ಶಾಸಕಿಯಾಗಿ ಈ ರೀತೀಯ `ವಿವಾದಾತ್ಮಕ’ ಮಾತು ಹೇಳಿದ್ದಾದರು ಯಾಕೆ.?

0
817

ಬೆಳಗಾವಿ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರವಾಹಕ್ಕೆ ತುತ್ತಾಗಿರುವ ನೆರೆ ಸಂತ್ರಸ್ತರ ಜೊತೆ ಮಾತನಾಡುವಾಗ ಅವರ ಒಂದು ಮಾತಿಗೆ ಪ್ರತ್ಯತ್ತುರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿ ಭಾರಿ ಕೂಡ ಒಂದಲ್ಲ, ಒಂದು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು ಅವರಿಗೆ ಸಾಮಾನ್ಯವಾಗಿದೆ ಎನ್ನಬಹುದು. ಇದೇ ರೀತಿಯಲ್ಲಿ ಇಗ ಮತ್ತೊಂದು ಹೇಳಿಕೆ ನೀಡಿ ಎಲ್ಲರ ಕೋಪಕ್ಕೆ ತುತ್ತಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿಗೆ ಆಗಮಿಸಿದ್ದು, ಗೋಕಾಕ್ ನೆರೆ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಲು ಮುಂದಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನರೆ ಸಂತ್ರಸ್ಥರೊಬ್ಬರು ತಮ್ಮ ಕಷ್ಟವನ್ನು ಬಗೆಹರಿಸುತ್ತಾರೆ ಎಂಬ ಬಯಕೆಯಿಂದ ನಮಗೆ ತಿನ್ನೋಕ್ಕೆ ಅನ್ನವಿಲ್ಲ, ಇರುವುದಕ್ಕೆ ಸರಿಯಾದ ನೆಲೆಯಿಲ್ಲ, ನಮ್ಮ ಕಷ್ಟವನ್ನು ನೀವೇ ನೋಡಬೇಕು ಎಂದು ಹೇಳಿಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕಿಒಂದು ಕೆಲಸ ಮಾಡಿ, ನಿಮ್ಮ ಬಳಿ ಯಾರಾದರು ಬಂದು ಸಾಲವನ್ನು ವಾಪಾಸ್ ಮಾಡಿ ಎಂದು ಕೇಳಿದರೆ, ಚೊಕ್ಕವಾಗಿ ಹೇಳಿ ನೀವು ಸಾಲವನ್ನು ಕೊಡಬೇಕು ಎಂದು ಹಿಂಸೆ ನೀಡಿದರೆ. ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸುವುದಾಗಿ ಹೇಳಿ ಸಾಕು ಎಂದು ಹೇಳಿದ್ದಾರೆ.

ಪ್ರವಾಹದಿಂದ ತಮ್ಮ ಮನೆ, ಆಸ್ತಿ-ಪಾಸ್ತಿ, ಕುಟುಂಬವನ್ನು ಕಳೆದುಕೊಂಡಿರುವ ಸಂತ್ರಸ್ಥರಿಗೆ ಧೈರ್ಯದ ಹಾಗೂ ಭರವಸೆಯ ಮಾತುಗಳನ್ನು ನೀಡಬೇಕಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಟಚಾರವಾಗಿ ಮಾತನಾಡಿರುವುದು ಎಲ್ಲರನ್ನು ಕೆರಳಿಸುವಂತೆ ಮಾಡಿದೆ. ಶಾಸಕಿ ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ರಾಜ್ಯದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here