ಕೊಪ್ಪಳ ಜಿಲ್ಲೆಯ ಟ್ರಾಫಿಕ್ ಪೊಲೀಸರನ್ನು ಜನಸಾಮಾನ್ಯರು ತರಾಟೆಗೆ ತೆಗೆದುಕೊಳ್ಳಲು ಕಾರಣವೇನು..?

0
268

ಜನಸಾಮಾನ್ಯರು ಟ್ರಾಫಿಕ್ ಪೊಲೀಸರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ನೀವು ಅಂದುಕೊಂಡಿರಬಹುದು ಟ್ರಾಫಿಕ್ ಪೊಲೀಸರು ಹಾಕುತ್ತಿರುವ ದಂಡವನ್ನು ವಿರೋಧಿಸಿ ಮತ್ತು ದಂಡದ ಮೊತ್ತವನ್ನು ವಿರೋಧಿಸಿ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿರಬಹುದು ಎಂದು. ಆದರೆ ವಿಷಯ ಅದಲ್ಲ.? ಹೌದು, ಸಂಚಾರ ನಿಯಮ ಜನಸಾಮಾನ್ಯರಿಗೂ ಹಾಗೂ ರಾಜಕಾರಣಿಗಳಿಗೂ ಒಂದೇ ಆಗಿರಬೇಕು. ಆದರೆ ಕೊಪ್ಪಳ ಟ್ರಾಫಿಕ್ ಪೊಲೀಸರು ರಾಜಕಾರಣಿಗಳಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯವನ್ನು ತೋರಿರುವುದು ಜನರ ಕೋಪಕ್ಕೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಶಾಸಕ, ನಳಿನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾರಿನಲ್ಲಿ ಆಗಮಿಸಿದ್ದು, ಸಂಚಾರಿ ನಿಯಮ ಪಾಲಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಡಿಸಿಎಂ ಲಕ್ಷ್ಮಣ್ ಸವದಿ ಅವರು ಕಾರ್ ಸೀಟ್ ಬೆಲ್ಟ್ ಧರಿಸದೆ ಇದ್ದುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ ಗಪ್ ಚುಪ್ ಎಂದು ಮೌನ ತಾಳಿದ್ದು, ಎಷ್ಟರ ಮಟ್ಟಿಗೆ ಸರಿ.! ಸೀಟ್ ಬೆಲ್ಟ್ ಧರಿಸದೆ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಡಿಸಿ ಹಾಗೂ ಎಸ್ಪಿ ಹೂಗುಚ್ಛ ನೀಡಿ ಸ್ವಾಗತ ಮಾಡಿಕೊಂಡಿದ್ದಾರೆ.

ಸಂಚಾರಿ ನಿಯಮದ ಪ್ರಕಾರ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ಒಂದು ಸಾವಿರ ರುಪಾಯಿ ದಂಡ ವಿಧಿಸಬೇಕಾಗುತ್ತದೆ. ಆದರೆ ಸ್ಥಳದಲ್ಲಿದ್ದ ಪೊಲೀಸರು ಯಾವ ರೀತಿಯ ಕ್ರಮ ತೋರದೆ ಸುಮ್ಮನೆ ನಿಂತಿರುವುದನ್ನು ಕಂಡ ಜನ ಸಾಮಾನ್ಯರು ಟ್ರಾಫಿಕ್ ಪೊಲೀಸರ ವಿರುದ್ಧ ಅಸಮಾಧಾನ ತೋರಿದ್ದಾರೆ. ಈ ರೀತಿಯ ಪಕ್ಷ ಪಾತ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಇವರು ರವಾನೆ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here