ಅನುಕರಣೆ ಒಳ್ಳೆಯದಲ್ಲ ಎಂದು ಹೇಳಿದ್ದ ಗಾಯಕಿ ಲತಾ ಮಂಗೇಶ್ಕರ್ ಹೇಳಿಕೆಗೆ ರಾನು ಮಂಡಲ್ ಕೊಟ್ಟ ತಿರುಗೇಟು ಏನು…?

0
569

ಅನುಕರಣೆ ಒಳ್ಳೆಯದಲ್ಲ ಎಂದು ಹೇಳಿದ್ದ ಹಿರಿಯ ಗಾಯಕ ಲತಾ ಮಂಗೇಶ್ಕರ್ ಹೇಳಿಕೆಗೆ ಇದೇ ಮೊದಲ ಬಾರಿಗೆ ಉದಯೋನ್ಮುಖ ಗಾಯಕಿ ರಾನು ಮಂಡಲ್ ಪ್ರತಿಕ್ರಿಯೆ ನೀಡಿದ್ದಾರೆ. ರೈಲು ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ಹಣ ಗಳಿಸುತ್ತಿದ್ದ ರಾನುಮಂಡಲ್ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಬಾಲಿವುಡ್ ಸೆನ್ಸೇಷನ್ ಆಗಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ಲತಾ ಮಂಗೇಶ್ಕರ್​ ಅವರು, ರಾನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಾದರೂ ಅನುಕರಣೆ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರು.

ಲತಾ ಅವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಲತಾ ಅವರ ಹೇಳಿಕೆಗೆ ಅವರ ಅಭಿಮಾನಿಗಳೇ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಚಾರವಾಗಿ ಮೊದಲ ಬಾರಿಗೆ ಮಾತನಾಡಿರುವ ರಾನುಮಂಡಲ್, ‘ವಯಸ್ಸಿನಲ್ಲಿ ನಾನು ಲತಾ ಮಂಗೇಶ್ಕರ್​ಗಿಂತ ಚಿಕ್ಕವಳು. ಎಲ್ಲ ವಿಚಾರದಲ್ಲೂ ಅವರಿಗಿಂತ ಕಿರಿಯಳೇ. ಬಾಲ್ಯದಿಂದಲೂ ಲತಾಜೀ ಅವರ ಧ್ವನಿ ನನಗೆ ತುಂಬಾ ಇಷ್ಟ. ಅವರ ಗಾಯನ ನನಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here