ವೃದ್ಧಾಶ್ರಮದಲ್ಲಿ ಅರಳಿದ ಪ್ರೇಮ ಕಾವ್ಯ : ಅರವತ್ತರ ಹರೆಯದಲ್ಲಿ ನಡೆಯಿತು ವಿವಾಹ !

0
579

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಅಂತಾರೆ . ಅದಕ್ಕೆ ಸಾಕ್ಷಿ ಈ ವೃದ್ಧ ಜೋಡಿಯ ಕಥೆ . ಮನೆ ಸಂಸಾರ ಮಕ್ಕಳು ಅಂತ ಜೀವನವಿಡೀ ದುಡಿದು ಕೊನೆಗೆ ಇಳಿವಯಸ್ಸಲ್ಲಿ ಆಸರೆಗಾಗಿ ವೃದ್ಧಾಶ್ರಮ ಸೇರಿದ್ದ ಅಜ್ಜ ಅಜ್ಜಿಯಿಬ್ಬರು ಈಗ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ . ಈ ಘಟನೆ ನಡೆದಿರೋದು ಕೇರಳದಲ್ಲಿ.

 

ಪ್ರೀತಿ ಕುರುಡು ಎಂದು ಹೇಳುತ್ತಾರೆ. ಹೌದು ಪ್ರೀತಿಸಲು ಯಾವುದೇ ಕಾರಣ ಬೇಕಿಲ್ಲ. ಪ್ರೀತಿಗೆ ವಯಸ್ಸಿನ ಕಾಲದ ಮಿತಿಯಿಲ್ಲ. ತಮ್ಮ ವಯಸ್ಸಿನಲ್ಲಿ ವೃದ್ಧರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 65 ನೇ ವಯಸ್ಸಿನ ಬಳಿಕ ನಾನು ಯಾರನ್ನಾದರೂ ಪ್ರೇಮಿಸುತ್ತೇನೆ ಎಂದು ಊಹಿಸಿಯೂ ಇರಲಿಲ್ಲ ಎಂದು ಕೇರಳದ ಲಕ್ಷ್ಮಿ ಅಮ್ಮಳ್ ಹೇಳುತ್ತಾರೆ. ಗಂಡನನ್ನು ಕಳೆದು ಕೊಂಡ ಬಳಿಕ ಲಕ್ಷ್ಮಿಯವರು ಸರ್ಕಾರೀ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದರು. ಇದೀಗ 67 ವರ್ಷದ ಕೊಚಾನಿಯನ್ ಮೆನನ್ ಅವರನ್ನು ವಿವಾಹವಾಗಿದ್ದಾರೆ.. ಇದೇ ಶನಿವಾರ ಮದುವೆ ಸಮಾರಂಭ ನಡೆದಿದ್ದು. ಈ ಸಮಾರಂಭದಲ್ಲಿ ಸಚಿವ ವಿ . ಎಸ್ ​​ ಶಿವಕುಮಾರ್ ​ ಕೂಡ ಹಾಜರಿದ್ದರು!

ಅಂದ್ಹಾಗೆ ಕೊಚಾನಿಯನ್ ಹಾಗೂ ಲಕ್ಷ್ಮೀ ಅವರದ್ದು ಹಳೇ ಪರಿಚಯ . ಕೆಲವು ವರ್ಷಗಳ ಹಿಂದೆ ಲಕ್ಷ್ಮೀ ಅವರ ಆಗಿನ ಪತಿಯ ಜೊತೆ ಕೊಚಾನಿಯನ್ ಮೆನನ್ ಕೆಲಸ ಮಾಡುತ್ತಿದ್ದರು . ಗಂಡನನ್ನು ಕಳೆದುಕೊಂಡ ನಂತರ ಲಕ್ಷ್ಮೀ ವೃದ್ಧಾಶ್ರಮ ಸೇರಿದ್ರು . ಅತ್ತ ಕೊಚಾನಿಯನ್ ಅವರನ್ನ ಕೂಡ ಕುಟುಂಬಸ್ಥರು ಅನಾಥರಾಗಿಸಿದ್ರಿಂದ ಅವರೂ ಕೂಡ ಅದೇ ವೃದ್ಧಾಶ್ರಮದಲ್ಲಿದ್ದರು . ಇಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿ , ಸ್ನೇಹ ಬೆಸೆದುಕೊಂಡರು . ಈ ಸ್ನೇಹ ಪ್ರೀತಿಗೆ ತಿರುಗಿತು.

ಹೀಗಾಗಿ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ರಂತೆ . ತಮ್ಮ ನಿರ್ಧಾರವನ್ನ ವೃದ್ಧಾಶ್ರಮದ ಇತರರ ಜೊತೆ ಹಂಚಿಕೊಂಡಾಗ ಅವರು ಖುಷಿಯಿಂದ ಒಪ್ಪಿ ಸಾಂಪ್ರದಾಯಿಕ ಮದುವೆ ಸಮಾರಂಭ ಏರ್ಪಡಿಸಿದ್ದು ವೃದ್ದಾಶ್ರಮದ ಸಹಪಾಠಿಗಳು ಈ ಜೋಡಿಗೆ ಮೆಹಂದಿ ಸಂಗೀತ ಕೂಟ ಹೀಗೆ ಎಲ್ಲಾ ಸಾಂಪ್ರದಾಯಿಕ ರಿವಾಜುಗಳೊಂದಿಗೆ ಮದುವೆ ಮಾಡಿಸಿದರು.

 

 

ಕೃಷಿ ಸಚಿವ ಶಿವಕುಮಾರ್ ​ ಅವರಿಗೆ ಇವರ ಪ್ರೀತಿಯ ವಿಷಯ ತಿಳಿದು , ಅವರು ನಾನೂ ಸಹ ಮದುವೆ ಸಮಾರಂಭದಲ್ಲಿ ಭಾಗವಹಿಸುತ್ತೇನೆ ಎಂದಿದ್ದರು . ಅದರಂತೆ ಸಮಾರಂಭಕ್ಕೆ ಸಾಕ್ಷಿಯಾದ ಸಚಿವರ ಜೊತೆ ಜಿಲ್ಲಾಧಿಕಾರಿ ಎಸ್ ​​ ಶಾನವಾಸ್ ​ ಕೂಡ ವಿವಾಹ ಕಾರ್ಯಕ್ರಮದಲ್ಲಿ ಹಾಜರಿದ್ದರು .

LEAVE A REPLY

Please enter your comment!
Please enter your name here