ಸದ್ಯ ಶ್ರಾವಣ ಮಾಸದ ಆರಂಭದಲ್ಲಿ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಜಲಾಘಾತ ಆಗಿದೆ. ಇನ್ನು ಶ್ರಾವಣ ಮಾಸದ ಕೊನೆಯವರೆಗೂ ಹಾಗೂ ಕಾರ್ತಿಕ ಮಾಸದ ನಡುವೆಯೂ ಆಗಾಗ ದೊಡ್ಡ ಮಟ್ಟದ ಪ್ರವಾಹ ಬರುವ ಸಂಭವವಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮುಂದಿನ 3 ತಿಂಗಳವರೆಗೆ ರಾಜ್ಯಕ್ಕೆ ಜಲ ಕಂಟಕ ಇದೆ. ಇದೇ ತಿಂಗಳಲ್ಲಿ ಮತ್ತೊಂದು ಭೀಕರ ಪ್ರವಾಹ ಬರುತ್ತದೆ ಎನ್ನುವ ಮೂಲಕ ಮತ್ತೊಂದು ಜಲ ಸಂಕಟದ ಭವಿಷ್ಯ ನುಡಿದಿದ್ದಾರೆ. ಇನ್ನು ಈ ವರ್ಷ ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತಗಳು ಸಂಭವಿಸುತ್ತವೆ. ಈಗ ಜಲ ಆಘಾತವಾಗುತ್ತಿದೆ. ಮುಂದಿನ ದಿನಗಗಳಲ್ಲಿ ಭೂ ಆಘಾತಗಳಾಗುತ್ತವೆ ಉಂಟಾಗುತ್ತವೆ. ಇನ್ನು ಜಗತ್ತು ಕಂಡರಿಯದ ವಾಯು ಆಘಾತವೊಂದು ಆಗುವ ಲಕ್ಷಣ ಇದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾ