗಂಗಾಧರ ತಿಲಕರ ಮೊಮ್ಮಗನಾದ ಜಿ.ವಿ.ಕೇಟ್ಕಾರ್ ಅವರು ಗೋಡ್ಸೆಗೆ ಗಾಂಧಿಯನ್ನು ಕೊಲ್ಲಲು ಇರುವ ಉದ್ದೇಶ ತನಗೆ ತಿಳಿದಿತ್ತು ಎಂದು ಹೇಳುವ ಮೂಲಕ ದೊಡ್ಡ ವಿವಾದವನ್ನು ಸೃಷ್ಟಿಸುತ್ತಾನೆ. ಈ ಹಿನ್ನಲೆಯಲ್ಲಿ ಈ ವಿಷಯವನ್ನು ತನಿಖೆ ಮಾಡಲು 1969 ರಲ್ಲಿ ನ್ಯಾಯಾಧೀಶರಾದ ಜೀವನ್ ಲಾಲ್ ಕಪೂರ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗದ ಗಂಭೀರ ಅಧ್ಯಯನದಲ್ಲಿ ಸಾವರ್ಕರ್ ಅವರ ಇಬ್ಬರು ಸಹಚರರಿಂದ ಮದನ್ ಲಾಲ್ ಪಹ್ವಾ ಬಂಧನದ ನಂತರ ಜನವರಿ 23 ಮತ್ತು 24 ರಂದು ಗೋಡ್ಸೆ ಮತ್ತು ಆಪ್ಟೆ ಸಾವರ್ಕರ್ ಅವರನ್ನು ಭೇಟಿಯಾಗಲು ಬಂದಿದ್ದ ಸಂಗತಿಯು ಬಯಲಿಗೆ ಬರುತ್ತದೆ.

ಸಾವರ್ಕರ್ ನ ಅಂಗ ರಕ್ಷಕ ನಾಗಿದ್ದ ಅಪ್ಪ ರಾಮಚಂದ್ರನ ಹೇಳಿಕೆಯನುಸಾರ ಕಪೂರ್ ಅವರು “ಸಾವರ್ಕರ್ ತನಿಖೆಯ ವೇಳೆ ನ್ಯಾಯಾಲಯದ ಎದುರು ಸುಳ್ಳು ಹೇಳಿದ್ದಾನೆಂಬ ಅಂಶವನ್ನು ಸಾಬೀತು ಮಾಡಿ ನ್ಯಾಯಾಲಯದ ಮುಂದೆ ತಮ್ಮ ವರದಿಯನ್ನು ಸಾಕ್ಷಿ ಸಮೇತ ಸಲ್ಲಿಕೆ ಮಾಡುತ್ತಾರೆ”ಈ ವರದಿಯ ಪ್ರಕಾರ ಸಾವರ್ಕರ್ ಒಬ್ಬ ಕೊಲೆಗಡುಕ ಮನಸ್ಥಿತಿಯ ರಾಕ್ಷಸ ಎಂಬುದನ್ನು ಕಪೂರ್ ವರದಿಯು ಸಾಬೀತು ಪಡಿಸುತ್ತದೆ.

ಹೀಗಿದ್ದರೂ ಸಹ ಇಂತವರನ್ನು ಪೂಜನೀಯ ಎಂದು ಭಾವಿಸುವ ಮತೀಯ ಶಕ್ತಿಗಳು ದೇಶಕ್ಕಾಗಿ ಯಾವುದೇ ಹೋರಾಟ ನಡೆಸದೇ ಇದ್ದರೂ ಸಹ ಬಾಯಿ ಮಾತಲ್ಲಿ ದೇಶಭಕ್ತಿ ಎನ್ನುತ್ತಿರುವ ಅಪಾಯದ ಬಗ್ಗೆ ಅರಿತುಕೊಳ್ಳುವ ಜರೂರು ನಮ್ಮದಾಗಿದೆ.

LEAVE A REPLY

Please enter your comment!
Please enter your name here