ಶೀಘ್ರದಲ್ಲೇ ಬಿಎಸ್ವೈ ಸರ್ಕಾರ ಪತನವಾಗಲಿದೆ ಎಂದು ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿಯಲು ಕಾರಣವೇನು..?

0
715

ಬಿಎಸ್ವೈ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇದರಿಂದ ಬಿಎಸ್ವೈ ಸರ್ಕಾರಕ್ಕೆ ಆತಂಕದ ಭೀತಿ ಎದುರಾಗಿದೆ ಎನ್ನಬಹುದು. ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮ ಭವಿಷ್ಯವನ್ನು ಖಚಿತಪಡಿಸಿದ್ದಾರೆ. ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಕೋಡಿಹಳ್ಳಿ ಶ್ರೀಗಳು ಯಾರ ಸರ್ಕಾರದ ಆಡಳಿತದ ಬಗ್ಗೆಯೂ ನಾನು ಹೇಳುವುದಿಲ್ಲ ಎಂದು ಹೇಳಿದರು. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ನುಡಿದಿದ್ದ ಭವಿಷ್ಯದ ಪ್ರಕಾರ ಹೇಳುವುದಾದರೆ, ಒಂದು ವರ್ಷ ಹದಿನೆಂಟು ತಿಂಗಳಲ್ಲಿ ಮತ್ತೆ ಮತ ಬೇಡಲಿದ್ದಾರೆ.

ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೂಡ ಕೇವಲ ಒಂದು ವರ್ಷ ಹದಿನೆಂಟು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು. ಅದಲ್ಲದೆ ಚುನಾವಣೆ ನಡೆದು ಒಂದು ವರ್ಷ ಹದಿನಾಲ್ಕು ತಿಂಗಳು ಕಳೆದಿದ್ದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೋಡಿಹಳ್ಳಿ ಶ್ರೀಗಳು ನುಡಿದಿರುವ ಭವಿಷ್ಯ ಬಿಎಸ್ವೈ ಸರಕಾರದಲ್ಲಿ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿದೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here