ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸುದ್ದಿ ನೀಡಿದ ಎಲ್ಐಸಿ : ಕನ್ನಡಿಗರಿಗೆ ಇರಲಿದೆಯಾ ಆದ್ಯತೆ..??

0
220

ನಮಗೆ ನಿಮಗೆ ತಿಳಿದಿರುವ ಹಾಗೆ ಉದ್ಯೋಗ ನಿರೀಕ್ಷೆಯಲ್ಲಿ ಇರುವ ಎಷ್ಟೋ ಉದ್ಯೋಗಾಕಾಂಕ್ಷಿಗಳು ಅದರಲ್ಲೂ ಕನ್ನಡಿಗರಿಗೆ ಪ್ರತಿ ಬಾರಿ ಮೋಸವಾಗುತ್ತಿದೆ ಎನ್ನಬಹುದು. ಯಾವ ಬ್ಯಾಂಕಿಂಗ್ ಪರೀಕ್ಷೆಗಳು ಬಂದರೂ ಕೂಡ ಅದರಲ್ಲಿ ಕನ್ನಡಿಗರಿಗೆ ಅವಕಾಶ ಸಿಗುತ್ತಿಲ್ಲ ಏಕೆಂದರೆ ಭಾಷೆಯ ವಿಚಾರದಿಂದ. ಹೌದು, ಬ್ಯಾಂಕಿಂಗ್ ಪರೀಕ್ಷೆಗಳು ಬಹು ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬೇಕಾಗಿದೆ. ಹಾಗಾಗಿಯೇ ಹೆಚ್ಚಿನ ಹುದ್ದೆಗಳು ಹಿಂದಿ ಭಾಷಿಗರು ಸೇರಿದಂತೆ ಬೇರೆ ಭಾಷಿಗರ ಪಾಲಾಗುತ್ತಿದೆ. ಪ್ರತಿ ಬಾರಿ ಕನ್ನಡಿಗರಿಗೆ ಈ ರೀತಿಯ ಮೋಸ ಆಗುತ್ತಿರುವುದು ಬೇಸರದ ಸಂಗತಿ ಎನ್ನಬಹುದು. ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ 7,800ಕ್ಕೂ ಅಧಿಕ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಎಲ್ಐಸಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯನ್ನು ಚೆನ್ನಾಗಿ ಅರಿತುಕೊಂಡಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಕಳೆದ ಬಾರಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಆದರೆ ಈಗ ಆ ರಾಜ್ಯದ ಭಾಷೆಯನ್ನು ಅಭ್ಯರ್ಥಿಗಳು ಸ್ಪಷ್ಟವಾಗಿ ತಿಳಿದಿರಬೇಕು. ಆಯ್ಕೆಗೊಂಡ ಅಭ್ಯರ್ಥಿಗಳು ತಮಗೆ ತಿಳಿದಿರುವ ಸ್ಥಳೀಯ ಭಾಷೆಯನ್ನು ಸಾಬೀತುಪಡಿಸಬೇಕು ಎಂದು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಇದರಿಂದ ಕನ್ನಡಿಗರಿಗೆ ಒಂದು ಶುಭ ಸುದ್ದಿಯನ್ನು LIC ನೀಡಿದೆ ಎನ್ನಬಹುದು. 355 ಹುದ್ದೆಗಳಿಗೆ ನೇಮಕಾತಿ ಆರಂಭವಾಗಲಿದ್ದು, ಇದೇ ಅಕ್ಟೋಬರ್ ೧ ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರಲಿದೆ. ಹೆಚ್ಚು ಮಾಹಿತಿಗಾಗಿ www.licindia.in ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಬಹುದಾಗಿದೆ.

LEAVE A REPLY

Please enter your comment!
Please enter your name here