ಸಾಮಾನ್ಯ ಗೇಮ್ ನಲ್ಲಿ ತಂದೆ ತನ್ನನ್ನು ಸೋಲಿಸಿದರು ಅಂತಾ ಈಕೆ ಏನು ಮಾಡಿದಳು ನೋಡಿ…

0
161

ಒಂದು ಸಾಮಾನ್ಯವಾದ ಆಟ ಎಂತಹ ಗಂಭೀರವಾದ ಕಾನೂನು ಸಮರಕ್ಕೆ ಕಾರಣವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಲೂಡೋ ಗೇಮ್ ನಲ್ಲಿ ತಂದೆ ತನ್ನನ್ನು ಸೋಲಿಸಿದರು ಎಂಬ ಕಾರಣಕ್ಕೆ ಯುವತಿಯೊಬ್ಬಳು ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ನಿಜಕ್ಕೂ ಈ ವಿಷಯ ಅಚ್ಚರಿಯ ಜೊತೆಗೆ ಕುತೂಹಲವನ್ನು ಮೂಡಿಸುತ್ತದೆ. ಕೇವಲ ಒಂದು ಆಟದಲ್ಲಿ ತನ್ನ ತಂದೆ ತನ್ನನ್ನು ಸೋಲಿಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಕರಣ ಕೋರ್ಟ್ ಮುಂದೆ ಬಂದು ನಿಂತಿರುವುದು ವಿಚಿತ್ರವೆ. ಆದರೆ ನಂಬಿಕೆ ಕಳೆದುಕೊಂಡಾಗ, ಪರಿಸ್ಥಿತಿ ಬದಲಾದಾಗ ಕೆಲವೊಮ್ಮೆ ಮನುಷ್ಯನ ಮನಸ್ಥಿತಿ ಏನೆಲ್ಲ ಅನಾಹುತಗಳನ್ನು ಸೃಷ್ಟಿಸುತ್ತದೆ ನೋಡಿ.

ಒಂದು ರೀತಿ ಈ ಘಟನೆ ನಂಬಲು ಅಸಾಧ್ಯವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು, ದೊಡ್ಡವರು ಆನ್ ಲೈನ್ ಗೇಮ್ ಗೆ ಅಡಿಕ್ಟ್ ಆಗಿ, ಮೋಸ ಹೋಗಿರುವ, ಹಣ ಕಳೆದುಕೊಂಡಿರುವ,ಪ್ರಾಣಾಪಾಯಗಳನ್ನು ತಂದುಕೊಂಡಿರುವ ಸಂದರ್ಭಗಳನ್ನು ನೋಡಿದ್ದೇವೆ. ಕೇಳಿದ್ದೇವೆ… ಈ ಸಂಗತಿ ಇದೆಲ್ಲಕ್ಕಿಂತ ವಿಭಿನ್ನ… ಚಾರ್ಟ್ ಹಿಡಿದು ಲೂಡೋ ಗೇಮ್ ಆಡುತ್ತಿದ್ದ ವೇಳೆ ತಂದೆ ತನಗೆ ಮೋಸ ಮಾಡಿ ಸೋಲಿಸಿದ್ದಾರೆ ಎಂಬ ಕಾರಣಕ್ಕೆ 24 ವರ್ಷದ ಯುವತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಘಟನೆ ನಡೆದದ್ದು ಬೇರೆ ಯಾವುದೋ ದೇಶದಲ್ಲಲ್ಲ ಭಾರತದಲ್ಲಿ ಎಂಬುದು ವಿಶೇಷ. ಹೌದು. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ಘಟನೆ ನಡೆದಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಿಂದ ಆಚೆ ಬರಲಾಗದೇ, ಕಾಲ ಕಳೆಯಲು ಹಲವರು ವಿವಿಧ ಗೇಮ್ ಗಳ ಮೊರೆ ಹೋಗಿದ್ದಾರೆ. ಹೀಗೆ ಭೋಪಾಲ್ ನಲ್ಲಿ ತಂದೆ ಮಗಳಿಬ್ಬರು ಲುಡೋ ಗೇಮ್ ಆಡಿದ್ದಾರೆ. ಈ ವೇಳೆ ಒಂದು ಕಾಯಿ ಚಲಿಸುವ ಮೂಲಕ ತಂದೆ ಗೇಮ್ ನಲ್ಲಿ ಗೆಲುವು ಸಾಧಿಸಿದ್ದಾರೆ. ತಾನು ಗೇಮ್ ನಲ್ಲಿ ಗೆಲ್ಲುತ್ತೇನೆ ಎಂದು ಭಾವಿಸಿದ್ದ ಮಗಳಿಗೆ ನಿರಾಶೆಯಾಗಿದೆ. ಅಲ್ಲದೇ ತನ್ನ ತಂದೆ ಮೋಸದಿಂದ ತನ್ನನ್ನು ಸೋಲಿಸಿದರಲ್ಲ ಎಂಬ ನೋವು ಆಕೆ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ.

ಆಟದಲ್ಲಿ ತಂದೆ ತನ್ನನ್ನು ಸೋಲಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿರುವ ಆಕೆ ಮಾನಸಿಕವಾಗಿ ತುಂಬಾ ನೋವು ಅನುಭವಿಸಿದ್ದಾಳೆ. ಅಂತಿಮವಾಗಿ ತಂದೆ-ಮಗಳ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಳ್ಳಲು ಮುಂದಾಗಿದ್ದಾಳೆ. ಇದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ಬಾರ್ ಕೌನ್ಸಿಲ್ ಮುಂದೆ ತನ್ನ ನೋವು ಹೇಳಿಕೊಂಡಿದ್ದಾಳೆ. ಜೀವನದಲ್ಲಿ ತನ್ನ ಎಲ್ಲಾ ಇಷ್ಟಗಳನ್ನು ಪೂರೈಸಿರುವ ತಂದೆ ಲೂಡೋ ಗೇಮ್ ನಲ್ಲಿ ಕೂಡ ತನ್ನನ್ನು ಗೆಲ್ಲಿಸಬಹುದಿತ್ತು. ಆಟದಲ್ಲಿ ಮೋಸ ಮಾಡಿ ತನ್ನ ಸೋಲಿಸಿದ್ದು ತಪ್ಪು. ಇದರಿಂದಾಗಿ ನನಗೆ ತಂದೆಯ ಮೇಲಿನ ಗೌರವ-ವಿಶ್ವಾಸ ಇಲ್ಲದಂತಾಗಿದೆ. ಹಾಗಾಗಿ ತನಗೆ ನ್ಯಾಯ ಕೊಡಿಸಬೇಕು ಎಂದು ಕೇಳಿದ್ದಾಳೆ. ಆಕೆಯ ಮನಸ್ಥಿತಿ ನೋಡಿದ ಬಾರ್ ಕೌನ್ಸಿಲ್ ನಾಲ್ಕು ಬಾರಿ ಆಕೆಯ ಮನವೊಲಿಸುವ ಯತ್ನ ನಡೆಸಿದೆ. ಆಟವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿ ಕಾನೂನು ಸಮರದವರೆಗೆ ಹೋಗಬಾರದು ಎಂದು ಬುದ್ಧಿ ಹೇಳಿದ್ದಾರೆ. ಸಧ್ಯ ಯುವತಿ ತಂದೆಯ ಮೇಲಿನ ಧ್ವೇಶದ ಭಾವನೆಯಿಂದ ಹೊರಬಂದಿದ್ದಾಳೆ.

ಕುಟುಂಬ ಕಲಹ, ಆಸ್ತಿ ವಿಚಾರವಾಗಿ ಮಕ್ಕಳು ಕೋರ್ಟ್ ಮೊರೆ ಹೋಗುವುದು ಸಾಮಾನ್ಯ. ಆದರೆ ಒಂದು ಸಾಮಾನ್ಯ ಲೂಡೋ ಗೇಮ್ ನಲ್ಲಿ ಸೋಲಿಸಿದ್ದಕ್ಕೆ ತಂದೆ ವಿರುದ್ಧವೇ ಮಗಳು ನ್ಯಾಯಾಲಯದ ಮೆಟ್ಟಿಲೇರುವುದು ವಿಪರ್ಯಾಸ. ಆಟದ ಸಂದರ್ಭಗಳಲ್ಲಿ ಇಲ್ಲವೆ ಸಾಮಾನ್ಯ ಸಂದರ್ಭಗಳಲ್ಲಿ ತಮಾಷೆಗಾಗಿ ಪೋಷಕರು ಮಕ್ಕಳಿಗೆ ಸವಾಲು ಹಾಕುವುದು, ಚಾಲೇಂಜ್ ಕಟ್ಟುವುದು ಕೂಡ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿ ಇಂತಹ ಸಂದರ್ಭ ಎದುರಾಗಲು ಕೂಡ ಕಾರಣವಾಗಬಹುದಲ್ಲವೇ…?

LEAVE A REPLY

Please enter your comment!
Please enter your name here