ನಟಿ ಜೊತೆಗಿನ ಕಿಸ್ಸಿಂಗ್ ಫೋಟೋ ಲೀಕ್ ಆಗಿ ಲವ್ ಬ್ರೇಕಪ್, ತುಟಿ ಬಿಚ್ಚಿದ ನಟ

0
837

ಕಾಲಿವುಡ್‌ ನಟ ಸಿಂಬು ಹಾಗೂ ನಯನತಾರಾ ಮಾಜಿ ಪ್ರೇಮಿಗಳು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಪ್ರೇಮದ ಕಡಲಲ್ಲಿ ತೇಲುತ್ತಿದ್ದ ಈ ಜೋಡಿ ಇದ್ದಕ್ಕಿದ್ದಂತೆ ಬ್ರೇಕಪ್ ಮಾಡಿಕೊಂಡಿತ್ತು. ಇದಕ್ಕೆ ಕಾರಣ ಆ ಒಂದು ಫೋಟೋವಂತೆ. ಹೌದು, ಸಿಂಬು ಹಾಗೂ ನಯನತಾರಾ ಅವರ ಲಿಪ್​ಲಾಕ್​ ಫೋಟೋ ಲೀಕ್​ ಆಗಿ, ದೊಡ್ಡ ಕಾಂಟ್ರವರ್ಸಿಯನ್ನೇ ಹುಟ್ಟು ಹಾಕ್ಕಿತ್ತು. ಅವರ ಸಂಬಂಧ ಮುರಿದು ಬೀಳಲು ಇದೇ ಫೋಟೋ ಬಹುದೊಡ್ಡ ಕಾರಣ ಎಂದು ಹೇಳಲಾಗಿತ್ತು.

ಈ ಪ್ರೇಮ ಪಕ್ಷಿಗಳ ರೆಕ್ಕೆ ಕತ್ತರಿಸಿದ್ದ ಆ ಫೋಟೋ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಸ್ವತಃ ನಟ ಸಿಂಬು ಅವರೇ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹೊಸ ಕ್ಯಾಮರಾ ಖರೀದಿಸಿದ್ದ ಸಿಂಬು, ದುಬೈನಲ್ಲಿ ತನ್ನ ಪ್ರೇಯಸಿಗೆ ಮುತ್ತು ಕೊಡುವ ಫೋಟೋ ಅದರಲ್ಲಿ ಸೆರೆ ಹಿಡಿದಿದ್ದರಂತೆ. ಆದರೆ, ಅದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ಹೇಗೆ ಎಂಬುದು ಅವರಿಗೆ ಇದುವರೆಗೂ ತಿಳಿದಿಲ್ವಂತೆ. ಈ ಘಟನೆಯಿಂದ ಆಕೆ ತುಂಬ ನೊಂದುಕೊಂಡಿದ್ದಳು. ಆ ಫೋಟೋ ನಮ್ಮ ಪ್ರೀತಿಗೆ ಅಂತ್ಯ ಹಾಡಿತು ಎಂದು ಸಿಂಬು ಇತ್ತೀಚಿಗೆ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here