ಲಕ್ಷ್ಮಿಯವರ ಪುತ್ರಿಗೆ ತನ್ನ ತಂದೆ ಯಾರು ಎಂಬುದೇ ಗೊತ್ತಿರಲಿಲ್ಲ..?

0
855

ಚಿತ್ರರಂಗವೇ ಹಾಗೆ ಅನಿಸುತ್ತದೆ. ನಟರು ಸಿನಿಮಾದಲ್ಲಿ ನಟಿಸಿ ಖ್ಯಾತರಾಗಿ ವೈವಾಹಿಕ ಜೀವನದಲ್ಲೂ ಏಳಿಗೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ನಟಿಯರ ಜೀವನ ಮಾತ್ರ ಹೀಗಿರುವುದಿಲ್ಲ. ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮೆರೆದು ಇಡೀ ಭಾರತದ ಕ್ರಶ್ ಆಗಿದ್ದ ಅದೆಷ್ಟೋ ಸುಂದರ ನಟಿಮಣಿಯರ ವೈವಾಹಿಕ ಜೀವನ ಮಾತ್ರ ತೂತು ಮಡಿಕೆಯಂತಾಗಿ ಬಿಡುತ್ತದೆ. ಈ ಪೈಕಿ ಲಕ್ಷ್ಮಿ ಅವರ ಜೀವನವೂ ಇದೇ ಆಗಿದೆ ಹೌದು.

 

 

ಮೂಲತಃ ತಮಿಳು ಭಾಷೆಯವರಾದ ಲಕ್ಷ್ಮಿ, ನಂತರ ದಕ್ಷಿಣ ಭಾರತದ ಹಲವಾರು ಭಾಷೆಗಳಲ್ಲಿ ಅಭಿನಯಿಸಿ ಬ್ಲಾಕ್ ಬಸ್ಟರ್ ನಟಿಯಾಗಿ ಮಿಂಚಿದ್ದಾರೆ. ಅದೊಂದು ಕಾಲವಿತ್ತು, ಲಕ್ಷ್ಮಿ ಅವರ ಚಿತ್ರಗಳಿಗಾಗಿ ಕನ್ನಡ ಸಿನಿ ಪ್ರೇಕ್ಷಕರು ಕಾದುಕುಳಿತುಕೊಳ್ಳುತ್ತಿದ್ದರು, ಮತ್ತು ಆಗಿನ ಕಾಲದ ಪಡ್ಡೆ ಹೈಕಳ ನಿದ್ದೆ ಕದ್ದ ಪೊರಿಯು ಸಹಿತ ಇವರಾಗಿದ್ದರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ಅವರು ಕನ್ನಡತಿಯೇ ಆಗಿ ಬಿಟ್ಟಿದ್ದಾರೆ.

 

 

ಈ ರೀತಿ ದಶಕಗಳ ಕಾಲ ಚಲನ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದ ನಟಿ ಲಕ್ಷ್ಮಿ ಅವರ ವೈವಾಹಿಕ ಜೀವನ ಮಾತ್ರ ರೀಲ್ ಲೈಫ್ ನಂತೆ ಸುಂದರವಾಗಿರಲಿಲ್ಲ. ವಿವಾಹವಾದ ಕೆಲವೇ ವರ್ಷದಲ್ಲಿ ವಿಚ್ಛೇದನ ಮೂಲಕ ಮುರಿದು ಬೀಳುತ್ತದೆ. ಆದರೆ ಈ ರೀತಿಯ ತಂದೆ ತಾಯಿಯ ಜಗಳ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಲಕ್ಷ್ಮಿ ಅವರೇ ಸಾಕ್ಷಿ !

 

 

ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಅವರೊಂದಿಗೆ 1969 ರಲ್ಲಿ ಮೊದಲ ಮದುವೆಯಾದ ನಟಿ ಲಕ್ಷ್ಮಿ ಅವರು 1971 ರಲ್ಲಿ ಐಶ್ವರ್ಯ ಎಂಬ ಮುದ್ದಾದ ಮಗಳಿಗೆ ಜನನವನ್ನು ನೀಡುತ್ತಾರೆ. ಆದರೆ ಕೆಲವು ಸಾಂಸಾರಿಕ ಭಿನ್ನಾಭಿಪ್ರಾಯದಿಂದ ಭಾಸ್ಕರ್ ಅವರಿಗೆ 1974ರಲ್ಲಿ ವಿಚ್ಛೇದನವನ್ನು ನೀಡಿ ತನ್ನ ಮಗಳನ್ನು ಮದ್ರಾಸಿಗೆ ಕರೆದು ಕೊಂಡು ಬಂದು ಬೇರೂತ್ತಾರೆ.

 

 

ವೈವಾಹಿಕ ಜೀವನದಿಂದ ನೊಂದಿದ್ದ ಲಕ್ಷ್ಮಿ ಅವರು ತನ್ನ ಮಗಳನ್ನು ಮುದ್ದಾಗಿ ಸಾಕಿ ಸಲುಹಿ ಬೆಳೆಸುತ್ತಾರೆ. ಆದರೆ ಎಂದು ಐಶ್ವರ್ಯಗೆ ಅವರ ತಂದೆಯ ಬಗ್ಗೆ ಮಾಹಿತಿಯನ್ನು ನೀಡಿರುವುದಿಲ್ಲ ಮತ್ತು ಫೋಟೋವನ್ನು ಸಹ ತೋರಿಸುವುದಿಲ್ಲ.

ಐಶ್ವರ್ಯ ಹತ್ತೊಂಬತ್ತು ವರ್ಷವಿರುವಾಗ ಹೊಸ ಕಾವ್ಯ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ ನಟನೆಯ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಈ ಚಿತ್ರದ ಸುದ್ದಿಗೋಷ್ಠಿ ವೇಳೆ ಪತ್ರಕರ್ತರೊಬ್ಬರು ನಿಮಗೆ ನಿಮ್ಮ ತಂದೆ ಯಾರು ಎಂದು ಗೊತ್ತೇ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರಿಸಲಾಗದ ಐಶ್ವರ್ಯ ಬಹಳ ನೋವನ್ನು ಅನುಭವಿಸುತ್ತಾರೆ. ಕನಿಷ್ಠ ಪಕ್ಷ ನನ್ನ ತಂದೆಯ ಮುಖವನ್ನಾದರೂ ನೋಡಬೇಕು ಎಂಬ ಮಹದಾಸೆಯನ್ನು ಹೊಂದುತ್ತಾರೆ.

 

 

ಇದಾದ ಕೆಲವು ದಿನಗಳ ನಂತರ ಐಶ್ವರ್ಯ ಅವರಿಗೆ ಒಂದು ಪತ್ರ ಬರುತ್ತದೆ.. ಪತ್ರದಲ್ಲಿದ್ದ ಪದಗಳನ್ನು ಓದಿದ ಅವರಿಗೆ ಹೊಸ ಚೈತನ್ಯ ಉಂಟಾಗುತ್ತದೆ. ಪತ್ರದಲ್ಲಿ ಏನಿತ್ತೆಂದರೆ ‘ನಿಮ್ಮ ತಂದೆ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರ ಹೆಸರು ಭಾಸ್ಕರ್.. ನಾನು ಅವರ ಆತ್ಮೀಯ ಸ್ನೇಹಿತ.. ನಿಮ್ಮ ತಂದೆ ತುಂಬಾ ಒಳ್ಳೆಯವರು. ಪತ್ರದಲ್ಲಿ ಅವರ ದೂರವಾಣಿ ಸಂಖ್ಯೆ ಇದೆ ನೀವು ಮತ್ತು ನಿಮ್ಮ ತಂದೆ ಒಂದಾದರೆ ನನ್ನಷ್ಟು ಖುಷಿ ಪಡೆಯುವವರು ಪ್ರಪಂಚದಲ್ಲಿ ಯಾರೂ ಇಲ್ಲ” ಎಂದು ಬರೆದಿದ್ದರು.

 

 

ಬಹಳ ಭಾವುಕರಾಗಿದ್ದ ಐಶ್ವರ್ಯ ಪತ್ರದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆಯನ್ನು ಮಾಡುತ್ತಾರೆ. ಹತ್ತೊಂಬತ್ತು ವರ್ಷಗಳ ನಂತರ ತನ್ನ ತಂದೆಯ ಮಾತನ್ನು ಕೇಳಿದ ಐಶ್ವರ್ಯ ಕಣ್ಣೀರಿಡುತ್ತಾರೆ. ನಂತರ ಭಾಸ್ಕರ್ ಅವರಿಗೆ ನೀವೇ ನಾ ನನ್ನ ತಂದೆ? ಎಂದು ಪ್ರಶ್ನಿಸುತ್ತಾರೆ .. ಅತ್ತ ತನ್ನ ಮುದ್ದಾದ ಮಗಳು ಧ್ವನಿಯನ್ನು ಕೇಳಿದ ಭಾಸ್ಕರ್ ಭಾವುಕತೆಯಿಂದ ಹೌದಮ್ಮಾ ನಾನೇ ನಿನ್ನ ತಂದೆ ಎಂದು ಉತ್ತರಿಸುತ್ತಾರೆ.

 

 

ಇಷ್ಟು ದಿನ ನನ್ನನ್ನು ನೋಡಲು ಯಾಕೆ ಬರಲಿಲ್ಲ ಎಂದು ಐಶ್ವರ್ಯ ಪ್ರಶ್ನಿಸಿದಾಗ, ನಿಮ್ಮ ತಾಯಿ ಮತ್ತು ನನ್ನ ನಡುವೆ ಕೆಲವು ಸಾಂಸಾರಿಕ ಮನಸ್ತಾಪಗಳಿದ್ದವು. ಅವಳು ನಿನ್ನನ್ನು ಬಹಳ ಕಷ್ಟಪಟ್ಟು ಹೆತ್ತಿದ್ದಾಳೆ, ನಿನ್ನ ಭವಿಷ್ಯಕ್ಕಾಗಿ ಕನಸನ್ನು ಕಂಡಿದ್ದಾರೆ ಇತರ ನಡುವೆ ನಾನು ಬಂದು ಅವರಿಂದ ನಿನ್ನನ್ನು ಕಿತ್ತುಕೊಳ್ಳುವುದು ನ್ಯಾಯ ಎನ್ನಿಸಲಿಲ್ಲ. ಒಂದಲ್ಲ ಒಂದು ದಿನ ನನ್ನ ಹುಡ್ಕೊಂಡು ಬಂದೆ ಬರುತ್ತೀಯಾ ಎಂದು ಕನಸು ಕಾಣುತ್ತಿದ್ದೆ.. ನಿನ್ನನ್ನು ನನ್ನಷ್ಟು ಪ್ರೀತಿಸುವವರು ಪ್ರಪಂಚದಲ್ಲಿ ಯಾರೂ ಇಲ್ಲ ಎಂದು ಭಾಸ್ಕರ್ ತನ್ನ ಪುತ್ರಿಯೊಂದಿಗೆ ಮನದಾಳದ ಮಾತುಗಳನ್ನಾಡುತ್ತಾರೆ.

 

 

ತಂದೆಯ ಮಾತುಗಳನ್ನು ಕೇಳಿ ಐಶ್ವರ್ಯ ಅವರ ಕಣ್ಣಿನಲ್ಲಿ ನೀರು ತುಂಬಿ ಬಂದಿತ್ತು.. ಅದೊಂದು ದಿನ ತನ್ನ ತಂದೆ ಅವರನ್ನು ಐಶ್ವರ್ಯ ಭೇಟಿಯಾಗುತ್ತಾರೆ. ಭೇಟಿಯಾದ ಬಳಿಕ ಅವರಿಗೆ ಆಶ್ಚರ್ಯವಾಗುತ್ತದೆ ಯಾಕೆಂದರೆ ತನ್ನ ತಾಯಿಯೊಂದಿಗೆ ವಿಚ್ಛೇದನ ಪಡೆದುಕೊಂಡು ದಶಕಗಳಾದರೂ ಬೇರೆಯವರನ್ನು ಮದುವೆಯಾಗುವುದಿಲ್ಲ ಭಾಸ್ಕರ್.. ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು.

 

 

ಹೀಗೆ ತಂದೆ ತಾಯಿ ಜಗಳದಿಂದ ಅದೆಷ್ಟೋ ಮಕ್ಕಳು ಪೋಷಕರ ಪಾಲನೆ ಇಲ್ಲದೆ ಬೆಳೆದು ಒಂದು ಹಂತದಲ್ಲಿ ಸಮಾಜ ಕೇಳುವ ಪ್ರಶ್ನೆಗಳಿಗೆ ತತ್ತರಿಸಿ ಹೋಗುತ್ತಾರೆ. ಒಂದೊಮ್ಮೆ ಸಾಂಸಾರಿಕ ಜೀವನವನ್ನು ಮುರಿದುಕೊಳ್ಳುವ ಮುನ್ನ ತಮ್ಮ ಮಕ್ಕಳ ಬಗ್ಗೆಯೂ ಯೋಚಿಸಬೇಕು ಎಂಬುದು ನಮ್ಮ ಆಶಯ.

LEAVE A REPLY

Please enter your comment!
Please enter your name here