‘ಕೃಷ್ಣೆ’ ಎಂಬ ಉತ್ತರ ಕರ್ನಾಟಕದ ಒಡಲಾಳ..!

0
263

ಕೃಷ್ಣಾ ನದಿ. ಇದು ಉತ್ತರ ಕರ್ನಾಟಕದ ಜೀವ ನದಿ. ಮಹಾರಾಷ್ಟ್ರ ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಈ ನದಿ ವಿಸ್ತಾರವಾಗಿ ಹರಿಯುತ್ತದೆ. ಇನ್ನು ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ‘ಹಿರಿ ಹೊಳಿ’ಯಂತಲು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. 1962ರಲ್ಲಿ ಭಾರತದ ಪ್ರಧಾನ ಮಂತ್ರಿಯಾದ ಶ್ರೀ ಲಾಲ್ ಬಹಾದ್ದೂರ ಶಾಸ್ತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು.

ಇನ್ನು ಕೃಷ್ಣಾ ನದಿಯೂ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳು ಕೃಷ್ಣಾ ನದಿಯ ಉಪನದಿಗಳಾಗಿವೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಹತ್ತಿರ ಲಾಲ್ ಬಹಾದ್ದೂರ್ ಶಾಸ್ತ್ರೀ ಅಣೆಕಟ್ಟು ನಿರ್ಮಿಸಲಾಗಿದೆ. 21 ಆಗಸ್ಟ್ 2006ರಂದು ಭಾರತದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ‘ಲಾಲ ಬಹಾದ್ದೂರ ಶಾಸ್ತ್ರಿ’ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಇನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಾಚಿಹಾಳ – ಸಿದ್ದಾಪುರ ಹತ್ತಿರ ಬಸವ ಸಾಗರ ಆಣೆಕಟ್ಟುನ್ನು ಈ ನದಿಗೆ ಕಟ್ಟಲಾಗಿದೆ. ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನ ವ್ಯಾಪ್ತಿ 136 ಕಿ.ಮೀ ಆಗಿದೆ. 201 ಗ್ರಾಮಗಳು ಹಾಗು ಬಾಗಲಕೋಟೆಯ ಬಹುತೇಕ ಭಾಗ ಈ ಆಣೆಕಟ್ಟಿನಿಂದ ಮುಳುಗಡೆಯಾಗಿವೆ.

ಇನ್ನು ಮಲಪ್ರಭಾ ನದಿಯು ಕೃಷ್ಣಾ ನದಿಯ ಉಪನದಿ. ಈ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ 16 ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ 792 ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. 304 ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು ಕೂಡಲ ಸಂಗಮದಲ್ಲಿ ಕೂಡುತ್ತದೆ. ಬೆಣ್ಣಿಹಳ್ಳ, ಹಿರೆಹಳ್ಳ, ತುಪರಿಹಳ್ಳ ಹಾಗು ತಾಸಹಳ್ಳಗಳು ಮಲಪ್ರಭಾ ನದಿಯನ್ನು ಸಂಗಮಿಸುವ ಕೆಲವು ಪ್ರಮುಖ ಹಳ್ಳಗಳು.

ಘಟಪ್ರಭಾ ಕೃಷ್ಣಾ ನದಿಯ ಉಪನದಿ. ಈ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ 884 ಮೀಟರ ಎತ್ತರದಲ್ಲಿ ಜನಿಸುತ್ತದೆ. 283 ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ 35 ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಹಿರಣ್ಯಕೇಶಿ ಹಾಗು ಮಾಕರ್ಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಭೀಮಾ ನದಿಯೂ ಕೃಷ್ಣಾ ನದಿಯ ಉಪನದಿಯಾಗಿದೆ. ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ವಿಜಯಪುರ ಜಿಲ್ಲೆಯ ದೆಸೂರ ಎಂಬಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.

LEAVE A REPLY

Please enter your comment!
Please enter your name here