ಖುಷ್ಬು ಅವರನ್ನು ಮನೆಯಿಂದ ಹೊರ ದಬ್ಬಿ, ಅವಾಚ್ಯ ಪದಗಳಿಂದ ನಿಂದಿಸಿ, ಬಿಕ್ಷೆ ಬೇಡಿ ಬದುಕು ಅಂದಿದ್ದ ತಂದೆ.!

0
943

ಪ್ರೀತಿಯಲ್ಲಿರುವ ಸುಖವನ್ನು ತೋರಿಸುತ್ತಾ, ಮೂರು ಕಾಸಿನ ಕುದುರೆ ಏರಿ, ಹಸಿರು ಸೀರೆ ಮಲ್ಲಿಗೆ ಮುಡಿದು, ರಣಧೀರನ ಮೀನಾಕ್ಷಿಯಾಗಿ, ಕನ್ನಡಿಗರ ಜೀವದಲ್ಲಿ ಜೀವನದಿಯಾಗಿ ಸದಾ ಹರಿಯುತ್ತಿರುವ ಖುಷ್ಬು ಅವರು ಒಂದು ಕಾಲದಲ್ಲಿ ತನ್ನ ತಂದೆಯಿಂದಲೇ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ತಮ್ಮ ಸುಂದರ ನಗುಮುಖದಿಂದ ನಟನೆಯ ಮೂಲಕ ನಮಗೆ ಮನರಂಜನೆಯನ್ನು ನೀಡುವ ನಟಿಮಣಿಯರ ಹಿಂದೆ ಹೇಳಲಾರದ ಕಣ್ಣೀರಿನ ಕಥೆಗಳಿರುತ್ತವೆ. ಅಂತಹ ಕರಾಳದಿನವನ್ನು ನಟಿ ಕುಶುಬು ಕಳೆದಿದ್ದಾರೆ.

 

ಮುಂಬೈನ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನಟಿ ಖುಷ್ಬು, 1980 ರಲ್ಲಿ ದಿ ಬರ್ನಿಂಗ್ ಟ್ರೈನ್ ಎಂಬ ಹಿಂದಿ ಚಿತ್ರದ “ತೇರಿ ಹೈ ಜಮೀನ್ ತೇರಾ ಆಸ್ಮನ್” ಹಾಡಿನಲ್ಲಿ ಅಭಿನಯಿಸಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1980 ಮತ್ತು 85 ರಲ್ಲಿ ಸುಮಾರು ನಾಲ್ಕೈದು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿ ಗೆದ್ದಿದ್ದರು. ಅಲ್ಲದೇ 1985 ರಲ್ಲಿ ಮೇರಿ ಜಂಗ್ ಎಂಬ ಚಿತ್ರದ ಸೂಪರ್ ಡೂಪರ್ ಹಿಟ್ ಸಾಂಗ್ ಬೋಲ್ ಬೇಬಿ ಬೀಲ್, ರಾಕ್ ಎನ್ ರೋಲ್ ಗೀತೆಯಲ್ಲಿ ನಟ ಜಾವೇದ್ ಜಾಫ್ರಿ ಅವರೊಂದಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದರು.

 

ಮೂಲತಃ ಮಹರಾಷ್ಟ್ರದವರಾಗಿ ಬಾಲಿವುಡ್ ಚಿತ್ರಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಬಿಸದ್ದರು. ಆದರೆ ಖ್ಯಾತರಾಗಿದ್ದು ಮತ್ತು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿದ್ದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ. ಹೌದು, 1986 ರಲ್ಲಿ ವೆಂಕಟೇಶ್ ಅಭಿನಯದ ಕಲಿಯುಗ ಪಾಂಡವುಲು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು, ಮತ್ತೆಂದು ಹಿಂತಿರುಗಿ ನೋಡಲೇ ಇಲ್ಲ. ಕಲಿಯುಗ ಪಾಂಡವಲು ಚಿತ್ರದ ನಂತರ ತಮ್ಮ ನೆಲೆಯನ್ನು ಚೆನ್ನೈಗೆ ಸ್ಥಳಾಂತರಿಸಿ ತಮಿಳು ಮತ್ತು ದಕ್ಷಿಣ ಭಾರತದ ಇತರ ಚಲನಚಿತ್ರೋದ್ಯಮಗಳತ್ತ ಗಮನಹರಿಸಲು ಪಾರಂಭಿಸುತ್ತಾರೆ.

 

ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡ ಖುಷ್ಬು
ತಮಿಳಿನಲ್ಲಿ ಸುಮಾರು 150 ಸಿನಿಮಾಗಳಲ್ಲಿ ಅಭಿನಯಿಸಿ, ಆಗಿನ ಕಾಲದ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ತೆಲುಗು,ಕನ್ನಡ,ಮಲಯಾಳಂ,ಹಿಂದಿ ಸೇರಿದಂತೆ ಪಂಚ ಭಾಷೆಯಲ್ಲಿ 200 ಚಿತ್ರಗಳಲ್ಲಿ ಅಭಿನಯಿಸಿ ಎಲ್ಲಾ ಚಿತ್ರರಂಗದಲ್ಲೂ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಅತ್ಯುತ್ತಮ ನಟಿಗಾಗಿ ಎರಡು ಬಾರಿ ತಮಿಳಿನಾಡು ರಾಜ್ಯ ಪ್ರಶಸ್ತಿ, ಒಂದು ಕೇರಳ ರಾಜ್ಯ ಪ್ರಶಸ್ತಿ, ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ದೂರದರ್ಶನ ನಿರೂಪಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ನಿರ್ವಹಿಸಿ, ಚಿತ್ರೋಧ್ಯಮದಲ್ಲಿ ತನ್ನದೇ ಆದ ಘನತೆ ಮತ್ತು ಗೌರವವನ್ನು ಪಡೆದುಕೊಂಡಿದ್ದಾರೆ.

 

2000 ರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಸುಂದರ್. ಸಿ ಅವರನ್ನು ವಿವಾಹವಾದ ಅವರು ಸುಖಸಂಸಾರವನ್ನು ನಡೆಸುತ್ತಿದ್ದಾರೆ. ಈ ದಂಪತಿಗಳಿಗೆ ಅವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. 35 ವರುಷದಿಂದ ಚೈನೈನಲ್ಲಿ ವಾಸವಾಗಿರುವ ಅವರು, ಅವ್ನಿ ಸಿನಿಮ್ಯಾಕ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸಿನಿಮಾಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ನಟಿ ಖುಷ್ಬು ಅವರಿಗೆ, ಅಭಿಮಾನಿಗಳು ದೇವಲಯವನ್ನೇ ಕಟ್ಟುತ್ತಾರೆ. ಅವರ ಅಭಿಮಾನಿಗಳು ಮೀಸಲಾದ ದೇವಾಲಯವನ್ನು ನಿರ್ಮಿಸಿದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಈ ದೇವಾಲಯವನ್ನು 2005 ರಲ್ಲಿ ನೆಲಸಮ ಮಾಡಲಾಯಿತು.! ನಂತರ ರಾಜಕೀಯಕ್ಕೆ ದುಮುಕಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

 

ಇಷ್ಟೋಂದು ಹೆಸರು ಮತ್ತು ಖ್ಯಾತಿ ಪಡೆದಿರುವ ನಟಿ ಖುಷ್ಬು ಒಂದು ಕಾಲದಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು, ತಂದೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗೆ ಒಂದು ದಿನ ಅವರ ತಂದೆ ಮತ್ತು ಅವರ ಮಧ್ಯೆ ಮಾತಿನ ಚಕಮಖಿ ಬೆಳೆದು ಚಿಕ್ಕದೊಂದು ಜಗಳವಾಗುತ್ತದೆ. ಇದರಿಂದ ಕೋಪಕೊಂಡ ಅವರ ತಂದೆ 1986, ಸೆಪ್ಟೆಂಬರ್ 12 ರಂದು ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಬಿಕ್ಷೆ ಬೇಡಿ ಬದುಕೊ ಹೋಗು ಎಂದು ಹೇಳಿ ಮನೆಯಿಂದ ಆಚೆಗೆ ದಬ್ಬುತ್ತಾರೆ. ಕೇವಲ 16 ವರುಷದವರಾಗಿದ್ದ ಖುಷ್ಬು, ತನ್ನ ತಾಯಿ ಮತ್ತು ತಮ್ಮನ ಜೊತೆ ಮನೆಯಿಂದ ಆಚೆ ಬರುತ್ತಾರೆ.

 

ಅಂದು ನಟಿ ಖುಷ್ಬು ಇನ್ನೆಂದು ನನ್ನ ತಂದೆಯ ಮುಖ ನೋಡುವುದಿಲ್ಲ ಎಂದು ಶಪತ ಮಾಡಿ, ಮನೆಯಿಂದ ಹೊರ ಬರುತ್ತಾರೆ. ಆದರೆ ಆ ವಯ್ಯಸ್ಸಿನಲ್ಲಿ ಎಲ್ಲಿಗೆ ಹೋಗುವುದು ಏನು ಮಾಡುವುದು? ಗೊತ್ತಿರಲಿಲ್ಲ.! ತಾಯಿ ಮತ್ತು ಸಹೋದರನ ಜೊತೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಧರಿಸುತ್ತಾರೆ. ಆದರೆ ಜೀವನದಲ್ಲಿ ಏನಾದರು ಸಾಧನೆ ಮಾಡಿ ತನ್ನ ತಂದೆಗೆ ತೋರಿಸಬೇಕು ಎಂಬ ಆಲೋಚನೆ ಅತ್ಮಹತ್ಯೆಯಿಂದ ಪಾರು ಮಾಡುತ್ತದೆ.

 

ನಂತರ ಅಭಿನಯದಲ್ಲಿ ಅಪಾರ ಒಲವನ್ನು ಹೊಂದಿದ್ದ ಅವರು, ಅವಕಾಶಗಳಿಗಾಗಿ ಅಲೆಯುತ್ತಿರುತ್ತಾರೆ. ಒಳ್ಳೆಯವರಿಗೆ ದೇವರು ಕೈ ಬಿಡುವುದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ನಟಿ ಖುಷ್ಬು.! 1986 ರಲ್ಲಿ ಪರಿಪೂರ್ಣ ನಾಯಕಿಯಾಗಿ ನಟಿಸಲು ತೆಲುಗಿನಲ್ಲಿ ಅವಕಾಶ ಸಿಗುತ್ತದೆ. ನಂತರ ಕನ್ನಡದಲ್ಲಿ ದೊಡ್ಡ ಬ್ರೇಕ್ ಅವರಿಗೆ ಸಿಗುತ್ತದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ಖುಷ್ಬು ಕೊಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸುತ್ತಾರೆ. ಅಲ್ಲದೇ ತಮಿಳುನಾಡಿನಲ್ಲಿ ಅವರ ಅಭಿಮಾನಿಗಳು ಇವರಿಗೆ ದೇವಸ್ಥಾನವನ್ನೇ ಕಟ್ಟಿಬಿಡುತ್ತಾರೆ.

 

ಹೀಗೆ ಅಪ್ಪನಿಂದ ಅವಮಾನಕ್ಕೊಳಗಾಗಿ, ಅತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ನಂತರ ಸಾಧನೆ ಮೂಖಾಂತರ ಅಪ್ಪನಿಗೆ ಉತ್ತರಿಸಿದ ಖುಷ್ಬು ಅವರ ದೈರ್ಯ ಮೆಚ್ಚಲೇ ಬೇಕು. ನೀವೂ ಕೂಡ ಖುಷ್ಬು ಅಭಿಮಾನಿಯಾಗಿದ್ದಾರೆ, ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.

LEAVE A REPLY

Please enter your comment!
Please enter your name here