ಜನ ದೇವರಂತೆ ನೋಡಿ ಪಾದ ಪೂಜೆ ಮಾಡುತ್ತಿದ್ದ ನಟ ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ !

0
254

ಸಿನಿಮಾ ಎಂಬ ಮಾಯಾಲೋಕದಲ್ಲಿ ಗೆದ್ದವರಿಗಿಂದ ಸೋತವರೇ ಜಾಸ್ತಿ.. ನಾನೊಬ್ಬ ಸ್ಟಾರ್ ನಟನಾಗಬೇಕೆಂದು ಮಹದಾಸೆಯಿಂದ ಅದೆಷ್ಟೋ ಕಲಾವಿದರು ಈ ಬಣ್ಣ ಪ್ರಪಂಚಕ್ಕೆ ಧುಮುಕಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ.. ಆದರೆ ಅದೃಷ್ಟ ಲಕ್ಷ್ಮಿ ಒಮ್ಮೆ ಕೈ ಹಿಡಿದರೆ ಅವರು ಹುಚ್ಚು ಕುದುರೆಯಂತೆ ಶಿಖರಕ್ಕೆರುತ್ತಾರೆ.. ವಾರಕ್ಕೆ ಹತ್ತಾರು ಸಿನಿಮಾಗಳು ಸೆಟ್ಟೇರುತ್ತಿವೆ, ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತವೆ.. ಹೀಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಯಾರು ವಿಜಯ ಪತಾಕಿಯನ್ನು ಹಾರಿಸಿದ್ದಾರೆಂದು ಹೇಳಲು ಕಷ್ಟ ಸಾಧ್ಯ ! ಕಠಿಣ ಪರಿಶ್ರಮದ ಜೊತೆ ಲಕ್ ಎಂಬುದು ಈ ಸಿನಿಮಾದಲ್ಲಿ ಮುಖ್ಯವಾಗುತ್ತದೆ.

 

 

ಅದೆಷ್ಟು ಕನಸನ್ನು ಹೊತ್ತು ಬರುವ ಕಲಾವಿದರು ಅವಕಾಶವಿಲ್ಲದೆ ಮರೆಯಾಗುತ್ತಾರೆ, ಇನ್ನು ಕೆಲವರು ಅವಕಾಶ ಸಿಕ್ಕಿದ ಮೇಲೂ ಮರೆಯಾಗುತ್ತಾರೆ.. ಹೀಗೆ ತೆಲುಗಿನ ಒಬ್ಬ ನಟ ಒಂದು ಸಿನಿಮಾದಲ್ಲಿ ಮಿಂಚಿ ಮರೆಯಾಗಿದ್ದಾರೆ..

 

 

ತೆಲುಗಿನ ಖ್ಯಾತ ನಟ ಎನ್ ಟಿ ರಾಮರಾವ್ ಅವರು ಮಾಡುತ್ತಿದ್ದ ಲವ ಕುಶ ಚಿತ್ರದ ಕುಶಾ ಪಾತ್ರಕ್ಕಾಗಿ ಅದೆಷ್ಟೋ ಜನ ಬಾಲ ಕಲಾವಿದರನ್ನು ಆಡಿಷನ್ ಮಾಡಿದ್ದರು,ಈ ಪೈಕಿ ಹತ್ತು ವರ್ಷದ ಯುವಕನೊಬ್ಬ ನಾಟಕದಲ್ಲಿ ಪಾತ್ರವನ್ನು ಮಾಡುತ್ತಿದ್ದ ಅವನ ಹೆಸರು ಸುಬ್ರಹ್ಮಣ್ಯಂ, ಇವನನ್ನು ನೋಡಿದ ಲವಕುಶ ಚಿತ್ರದ ನಿರ್ದೇಶಕ ಕುಶಾ ಪಾತ್ರಕ್ಕೆ ಇವನು ಸರಿಯಾದ ಜೀವ ತುಂಬುತ್ತಾನೆ ಎಂದು ಆಯ್ಕೆ ಮಾಡಿಕೊಂಡರು..

 

 

ಈಗಿನ ಯುವ ಪೀಳಿಗೆಗಳಿಗೆ ಗೊತ್ತಿರುವುದಿಲ್ಲ, ಲವಕುಶ ಚಿತ್ರದ ಚಿತ್ರೀಕರಣ ಬರೋಬ್ಬರಿ ಏಳು ವರ್ಷಗಳ ಕಾಲ ನಡೆಯಿತು..ಅಷ್ಟು ಹೊತ್ತಿಗೆ ಪಾಲ್ ನಟ ಸುಬ್ರಹ್ಮಣ್ಯಂ ಅವರಿಗೆ ಹದಿನೇಳು ವರ್ಷವಾಗಿತ್ತು.. ಅಂತೆಯೇ ಚಿತ್ರ ಬಿಡುಗಡೆಯಾಗಿ ಭಾರತ ಚಿತ್ರರಂಗದಲ್ಲಿ ದೊಡ್ಡ ದೊಂದು ಸಂಚಲವನ್ನು ಉಂಟು ಮಾಡಿತ್ತು..ಏಳು ವರ್ಷಗಳಿಂದ ಕಾದು ಕುಳಿತ್ತಿದ್ದ ಪ್ರೇಕ್ಷಕರು ಈ ಸಿನಿಮಾ ಬಿಡುಗಡೆಯಾದ ಮೇಲೆ ಕಿಲೋಮೀಟರ್ ಗಟ್ಟಲೆ ನಿಂತು ಸಿನಿಮಾ ಟಿಕೇಟ್ ಗಾಗಿ ಕಾಯುತ್ತಿದ್ದರು..ವಿಶೇಷವೇ ನಂತರ ಈ ಚಿತ್ರವನ್ನು ಕನ್ನಡಕ್ಕೂ ಕೂಡ ಡಬ್ ಮಾಡಲಾಗಿತ್ತು.. ಕನ್ನಡದಲ್ಲೂ ಕೂಡ ದೊಟ್ಟ ಮಟ್ಟದ ಹಿಟ್ ಕಂಡಿತ್ತು ..

 

 

ವರ್ಷಾನುಗಟ್ಟಲೆ ಚಿತ್ರಮಂದಿರದಲ್ಲಿ ಓಡಿದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹೊಸದೊಂದು ದಾಖಲೆ ಬರೆದಿತ್ತು ನಂತರ ಎರಡನೇ ಬಾರಿ ರೀ ರಿಲೀಸ್ ಆದಾಗಲೂ ಅಷ್ಟೇ ಯಶಸ್ಸನ್ನೂ ಕಂಡಿತ್ತು.. ಆ ಸಮಯದಲ್ಲಿ ಕುಶಾ ಪಾತ್ರಕ್ಕೆ ಜೀವ ತುಂಬಿದ್ದ ಸುಬ್ರಹ್ಮಣ್ಯಂ ಅವರನ್ನು ಜನರು ದೇವರಂತೆ ನೋಡುತ್ತಿದ್ದರು.. ಅವರು ಎಲ್ಲೇ ಹೋದರೂ ಪಾದ ತೊಳೆದು ಪೂಜೆ ಮಾಡಿ ತೆಂಗಿನ ಕಾಯಿ ಹೊಡೆಯುತ್ತಿದ್ದರು ..

 

 

ಲವಕುಶ ಚಿತ್ರವಾದ ಮೇಲೆ ಕೆಲವು ಸಿನಿಮಾಗಳಲ್ಲಿ ಸುಬ್ರಹ್ಮಣ್ಯಂ ಅಭಿನಯಿಸಿದರು ಆದರೆ ಯಾವ ಸಿನಿಮಾಗಳು ಅವರಿಗೆ ತಕ್ಕ ಮಟ್ಟದ ಯಶಸ್ಸು ತಂದುಕೊಡಲಿಲ್ಲ..ನಂತರ ಸಿನಿಮಾದಲ್ಲಿ ಉಳಿಯೋದು ಬೇಡ ಎಂದು ನಿರ್ಧರಿಸಿ ತಮ್ಮ ಗ್ರಾಮಕ್ಕೆ ತೆರಳಿದ ಸುಬ್ರಹ್ಮಣ್ಯಂ ಹೊಟ್ಟೆ ಪಾಡಿಗಾಗಿ ಟೈಲರಿಂಗ್ ಕೆಲಸ ಪ್ರಾರಂಭಿಸಿದರು..

 

 

ಲವಕುಶ ಚಿತ್ರದ ಬಳಿಕ ದೇವರಂತೆ ನೋಡುತ್ತಿದ್ದ ಪ್ರೇಕ್ಷಕರು, ಅವರ ಸ್ಥಿತಿಯನ್ನು ನೋಡಿ ಹೀಯಾಳಿಸುತ್ತಿದ್ದರು ಮತ್ತು ಗೇಲಿ ಮಾಡುತ್ತಿದ್ದರು..ಇದ್ಯಾವುದಕ್ಕೂ ಲೆಕ್ಕಿಸದ ಸುಬ್ರಹ್ಮಣ್ಯಂ, ಟೈಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು ನಂತರ ವಿವಾಹವಾಗಿ ಸುಮಧುರ ಜೀವನವನ್ನು ಸಾಗಿಸುತ್ತಿದ್ದರು..

 

 

ಸುಮಾರು ನಲವತ್ತು ವರ್ಷದಿಂದ ಟೈಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ಸುಬ್ರಹ್ಮಣ್ಯಂ, ಅವತ್ತು ಹೀಯಾಳಿಸುತ್ತಿದ್ದ ಜನರು ಇವತ್ತು ನನ್ನ ಬಳಿಗೆ ಬಂದು ಬಟ್ಟೆ ಒಲಿದುಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರಾಂತೆ..ಸಿನಿಮಾ ಅವಕಾಶ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವ ಅದೆಷ್ಟೋ ಜನರ ನಡುವೆ ಸುಬ್ರಹ್ಮಣ್ಯಂ ಅವರು ಮಾದರಿಯಂತೆ ನಿಂತಿದ್ದಾರೆ..

ಇವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ

LEAVE A REPLY

Please enter your comment!
Please enter your name here