ಮಳೆ ನಿಲ್ಲಲಿ ಎಂದು ಜನರು ಮಾಡಿದ್ದೇನು ಗೊತ್ತಾ?!

0
251

ಬರಗಾಲ ಬಂದರೆ ಸಾಕು ದೇಶದ ಸಾಕಷ್ಟು ಕಡೆ ಮಳೆ ಬರಲಿ ಎಂದು ಮಣ್ಣಿನಿಂದ ಮಳೆರಾಯನ ಪ್ರತಿಮೆ ಮಾಡಿ ಪೂಜಿಸುತ್ತಾರೆ. ಅಲ್ಲದೇ ಕತ್ತೆಗಳಿಗೆ ಮತ್ತು ಕಪ್ಪೆಗಳಿಗೆ ಮದುವೆ ಮಾಡಿಸಿರುವುದು ಅನೇಕ ಕಡೆ ಕಂಡು ಬಂದಿದೆ. ಇದನ್ನು ಮೂಡನಂಬಿಕೆ ಎನ್ನಬೇಕಾ ಅಥವಾ ಜನರು ಮಳೆ ಇಲ್ಲದೆ ಕಂಗಲಾಗುವ ಕಾರಣದಿಂದ ಈ ರೀತಿಯ ಪೂಜೆ ಮತ್ತು ಮದುವೆಗಳನ್ನು ಮಾಡಿಸಿದರೆ ಮಳೆ ಬರಬಹುದು ಎಂಬುವ ದೈರ್ಯ ತುಂಬಲು ಹಿರಿಯರು ಈ ರೀತಿ ಮಾಡಿದ್ದಾರೋ ದೇವರೇ ಬಲ್ಲ.

ಸಾಮನ್ಯವಾಗಿ ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡಿಸುತ್ತಾರೆ. ಆದರೆ ಇಲ್ಲೋಂದು ವಿಚಿತ್ರವಾದ ಘಟನೆ ಬೆಳಕಿಗೆ ಬಂದಿದೆ. ಮಳೆ ಬರಲಿ ಎಂದು ತಾವೇ ಮದುವೆ ಮಾಡಿಸಿದ ಕಪ್ಪೆಗಳಿಗೆ ಮಳೆ ನಿಲ್ಲಲಿ ಎಂದು ತಾವೇ ವಿಚ್ಛೇದನ ಕೊಡಿಸಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ. ದೇಶದ ಅನೇಕ ರಾಜ್ಯಗಳಲ್ಲಿ ಬಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಜನರು ನಲುಗುವಂತೆ ಆಗಿದೆ. ಇನ್ನು ಮಧ್ಯಪ್ರದೇಶದ ಭೂಪಾಲ್‍ನಲ್ಲಿಯೂ ಮಳೆಯಿಂದಾಗಿ ಸಾರ್ವಜನಿಕರು ತತ್ತರಿಸಿ ಹೋಗುತ್ತಿದ್ದಾರೆ. ಮಳೆಯಗಾಲ ಮುಗಿದರು ಮಳೆ ಆರ್ಭಟ ಮಾತ್ರ ಕಮ್ಮಿಯಾಗಿಲ್ಲ, ಇದರಿಂದ ಬೇಸತ್ತ ಜನರು ಈ ಹಿಂದೆ ತಾವೇ ಮದುವೆ ಮಾಡಿಸಿದ ಕಪ್ಪೆಗಳನ್ನು ಹುಡುಕಿಕೊಂಡು ಬಂದು ವಿಚ್ಛೇದನ ಕೊಡಿಸಿದ್ದಾರೆ.

ಜೂನ್ 19 (ಎರಡು ತಿಂಗಳ ಹಿಂದೆ) ಈ ಪ್ರದೇಶದಲ್ಲಿ ಬರಗಾಲವಿತ್ತು. ಆದುದರಿಂದ ಇಲ್ಲಿನ ಜನರೇ ಈ ಕಪ್ಪೆಗಳಿಗೆ ಮದುವೆ ಮಾಡಿಸಿದ್ದರು. ಇನ್ನು ಬಾರಿ ಮಳೆಯ ಕಾರಣ, ಆ ಜೋಡಿ ಕಪ್ಪೆಗಳನ್ನು ಹುಡುಕಿಕೊಂಡು ಬಂದ ಶಿವ ಶಕ್ತಿ ಮಂಡಲ ಸದಸ್ಯರು ವೇದಿಕ್ ಮಂತ್ರದ ಮೂಲಕ ವಿಚ್ಛೇದನ ಕೊಡಿಸಿದ್ದಾರೆ. ಕಳೆದ 28 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 48 ಎಂಎಂ ಬಾರಿ ಮಳೆಯಾಗಿದ್ದು ಅನೇಕ ಜಲಾಶಯಗಳು ಭರ್ತಿಯಾಗಿ ಗೇಟ್‍ಗಳನ್ನು ತೆರೆಯಲಾಗಿದೆ. ಅನೇಕ ಸ್ಥಳಗಳು ಪ್ರವಾಹಕ್ಕೆ ತುತ್ತಾಗಿವೆ.

LEAVE A REPLY

Please enter your comment!
Please enter your name here