ಸಿಂಗಾಪೂರ್ ನಲ್ಲಿ ಮಾಜಿ ಸಿ.ಎಂ !

0
291

ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಗೋವಾದಲ್ಲಿ ತನ್ನ ಹೆಂಡತಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಆಚರಿಸಿಕೊಂಡಿದ್ದರು‌. ಇದೀಗಾ ಹೊಸ ವರ್ಷದ ಆಚರಣೆ ಮಾಡಲು ಸಿಂಗಾಪುರ್ ಗೆ ತೆರಳಲಿದ್ದಾರೆ.

 

 

ಅದೇನೋ ಪಾ.. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಫಾರಿನ್ ಟ್ರಿಪ್ ಗೂ ಏನೋ ನಂಟು ಅನಿಸುತ್ತದೆ. ಅದರಲ್ಲೂ ಅವರಿಗೆ ಸಿಂಗಾಪುರ್ ಎಂದರೆ ಬಹಳ ಇಷ್ಟ.! ಸಮಯ ಸಿಕ್ಕಾಗಲೆಲ್ಲಾ ಸಿಂಗಪೂರ್ ಗೆ ತೆರಳಿ ವಿಶ್ರಾಂತಿ ತೆಗೆದುಕೊಂಡು ನಂತರ ವಾಪಸ್ಸಾಗುತ್ತಾರೆ.

 

 

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಉಪ ಚುನಾವಣೆಯ ಸತತ ಸೋಲಿನಿಂದ ಕುಗ್ಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ ಅವರು ಕೊಂಚ ರಿಲ್ಯಾಕ್ಸ್ ಮಾಡಿಕೊಂಡು ಹೊಸ ವರ್ಷವನ್ನು ಸಿಂಗಾಪುರ್ ನಲ್ಲಿ ಆಚರಿಸಲು ಇಂದು ರಾತ್ರಿ ಪ್ರಯಾಣ ಬೆಳೆಸಲಿದ್ದಾರೆ.

 

 

ಪಕ್ಷ ಸಂಘಟನೆ, ರಾಜಕೀಯವಾಗಿ ಹಿನ್ನೆಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಹೊಸ ವರ್ಷ ಆಚರಿಸಿಕೊಂಡು ಹೊಸ ಉಲ್ಲಾಸದೊಂದಿಗೆ ಕುಮಾರಸ್ವಾಮಿ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here