ಡಿಕೆಶಿಯ ವಿಚಾರಣೆಗೆ ‘ಲಕ್ಷ್ಮಿ ಹೆಬ್ಬಾಳ್ಕರ್’ ಬರುವಂತೆ ‘ಇಡಿ’ ಕರೆಯಲು ಕಾರಣ ಏನು ಗೊತ್ತಾ..?

0
374

ಡಿಕೆಶಿ ನಡೆಸಿರುವ ಅವ್ಯವಹಾರದ ಹಣವನ್ನು ಹಾಗೂ ದೆಹಲಿಯಲ್ಲಿ ಸಿಕ್ಕಿಬಿದ್ದ ಹಣದ ವಿಚಾರ ಕುರಿತು ಇಂದಿಗೂ ಕೂಡ ಇಡಿ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ವಿಚಾರಣೆ ನಡೆಯುತ್ತಿದ್ದು, ಇಡಿ ಪರ ಮಾತನಾಡುವ ವಕೀಲರು ಡಿಕೆಶಿ ಮಾಡಿರುವ ಕೋಟಿ ಹಣದ ಪ್ರಕರಣವನ್ನು ತಿಳಿಯಲು ಎಲ್ಲ ಮಾರ್ಗವನ್ನು ಹುಡುಕುತ್ತಿದ್ದಾರೆ ಎನ್ನಬಹುದು. ಡಿಕೆಶಿ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಡಿ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಪಕ್ಷದ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಚಾರಣಗೆ ಆಹ್ವಾನಿಸಿದೆ.

ಹೌದು, ಈ ವಿಚಾರ ಕುರಿತು ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು ನನ್ನ ಮತ್ತು ಡಿಕೆ ಶಿವಕುಮಾರ್ ಅವರ ಮಧ್ಯೆ ಯಾವ ವ್ಯವಹಾರವೂ ಇಲ್ಲ.! ಆದರೂ ಕೂಡ ಡಿಕೆ ಶಿವಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಡಿ ನನ್ನನ್ನೂ ವಿಚಾರಣೆಗೆ ಕರೆದಿರುವುದು ಅಶ್ಚರ್ಯ ಎಂದು ಹೇಳಿದರು.
ಇಡಿ ನನಗೆ 14 ನೇ ತಾರೀಕಿಗೆ ಬರಲು ತಿಳಿಸಿತ್ತು. ಆದರೆ ನಾನು ಮುಂಚಿತವಾಗಿಯೇ ನನಗೆ ಅಂದು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದೆ, ಹೀಗಾಗಿಯೇ ನಾಳೆ ಇಡಿ ವಿಶೇಷ ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಪ್ರಕರಣ ಕುರಿತು ನನಗೆ ಮಾತ್ರವಲ್ಲ ಸುಮಾರು 180 ಜನರನ್ನು ಕರೆದಿದ್ದಾರೆ.

ನಾನು ಇಡಿಗೆ ನನ್ನ ವಿಚಾರಣೆಯನ್ನು ಬೆಂಗಳೂರಿನಲ್ಲಿ ಅಥವಾ ಬೆಳಗಾವಿಯಲ್ಲೇ ನೆಡೆಸಿ ಎಂದು ಮನವಿ ಮಾಡಿದ್ದೇನೆ ಅದರೆ ಇಲ್ಲಿಯವರೆಗೂ ಸ್ಪಷ್ಟ ಉತ್ತರ ದೊರೆತ್ತಿಲ್ಲ ಎಂದು ತಿಳಿಸಿದರು. ನನ್ನ ಮತ್ತು ಡಿಕೆಶಿ ನಡುವೆ ಯಾವ ವ್ಯವಹಾರಗಳೂ ಇಲ್ಲ. ಆದರೂ ಕೂಡ ಇಡಿ ವಿಚಾರಣಗೆ ನನ್ನನ್ನೂ ಯಾಕೆ ಕರೆದಿದೆ ಎಂಬುದು ನನಗೆ ತಿಳಿದಿಲ್ಲ.! ನಾಳೆ ವಿಚಾರಣಗೆ ಹಾಜರಾದ ಬಳಿಕವಷ್ಟೇ ಎಲ್ಲ ತಿಳಿಯಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here