ನುಲಿಯುತ್ತಾ ನಿಂತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಅಧಿಕಾರಿ ಹೇಳಿದ್ದೇನು..?!

0
5471
Loading...

ಅಕ್ರಮ ಆಸ್ತಿ ಗಳಿಕೆಯ ಆರೋಪದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿರುವ ಕಾರಣ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇಡಿ ವಿಚಾರಣೆಗಾಗಿ ದೆಹಲಿಗೆ ತೆರಳಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಅಧಿಕಾರಿಯೋರ್ವರು ಭರ್ಜರಿ ಡ್ರಿಲ್ ಮಾಡಿದ ಘಟನೆ ನಡೆದಿದೆ.

ಹೌದು, ವಿಚಾರಣೆಗಾಗಿ ಇಡಿ ಕಚೇರಿಗೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನುಲಿಯುತ್ತಾ ತಮ್ಮದೇ ದಾಟಿಯಲ್ಲಿ ಉತ್ತರ ನೀಡುತ್ತಿದ್ದರಂತೆ. ಇದರಿಂದ ಕೋಪಗೊಂಡ ಇಡಿ ಅಧಿಕಾರಿ ‘ನಿಮ್ಮನ್ನು ಇಲ್ಲಿಗೆ ವಿಚಾರಣೆಗಾಗಿ ಕರೆಯಲಾಗಿದೆ. ಈ ರೀತಿಯ ವಿಚಾರಣೆಯಲ್ಲಿ ಗಂಭೀರವಾಗಿರುವುದನ್ನು ಕಲಿತುಕೊಳ್ಳಿ. ನಾವು ಕೇಳಿದ ಪ್ರಶ್ನೆಗಳಿಗೆ ಗಂಭೀರವಾಗಿಯೇ ಉತ್ತರ ನೀಡಿ’ ಎಂದು ಗದರಿದರಂತೆ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ನುಲಿಯುವುದನ್ನು ಬಿಟ್ಟು ಗಂಭೀರವಾಗಿ ಉತ್ತರಿಸಲು ಶುರು ಮಾಡಿದರಂತೆ.

ಇನ್ನು ಸೆಪ್ಟೆಂಬರ್ 19 ರಂದು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೆ.20 ರಂದು 7 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಡಿ.ಕೆ.ಶಿವಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಡಿ ಅಧಿಕಾರಿಗಳು ಅನೇಕ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಒಡೆತನದ ಹರ್ಷಾ ಶುಗರ್ಸ್‍ಗೆ 350 ಕೋಟಿ ರೂಪಾಯಿ ಹೂಡಿಕೆ ಎಲ್ಲಿಂದ ಬಂತು..? ಡಿಕೆ ಶಿವಕುಮಾರ್ ಅವರ ಖಾತೆಯಿಂದ ನಿಮಗೆ 16 ಕೋಟಿ ಸಂದಾಯವಾಗಿದೆ. ಆ ಹಣದ ಮೂಲ ಯಾವುದು..? ನಿಮ್ಮ ಮತ್ತು ಡಿಕೆ ಶಿವಕುಮಾರ್ ನಡುವಿನ ವ್ಯವಹಾರಿಕ ಸಂಬಂಧ ಸ್ವರೂಪ ಎಂತದ್ದು..? ಎಂಬಂತಹ ಅನೇಕ ಪ್ರಶ್ನೆಗಳನ್ನು ಇಡಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂದಿಟ್ಟಿದೆ.

Loading...

LEAVE A REPLY

Please enter your comment!
Please enter your name here