ಮೋದಿ ನೀತಿಗಳಿಂದ 20,000 ಕೋಟಿ ರೂ. ನಷ್ಟ ಅನುಭವಿಸಿದ ಎಲ್‍ಐಸಿ..!

0
167

ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಭಾರತೀಯ ಜೀವಾ ವಿಮಾ ನಿಗಮ ಭಾರೀ ನಷ್ಟ ಅನುಭವಿಸಿದ್ದು, ಎಲ್‍ಐಸಿಯ ಹೂಡಿಕೆಗಳ ಮೌಲ್ಯ ಗಣನೀಯವಾಗಿ ಕುಸಿದಿದೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶೇರು ಮಾರುಕಟ್ಟೆ ಸೂಚ್ಯಂಕಗಳು ಏರುಗತಿಯಲ್ಲಿದ್ದರೂ ಎಲ್‍ಐಸಿ ನಷ್ಟದ ಸುಳಿಗೆ ಸಿಲುಕಿದೆ. ಇನ್ನು ಈ ಹಿಂದೆ ಕೇಂದ್ರ ಸರಕಾರಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾದಾಗಲೆಲ್ಲ ಭಾರತೀಯ ಜೀವವಿಮಾ ನಿಗಮವು ಆಪತ್ಬಾಂಧವನ ಪಾತ್ರವನ್ನು ವಹಿಸುತ್ತಿತ್ತು. ಆದರೆ ಇದೀಗ ಎಲ್‍ಐಸಿಯೂ ನಷ್ಟದ ಹಾದಿಗೆ ಸಿಲುಕಿದ್ದು, ದೇಶದ ಆರ್ಥಿಕತೆ ಮತ್ತಷ್ಟು ಕಗ್ಗಂಟಾಗಿದೆ.

ಇನ್ನು 31 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಎಲ್‍ಐಸಿ ದೇಶದ ಅತ್ಯಂತ ದೊಡ್ಡ ಜೀವವಿಮಾ ಸಂಸ್ಥೆಯಾಗಿದೆ. ಅನೇಕ ಸಲ ಕೇಂದ್ರ ಸರಕಾರವನ್ನು ಸಂಕಷ್ಟದಿಂದ ಪಾರುಮಾಡಿರುವ ಎಲ್‍ಐಸಿ ರೈಲ್ವೆ, ರಸ್ತೆ ಮತ್ತು ವಿದ್ಯುತ್‍ನಂತಹ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಕ್ಷೇತ್ರಗಳಿಗೆ ನೆರವು ಒದಗಿಸುತ್ತಲೇ ಬಂದಿದೆ. ಆದರೆ ಇದೀಗ ಮೋದಿ ಆಡಳಿತದ ಅವಧಿಯಲ್ಲಿ ಎಲ್‍ಐಸಿಯು ಪಿಎಸ್‍ಯುಗಳಲ್ಲಿ 10.7 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ ಮತ್ತು ಇದು ಸರಿಸುಮಾರು 2014ರವರೆಗಿನ ಆರು ದಶಕಗಳಲ್ಲಿ ಅದರ ಹೂಡಿಕೆಗಳ ಮೊತ್ತಕ್ಕೆ ಸಮನಾಗಿದೆ. ಈ ಹೂಡಿಕೆಯ ಮೌಲ್ಯವು ಶೇಕಡಾ 86ರಷ್ಟು ಕುಸಿದು 757 ಕೋಟಿ ರೂಪಾಯಿಗೆ ತಲುಪಿದೆ.

ಇನ್ನು ಇನ್ನೊಂದು ಸರಕಾರಿ ಸ್ವಾಮ್ಯದ ಸಂಸ್ಥೆ ಜನರಲ್ ಇನ್ಶುರನ್ಸ್ ಕಂಪನಿಯೂ ಕೂಡಾ ನಷ್ಟದ ಸುಳಿಗೆ ಸಿಲುಕಿದೆ. ಎಲ್‍ಐಸಿ 2017, ಅಕ್ಟೋಬರ್‍ನಲ್ಲಿ ಈ ಕಂಪನಿಯ ಶೇರುಗಳಲ್ಲಿ 5,641 ಕೋಟಿ ರೂಪಾಯಿಗಳನ್ನು ತೊಡಗಿಸಿದ್ದು, ಅದೀಗ 2,979 ಕೋಟಿ ರೂಪಾಯಿಗೆ ಕುಸಿದಿದೆ.

LEAVE A REPLY

Please enter your comment!
Please enter your name here