ಕುರಿ ಪ್ರತಾಪ್‍ ಇನ್ನೊಂದು ರಹಸ್ಯ ಮುಖ ನೋಡಿದ್ರೆ ಬೆಚ್ಚಿ ಬೀಳ್ತಿರಾ?

0
682

ಕುರಿ ಪ್ರತಾಪ್‍ ಅವರ ಹೇಸರು ಕೇಳಿದ ಕೂಡಲೇ ನಿಮ್ಮ ಮುಖದಲ್ಲಿ ಸಣ್ಣದೊಂದು ನಗು ಕಾಣಿಸುತ್ತದೆ. ಏಕೆಂದರೆ ತನ್ನ ಅದ್ಭುತ ಕಾಮಿಡಿ ನಟನೆಯಿಂದ ಇಡೀ ರಾಜ್ಯದ ಜನರ ಹೃದಯ ಗೆದ್ದಿದ್ದಾರೆ ಕುರಿ ಪ್ರತಾಪ್‍.
ಕುರಿ ಪ್ರತಾಪ್ ಅವರು ಮೊದಲು ರಾಜ್ಯದ ಜನತೆಗೆ ಪರಿಚಯವಾಗಿದ್ದೇ ‘ಕುರಿ ಬಾಂಡ್‍’ ಎನ್ನುವ ಬಕ್ರ ಕಾರ್ಯಕ್ರಮದ ಮೂಲಕ. ಅನಂತರ ‘ಮಜಾ ಟಾಕೀಸ್‍’ಗೆ ಎಂಟ್ರಿ ಕೊಟ್ಟ ತಕ್ಷಣವೇ ರಾತ್ರೋ ರಾತ್ರಿ ಸ್ಟಾರ್‍ ಆಗಿಬಿಟ್ಟರು.
ಜನರಿಗೆ ಪ್ರತಾಪ್‍ ಅವರ ಕಾಮಿಡಿ ಮುಖ ಮಾತ್ರ ಪರಿಚಯವಿದೆ. ಆದರೆ ನಿಜ ಜೀವನದಲ್ಲಿ ಪ್ರತಾಪ್‍ ಅವರದ್ದು ತುಂಬಾ ಭಾವನಾತ್ಮಕ ಮನಸ್ಸು. ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡುವುದು, ತಪ್ಪು ದಾರಿಯಲ್ಲಿ ಸ್ನೇಹಿತರು ನಡೆಯುತ್ತಿದ್ದರೆ, ಅವರನ್ನು ಸರಿದಾರಿಗೆ ತರುತ್ತಾರೆ. ನಟ ದರ್ಶನ್‍ ಅವರಿಂದ ಈ ಗುಣವನ್ನು ಕಲಿತುಕೊಂಡೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇದಕ್ಕೆ ಲೇಟೆಸ್ಟ್‍ ಉದಾಹರಣೆ ಎಂದರೆ ಬಿಗ್‍ ಬಾಸ್‍ ಖ್ಯಾತಿಯ ಪ್ರಥಮ್‍. ಪ್ರಥಮ್‍ ಬಿಗ್‍ ಬಾಸ್‍ ನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ಅನಂತರ ಕೆಲ ಘಟನೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆಗ ಪ್ರಥಮ್‍ಗೆ ಬುದ್ಧಿ ಹೇಳಿ ಹಾಗೆ ಮಾಡಿಕೊಳ್ಳದಂತೆ ಮನವರಿಕೆ ಮಾಡಿಕೊಟ್ಟಿದ್ದರು.
ನೀನು ಒಂದು ವರ್ಷದ ಹಿಂದೆ ಏನಾಗಿದ್ದೆ ಎನ್ನುವುದನ್ನು ಯೋಚನೆ ಮಾಡು, ನಿನಗೆ ಈಗ ಸಿಕ್ಕರುವ ಸ್ಟಾರ್ ಪಟ್ಟ ಹಾಳುಮಾಡಿಕೊಳ್ಳಬೇಡ ಎಂದು ಪ್ರಥಮ್‍ಗೆ ಬುದ್ಧಿ ಹೇಳಿದ್ದರಂತೆ ಕುರಿ ಪ್ರತಾಪ್‍. ಇವರ ಮಾತುಗಳಿಂದ ಪ್ರಥಮ್‍ ಇಂದು ತುಂಬಾ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here