ಟೈಮ್ ಪಾಸ್ ಮಾಡ್ಬೇಡಿ ಸರ್ಕಾರ ನಡೆಸಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಚಾಟಿ ಬೀಸಿದ್ದಾರೆ. ಬೀದರ್ ನಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ಅವರು ಒಂದು ದಿನಾನೂ ವೇಸ್ಟ್ ಆಗಬಾರದು,ರಾಜ್ಯದಲ್ಲಿ ಬರಗಾಲ ಪ್ರವಾಹ ಇದೆ. ಹೀಗಾಗಿ ಟೈಮ್ ವೇಸ್ಟ್ ಮಾಡುದ್ರೆ ಚುನಾವಣೆಗೆ ಹೋಗೋಣ.ರೈತರು ಸಂಕಷ್ಟದಲ್ಲಿದ್ದಾರೆ.ರೈತರ ಬಾಕಿ ಹಣ ಬಿಡುಗಡೆ ಮಾಡಬೇಕು. ಪ್ರವಾಹದಿಂದ ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವಂತಹ ಕೆಲಸ ಸರ್ಕಾರ ಮಾಡುತ್ತಿಲ್ಲ, 120 ಸ್ಥಾನಗಳನ್ನು ಇಟ್ಟುಕೊಂಡು ನಾವೇ ಸರ್ಕಾರ ನಡೆಸಲು ಆಗಲಿಲ್ಲ.ಇನ್ನು ಬಿಜೆಪಿ 105 ಇಟ್ಟುಕೊಂಡು ಹೇಗೆ ನಡೆಸುತ್ತಾರೆ? ಕುಮಾರಸ್ವಾಮಿ ಅವರ ಆಡಳಿತ ದೇಶಕ್ಕೆ ಮಾದರಿ.ಎಂದು ಬಂಡೆಪ್ಪ ಕಾಶೆಂಪೂರ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಒಂದೆಡೆ ನೆರೆ ಮತ್ತೊಂದೆಡೆ ಬರ ಇರುವಾಗ ಬಿಜೆಪಿ ಯವರು ಡಿಸಿಎಮ್ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಕಿತ್ತಾಡುತ್ತಿರುವುದಕ್ಕೆ ಜೆ.ಡಿ.ಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಕಿಡಿ ಕಾರಿದ್ದಾರೆ.
