ಕುರುಕ್ಷೇತ್ರ ಯುದ್ಧದ ನಂತರ ನಡೆದ ವಿಷಯಗಳು

0
556

ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಗಳಿಸಿ ಹಸ್ತಿನಾವತಿಯ ರಾಜರಾಗುತ್ತಾರೆ. ಯುಧಿಷ್ಠಿರ ಕಿರಿಟಾಧಿಕಾರಿಯಾಗಿ 36 ವರ್ಷಗಳ ಕಾಲ ಆಳ್ವಿಕೆ ಮಾಡುತ್ತಾನೆ. ಕೌರವರು ಸೋಲುತ್ತಾರೆ ಹಾಗೂ ಅವರ ತಾಯಿ ಗಾಂಧಾರಿ ತನ್ನ 101 ಜನ ಮಕ್ಕಳನ್ನು ಕಳೆದುಕೊಂಡು ಪಾಂಡವರು ಮತ್ತು ಯಾದವರು ನನ್ನಂತೆ ನೋವು ಅನುಭವಿಸಲಿ ಎಂದು ಶಪಿಸುತ್ತಾಳೆ. ಈ ಯುದ್ಧದ ನಂತರ ಬದುಕಿದ್ದು ಕೇವಲ 12 ಜನರು ಮಾತ್ರ ಅವರು ಯಾರೆಲ್ಲಾ ಎಂದರೆ, ಕೃಷ್ಣ, ಯುಯುತ್ಸು , ಅಶ್ವತ್ಥಾಮ, ಕೃಪಾಚಾರ್ಯ , ಯುಧಿಷ್ಠಿರ , ಅರ್ಜುನ, ನಕುಲ ಸಹದೇವ, ಕೃತವರ್ಮ ,ಸತ್ಯಕಿ , ವೃಷಕೇತು, ಭೀಮ.

ದ್ರೌಪದಿ ತನ್ನ ರಾಜ್ಯದಲ್ಲೊಂದು ಮಹಿಳಾ ಮಂಡಳಿಯನ್ನು ರಚಿಸುತ್ತಾಳೆ. ಯುದ್ಧದಲ್ಲಿ ಗಂಡಂದಿರನ್ನು ಕಳೆದುಕೊಂಡ ವಿಧವೆಯರನ್ನು ನೋಡಿಕೊಳ್ಳಲು ಮಾಡಿರುವ ಮಂದಿರ ಇದು ಅವರಿಗೆ ಅಧಿಕ ಬೆಂಬಲ ನೀಡಿ ಕಷ್ಟ ಸುಖಗಳನಲ್ಲಿ ನೆರವಾಗುತ್ತಿರುತ್ತಾರೆ.
ಅರ್ಜುನ ಯುದ್ದದ ನಂತರ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡು ಅಶಕ್ತನಾಗುತ್ತಾನೆ. ಧರ್ಮಯುದ್ಧದ ಅನಂತರ ಯಾವುದೇ ಯುದ್ಧದಲ್ಲಿ ಹೋರಾಡಲು ಅವನಲ್ಲಿ ಶಕ್ತಿ ಇರಲಿಲ್ಲ.

ಶ್ರೀಕೃಷ್ಣ ತನ್ನ ಪರಿವಾರವನ್ನು ಪ್ರಭಾಸ ಎಂಬ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಾನೆ. ಇವರ ಈ ಜಗಳದಲ್ಲಿ ಬೇಟೆಗಾರ ಬಂದು ಶ್ರೀಕೃಷ್ಣ ನಿಗೆ ಹೊಡೆಯುತ್ತ್ತಾನೆ. ಆಗ ಕೃಷ್ಣ ದೇಹತ್ಯಾಗ ಮಾಡುತ್ತಾನೆ.
ವಿಷ್ಣು ಆಗಿ ಜನ್ಮವನ್ನು ಪಡೆಯುತ್ತಾನೆ. ಕೃಷ್ಣ ಮೃತದೇಹ ತೊರೆದ ನಂತರ ವ್ಯಾಸ ಪಾಂಡವರಿಗೆ ನೀವು ನಿಮ್ಮ ಉದ್ದೇಶ ಸಂಪೂರ್ಣಗೊಂಡಿದೆ ಇನ್ನು ನೀವು ಹಿಮಾಲಯಕ್ಕೆ ಹೋಗಿ ಎಂದು ಹೇಳುತ್ತಾರೆ.

ಅವರು ಹೋಗುತ್ತಾರೆ , ಭೀಮಾ, ನಕುಲ, ಸಹದೇವ, ಅರ್ಜುನ, ದ್ರೌಪದಿ ಇವರು ಅವರವರ ಪಾಪದ ಕಾರಣ ಮರಣ ಹೊಂದಿದರು. ಯುಧಿಷ್ಠಿರ ಬದುಕುಳಿದನು.

ಪಾಂಡವರು ಅಸ್ತಿನಾವಾದಿಯನ್ನು ತೊರೆದ ನಂತರ ಕೌರವರ ದೊರೆ ಪರೀಕ್ಷಿತ್ ರಾಜನಾದನು ಇನ್ನು ಕೆಲವು ಉತ್ತರಾದಿಕಾರಿಗಳು ಬಂದರು.
-ಹರ್ಷಿತ ಎಚ್.ಬಿ

LEAVE A REPLY

Please enter your comment!
Please enter your name here