ಕುರುಕ್ಷೇತ್ರ ಚಿತ್ರದ ಟಿಕೆಟ್ ಕಂಪ್ಲೀಟ್ ಸೋಲ್ಡ್ ಔಟ್..!

0
110

ಕನ್ನಡ ಚಿತ್ರರಂಗದ ಮೊದಲ ಪೌರಾಣಿಕ ೩ಡಿ ಚಿತ್ರ ಕುರುಕ್ಷೇತ್ರವಾಗಿದ್ದು, ಚಾಲೆಜಿಂಗ್ ಸ್ಟಾರ್ ‘ದರ್ಶನ್’ ಅವರ ನಾಯಕತ್ವದಿಂದ ಚಿತ್ರಕ್ಕೆ ಇನ್ನಷ್ಟು ಮೆರುಗು ತಂದಿದೆ ಎನ್ನಬಹುದು. ಈ ಚಿತ್ರದಲ್ಲಿ ರವಿಚಂದ್ರನ್, ಮೇಘನಾ ರಾಜ್, ಹರಿಪ್ರಿಯಾ, ನಿಖೀಲ್ ಕುಮಾರಸ್ವಾಮಿ ಇನ್ನು ಮುಂತಾದ ನಟರು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಆಗಸ್ಟ್ ೦೯ ರಂದು ವರಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈಗಾಗಲೇ ರಿಲೀಸ್’ಗೆ ಕ್ಷಣಗಣನೆ ಆರಂಭವಾಗಿದೆ. ತಮ್ಮ ನೆಚ್ಚಿನ ‘ಡಿ ಬಾಸ್’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ದುರ್ಯೋಧನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎನ್ನಬಹುದು.

ಈಗಾಗಲೆ ಕುರುಕ್ಷೇತ್ರ ಚಿತ್ರ ರಾಜ್ಯದ ಎಲ್ಲ ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನ ಜೆಪಿ ನಗರದಲ್ಲಿರುವ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ೧೨ ಗಂಟೆಗೆ ಚಿತ್ರ ಪ್ರದರ್ಶನವಾಗಲಿದೆ. ಇದರ ಮಾಹಿತಿ ತಿಳಿದ ಅಭಿಮಾನಿಗಳು ಮುಂಚಿತವಾಗಿಯೇ ಸಿನಿಮಾದ ಟಿಕೆಟ್ ಖರೀದಿ ಮಾಡುವ ಮೂಲಕ ಖುಷಿಯಿಂದ ಸಂಭ್ರಮಿಸಿದ್ದಾರೆ. ಮಿಡ್-ನೈಟ್ ಟಿಕೆಟ್ ಕಂಪ್ಲೀಟ್ ಸೋಲ್ಡ್ ಔಟ್ ಆಗಿದ್ದು, ಬೆಳಗಿನ ಆಟದ ಟಿಕೆಟ್ ಕೂಡ ಸೋಲ್ಡ್ಔಟ್ ಆಗಿದೆ. ಇದನ್ನು ಗಮನಿಸಿ ಹೇಳುವುದಾದರೆ, ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಅಭಿಮಾನಿಗಳು ಮತ್ತೆ ನಿರೂಪಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here