ಡಿಕೆಶಿ ಪುತ್ರಿ ಐಶ್ವರ್ಯಗೆ ಸಮನ್ಸ್ ಕುಮಾರಸ್ವಾಮಿ ಏನಂದ್ರು ಗೊತ್ತಾ..?!

0
1541

ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲೇ ಇದೀಗ ಇಡಿ ಅಧಿಕಾರಿಗಳ ಕಣ್ಣು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮೇಲೆ ನೆಟ್ಟಿದೆ. ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿ ಐಶ್ವರ್ಯ ಡಿಕೆಶಿ ಹೆಸರಿನಲ್ಲಿದೆ. ಹೀಗಾಗಿ ಈ ಆಸ್ತಿಗಳ ಆದಾಯದ ಮೂಲವನ್ನು ಇಡಿ ಅಧಿಕಾರಿಗಳು ಬೆನ್ನತ್ತಿದ್ದಾರೆ. ಹೀಗಾಗಿಯೇ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದೆ.

ಇನ್ನು ಡಿಕೆಶಿ ಪುತ್ರಿ ಐಶ್ವರ್ಯಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ಗೆ ವಿರೋಧ ವ್ಯಕ್ತಪಡಿಸಿದರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು “ಇಷ್ಟೊಂದು ತರಾತುರಿಯಾಗಿ ಡಿಕೆಶಿ ಅವರ ಪುತ್ರಿಗೆ ಸಮನ್ಸ್ ನೀಡುವ ಅಗತ್ಯ ಇರಲಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿರುವ ಬಗ್ಗೆ ಗಮನವಿಲ್ಲ. ಆದರೆ ಕೇವಲ ಒಂದು ಕೇಸ್ ಇಟ್ಟುಕೊಂಡು ಅವರ ಇಡೀ ಕುಟುಂಬವನ್ನು ವಿಚಾರಣೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಲು ಹೊರಟ್ಟಿದ್ದಾರೆ. ಡಿಕೆಶಿ ಕುಟುಂಬ ಸದಸ್ಯರಿಗೆ ಸಮನ್ಸ್ ನೀಡಿದ್ದರ ಹಿಂದೆ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ” ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಇದೇ ವೇಳೆ ರಾಜ್ಯದಲ್ಲಿ ಜಾರಿಯಾಗಿರುವ ಮೋಟಾರ್ ವಾಹನ ಕಾಯ್ದೆಯನ್ನು ಟೀಕಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು “ಬಿಜೆಪಿಯಲ್ಲಿರುವವರಿಗೆ ಗೊತ್ತು ಗುರಿಯಿಲ್ಲ. ಸಾಮಾನ್ಯ ಜನರಿಗೆ ಈ ಬಿಜೆಪಿ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಈ ಸರ್ಕಾರದ ಆಯಸ್ಸು ಕೆಲವೇ ತಿಂಗಳು ಮಾತ್ರ. ನಂತರ ಸರ್ಕಾರ ಬಿದ್ದು ಹೋಗುತ್ತದೆ. ಇನ್ನು ನಾನೆಂದು ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ಎಲ್ಲರನ್ನೂ ಬಹುವಚನದಿಂದಲೇ ಮಾತನಾಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ ಎಂಬ ಅರಿವು ನನಗಿದೆ ಎಂದರು.

LEAVE A REPLY

Please enter your comment!
Please enter your name here