ಮನೆಯ ಆರ್ಥಿಕ ಸಮೃದ್ಧಿಗೆ ಮನೆ ಮುಂದಿರಲಿ ಈ ಗಿಡ

0
122

ಎಷ್ಟು ದುಡಿದ್ರೂ ಕೆಲವರಿಗೆ ಸುಖ ಪ್ರಾಪ್ತಿಯಾಗುವುದಿಲ್ಲ. ನಮಗೆ ತಿಳಿಯದೆ ನಾವು ಮಾಡುವ ತಪ್ಪುಗಳು ನಮ್ಮ ಏಳ್ಗೆಯನ್ನು ತಡೆಯುತ್ತವೆ. ವಾಸ್ತು ದೋಷ ನಿವಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡವನ್ನು ಬೆಳೆಸಬೇಕೆಂದು ಜೋತಿಷ್ಯಶಾಸ್ತ್ರ ಸಲಹೆ ನೀಡುತ್ತದೆ.

• ಬಾಳೆ ಗಿಡ: ಹಿಂದೂ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸಮೃದ್ಧಿಯ ಸಂಕೇತ, ವಿಷ್ಣು ಮತ್ತು ಲಕ್ಷ್ಮಿ ವಾಸವಾಗಿರುತ್ತಾರೆಂಬ ನಂಬಿಕೆಯಿದೆ.

• ತುಳಸಿ: ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವಿರುತ್ತದೆ. ತುಳಸಿ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುವಂತೆ ನೋಡಿಕೊಳ್ತಾಳೆ. ಸುಖ, ಶಾಂತಿ, ಸಂಪತ್ತು ವೃದ್ಧಿಗೆ ಕಾರಣವಾಗ್ತಾಳೆ.

• ಲಕ್ಷ್ಮಣ ಗಿಡ: ಈ ಗಿಡ ಮನೆಯಲ್ಲಿದ್ದರೆ ಧನಲಕ್ಷ್ಮಿ ಆಗಮನವಾಗುತ್ತದೆ. ಮನೆಯ ಬಾಲ್ಕನಿಯಲ್ಲಿ ದೊಡ್ಡ ಪಾತ್ರೆಯಲ್ಲಿ ಇದನ್ನು ನೆಡಬೇಕು.

• ಮನಿ ಟ್ರೀ: ಮನಿ ಟ್ರೀ ಮನೆಯಲ್ಲಿದ್ದರೆ ಸುಖ, ಸಮೃದ್ಧಿ ನೆಲೆಸಿರುತ್ತದೆ. ಕುಟುಂಬದ ಸದಸ್ಯರು ಸಂತೋಷವಾಗಿರುತ್ತಾರೆ. ಮನೆಯ ಸರಿಯಾದ ದಿಕ್ಕಿನಲ್ಲಿ ಇದನ್ನಿಡುವುದು ಮುಖ್ಯವಾಗುತ್ತದೆ.

LEAVE A REPLY

Please enter your comment!
Please enter your name here