ಬಿಗ್ ಬಾಸ್ ಕಾರ್ಯಕ್ರಮ ಸ್ಕ್ರಿಪ್ಟೆಡ್ ಎಂದ ಕುರಿ ಮತ್ತು ಹರೀಶ್ !?

0
242

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆವೃತ್ತಿ ೭, ಈಗಾಗಲೇ ಯಶಸ್ವಿಯಾಗಿ ೧೦ ನೇ ವಾರದತ್ತ ಸಾಗುತ್ತಿದೆ, ಕಳೆದ ವಾರ ರಾಜು ತಾಳಿಕೋಟೆ ಅವರ ಎಲಿಮಿನೇಶನ್ ನಿಂದ ಭಾವುಕರಾಗಿದ್ದ ಮನೆಯ ಸದ್ಯಸರು, ಸದ್ಯ ತಣ್ಣಗಾಗಿ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಜೋಡಿಯಾಗಿ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ
ನೀಡುತ್ತಿದ್ದಾರೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಇದರ ನಡುವೆ ಬಿಗ್ ಬಾಸ್ ಒಪನ್ ನಾಮಿನೇಷನ್ ಟ್ವಿಸ್ಟ್ ನೀಡಿ ಎಲ್ಲರ ನಿದ್ದೆ ಗೆಡಿಸಿದ್ದರು.
ಇದೆಲ್ಲದರ ನಡುವೆ ಬಿಗ್ ಬಾಸ್ ಒಂದು ಸ್ಕ್ರಿಪ್ಟೆಡ್ ಮತ್ತು ಹೊರಗೆ ನಡೆಯುವ ವಿಷಯಗಳೆಲ್ಲ ಇವರಿಗೆ ಗುಪ್ತವಾಗಿ ತಿಳಿಸಿ ಕೊಡಲಾಗುತ್ತದೆ ಎಂದು ಅನೇಕ ಜನರು ಕಲ್ಪನೆ ಮಾಡಿಕೊಂಡಿದ್ದರು, ಈ ವಿಚಾರವನ್ನು ಕುರಿತು ಕುರಿ ಪ್ರತಾಪ್ ಮತ್ತು ಹರೀಶ್ ರಾಜ್ ಅವರು ದೊಡ್ಡದೊಂದು ಚರ್ಚೆಯನ್ನೇ ನಡೆಸಿದ್ದಾರೆ.. ಯಾವ ವಿಷಯ? ಮತ್ತು ಚರ್ಚೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಸಾಮಾಜಿಕ ಜಾಲ ತಾಣಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಒಂದು ಸ್ಕ್ರಿಪ್ಟೆಡ್ ಎಂದು ದೂರುತ್ತಲೇ ಇರುತ್ತಾರೆ.ಈ ಕುರಿತು ಪ್ರೇಕ್ಷಕರು ಕೂಡ ಆಗಾಗ ಪ್ರಶ್ನಿಸುತ್ತಲೇ ಇರುತ್ತಾರೆ.. ಇದೇ ವಿಷಯವನ್ನು ಕುರಿತು ಕುರಿ ಪ್ರತಾಪ್ ಅವರು ಇನ್ನಿತ್ತರ ಸದಸ್ಯರಾದ ದೀಪಿಕಾ, ಪ್ರಿಯಾಂಕಾ ಮತ್ತು ಹರೀಶ್ ರಾಜ್ ಅವರ ಜೊತೆ ಹಂಚಿಕೊಂಡಿದ್ದಾರೆ..ಬಿಗ್ ಬಾಸ್ ಮೊದಲನೇ ಸೀಸನ್ ಪ್ರಾರಂಭವಾದಾಗ ನಾನು ತಪ್ಪದೇ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆ , ನನಗೂ ಹೀಗೆ ಅನಿಸ್ತಾ ಇತ್ತು. ಎಲ್ಲಾ ಬರೆದಿರ್ತಾರೆ ಅದರ ಪ್ರಕಾರ ಮಾಡ್ತಾರೆ ಅಂತ. ಜಗಳ ಆಡಿ, ಸ್ವಲ್ಪ ಹೊತ್ತಿನ ನಂತರ ಏಕ್ ದಂ ಸ್ವಿಮ್ಮಿಂಗ್ ಪೂಲ್ ಹತ್ರ ಕೂತ್ಕೊಂಡು ಮಾತಾಡೋದನ್ನು ನೋಡಿದಾಗ ಇಂತಾ ಅನುಮಾನ ಬರ್ತಾ ಇತ್ತು ಎಂದಿದ್ದಾರೆ ಕುರಿ ಪ್ರತಾಪ್. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

ಇನ್ನು ನಮಗೆ ಗೊತ್ತಿರೋ ಅನೇಕರು ಸಹಾ ಬಿಗ್ ಬಾಸ್ ಮನೇಲಿ ಫೋನ್ ಎಲ್ಲಾ ಕೊಡ್ತಾರೆ ಅಂತ ಹೇಳಿದ್ರು ಎನ್ನುತ್ತಾರೆ. ಆದರೆ ಇಲ್ಲಿ ಯಾವುದೂ ಕೂಡಾ ಸ್ಕ್ರಿಪ್ಟ್ ಅಲ್ಲ ಅನ್ನೋದು ಒಳಗೆ ಬಂದವರಿಗೆ ಮಾತ್ರ ಗೊತ್ತಾಗುತ್ತೆ ಎಂದಿದ್ದಾರೆ. ಒಳಗೆ ಬಂದ ಮೇಲೆ ನಮಗೂ ಬೇರೆಯವರಿಗೂ ಟಚ್ ಕೂಡಾ ಇರಲ್ಲ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಈಗಲೂ ಜನಕ್ಕೆ ಅನುಮಾನ ಇದೆ. ಪ್ರೇಕ್ಷಕರು ಮೂರು ತಿಂಗಳು ಏನು ಹುಡುಗಾಟನಾ ಇರೋದು? ಅವರಿಗೆ ಫೋನು ಎಲ್ಲಾ ಕೊಡ್ತಾರೆ ಅಂತಾನೇ ಅನ್ಕೊಂಡಿದ್ದಾರೆ ಎಂದು ಕುರಿ ಹೇಳುವಾಗ ಹರೀಶ್ ರಾಜ್ ಅವರ ಮಾತಿಗೆ ಬೆಂಬಲ ನೀಡುತ್ತಾ, ನಾವು ಬಂದಿರೋರ್ಗೆ ಮಾತ್ರ ಗೊತ್ತಾಗುತ್ತೆ ಇಲ್ಲಿ ಏನು ನಡೆಯುತ್ತೆ ಎಂದಿದ್ದಾರೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

LEAVE A REPLY

Please enter your comment!
Please enter your name here