ಉಡುಪಿಯ ಕಾರ್ಕಳದಲ್ಲಿರುವ “ಭಗವಾನ್ ಬಾಹುಬಲಿ”!

0
133

ಉಡುಪಿಯ ೪೦ ಕಿಲೋಮೀಟರ್ ಆಗ್ನೇಯಕ್ಕೆ ಇರುವ ಕಾರ್ಕಳಕ್ಕೆ ಹಿಂದೆ ಪಾಂಡ್ಯ ನಗರಿ ಎನ್ನುವ ಸುಂದರ ಹೆಸರಿತ್ತು.. ಸಮೃದ್ಧಿಯಾಗಿ ಬೀಳುವ ಮಳೆಯಿಂದ ಅಥವಾ ವಿಫಲವಾಗಿ ಇಲ್ಲಿ ದೊರೆಯುವ ಕಪ್ಪು ಶಿಲೆಯಿಂದಾಗಿ, ಕಾರ್ಕಳ ಎಂಬ ಹೆಸರು ಬಂತೆಂದು ಪ್ರತೀತಿ !

ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಕಾರ್ಕಳವೂ ಪ್ರಮುಖವಾದದ್ದು..
ಕರ್ನಾಟಕದಲ್ಲಿ ಶ್ರವಣಬೆಳಗೊಳ , ಧರ್ಮಸ್ಥಳ, ಬೇಲೂರು ಹಾಗೂ ಕಾರ್ಕಳದಲ್ಲಿ ಬಾಹುಬಲಿಯ
ಬೃಹತ್ ಶಿಲ್ಪಗಳನ್ನು ಕಾಣಬಹುದುಮ..

ಈ ಪ್ರಾಂತ್ಯವನ್ನು ಆಳಿದ ರಾಜ ಭೈರರಸ. ಕ್ರಿಸ್ತಶಕ 432 ರಲ್ಲಿ 42 ಅಡಿಯ ಈ ಬಾಹುಬಲಿಯನ್ನು ಸ್ಥಾಪಿಸಿದ.. ಅತ್ಯಂತ ಸುಂದರವಾದ ಏಕ ಶಿಲಾ ವಿಗ್ರಹವಿದು..ಕೈ ಕಾಲಿಗೆ ತೊಡರಿಕೊಂಡ ಬಳ್ಳಿಗಳು , ಭವ ಬಂಧನವನ್ನು ಪ್ರತಿನಿಧಿಸುತ್ತದೆ.. ಆದರೆ ಶಾಂತ ಮುಖಮುದ್ರೆ ಹಾಗೂ ರಿಲಿಪ್ತ ಭಾವಗಳು ಪ್ರಾಪಂಚಿಕ ಬಂಧನದಿಂದ ಬಾಹುಬಲಿ ದೂರ ಇರುವುದರ ಪ್ರತೀಕ ಎನಿಸಿದೆ !

ಈ ಸುಂದರ ಮೂರ್ತಿ ನೋಡುಗರ ಮನಸೆಳೆಯುತ್ತದೆ.. ಬೆಟ್ಟದ ಮೇಲೆ ತಲೆ ಎತ್ತಿ ನಿಂತಿರುವ ಬಾಹುಬಲಿಯ ವಿಗ್ರಹ ,ಸತ್ಯ ಶಾಂತಿ ಅಹಿಂಸೆಯ ವೈರಾಗ್ಯಗಳ ಗುರುತಾಗಿ ನಿಂತಿದೆ …
ಬಾಹುಬಲಿಯ ಸ್ನಿಗ್ಧ ಸೌಂದರ್ಯ ದೂರ ದೂರ ಯಾತ್ರೆಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ .. ಜೈನ ತೀರ್ಥಂಕರರ ಸಾಲು ವಿಗ್ರಹಗಳು ನೋಡುಗರ ಮನಸೆಳೆಯುತ್ತದೆ.. ಕಾರ್ಕಳದಲ್ಲಿನ ಜೈನ ಪರಂಪರೆಗೆ ಸೇರಿದ ಮತ್ತೊಂದು ತಾಣ ಈ ಜೈನ ಚೈತ್ಯಾಲಯ!

11 ನೇ ಶತಮಾನದಲ್ಲಿ ದಟ್ಟ ಪ್ರದೇಶವನ್ನು ಆಳಿದವರು ಶಾಂತರಸರ ವಂಶಸ್ಥರು ಈ ಬಸದಿಯನ್ನು ಕಟ್ಟಿಸಿದ ಜೈನ್ ದೊರೆ . ಈ ವಂಶದ ಹಿಮ್ಮಡಿ ರವೀಂದ್ರ ಈ ಬಸದಿಗೆ ತ್ರಿಭುವನ ಜೈನ ಚೈತ್ಯಾಲಯ ಹಾಗೂ ರತ್ನತ್ರಯ ಧಾಮ ಇಲ್ಲಿ ಹೆಸರಿದೆ..

ಬಸದಿಯ ನಾಲ್ಕು ಕಡೆ ಸುಂದರವಾದ ಭವ್ಯ ಬಾಗಿಲುಗಳು ಇವೆ ಆದುದರಿಂದ ಇದಕ್ಕೆ ಚತುರ್ಮುಖ ಬಸದಿ ಎನ್ನುವ ಹೆಸರೂ ಉಂಟು .. ವಿಶಿಷ್ಟವಾದ ಇದರ ಶಿಲ್ಪಾ ಹಾಗೂ ಕೆತ್ತನೆಗಳು ಮನಮೋಹಕ ….

32 ಸ್ತಂಭ ಗಳಿರುವ ಈ ಭವ್ಯ ಬಸದಿ ! ಪುರಾತತ್ವ ಇಲಾಖೆಯ ಉಸ್ತುವಾರಿತಲ್ಲಿದೆ

LEAVE A REPLY

Please enter your comment!
Please enter your name here