ಲಕ್ಷ್ಮೀ ಹೆಬ್ಬಾಳ್ಕರ್ಗೆ ಇಡಿ ಸಮನ್ಸ್, ಕಂಗಾಲಾದ ಕಾಂಗ್ರೆಸ್ …!

0
284

ಮಹತ್ವದ ಬೆಳವಣಿಯಲ್ಲಿ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕಿ ಮತ್ತು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಡಿಕೆ ಶಿವಕುಮಾರ್ ಅವರೊಂದಿಗೆ ವ್ಯವಹಾರ ನಡೆಸಿರುವ ಕಾರಣ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇದೀಗ ಇಡಿ ಸಂಕಷ್ಟ ಎದುರಾಗಿದೆ. ಆದರೆ ಇಡಿ ಮೂಲಗಳ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ಡಿಕೆ ಶಿವಕುಮಾರ್ ನಡೆಸಿರುವ ಅಕ್ರಮ ವ್ಯವಹಾರಗಳಲ್ಲಿ ಬಾಗಿಯಾಗಿದ್ದು, ಬೇನಾಮಿ ಆಸ್ತಿ ಗಳಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ಸುಮಾರು ೨೦೦ ಕೋಟಿ ರೂಪಾಯಿಗಳಷ್ಟು ವ್ಯವಹಾರ ನಡೆಸಿದ್ದು, ಇದಕ್ಕೆ ಸೂಕ್ತ ದಾಖಲೆಗಳಿಲ್ಲ. ಸುಮಾರು ೩೧೯ ಬ್ಯಾಂಕ್ ಖಾತೆಗಳ ಬೆನ್ನು ಹತ್ತಿರುವ ಇಡಿ ಅಧಿಕಾರಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವ್ಯವಹಾರಗಳ ಮೇಲೂ ಕಣ್ಣು ಬಿದ್ದಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಇಡಿ ಅಧಿಕಾರಿಗಳು ಇಳಿದಿದ್ದಾರೆ. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ನೀಡಿರುವುದರಿಂದ ಅವರಿಗೂ ಇಡಿ ಸಂಕಷ್ಟ ಎದುರಾಗಿದ್ದು, ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಭ್ರಷ್ಟಾಚಾರದಲ್ಲಿ ಡಿಕೆಶಿ ಸಿಲುಕಿದ್ದು, ಇದೀಗ ಲಕ್ಷ್ಮಿ ಯನ್ನು ಇಡಿ ಲಾಕ್ ಮಾಡಿದ್ರೆ ರಾಜ್ಯ ಕಾಂಗ್ರೆಸ್ಗೆ ಭಾರೀ ಮುಖಭಂಗ ಉಂಟಾಗಲಿದೆ.

ಕಾಂಗ್ರೆಸ್ ನಾಯಕರು ಜೈಲು ಸೇರುತ್ತಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಮೌನ ಮಡುಗಟ್ಟುವಂತೆ ಮಾಡಿದೆ‌.

LEAVE A REPLY

Please enter your comment!
Please enter your name here